Wednesday 14th, May 2025
canara news

ಐಐಟಿಸಿ-ಬಿ.ಆರ್ ಹೊಟೇಲು ಸಮೂಹದಿಂದ ಶ್ರೀಕೃಷ್ಣಾಷ್ಟಮಿ ಕಾರ್ಯಕ್ರಮ

Published On : 05 Sep 2018   |  Reported By : Rons Bantwal


ಗಾನಗಂಧರ್ವ ವಿದ್ಯಾಭೂಷಣ ಬಳಗದಿಂದ ಹರಿದಾಸ ಭಕ್ತಿಸಂಗೀತ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ,: ಇಂಟರ್‍ನ್ಯಾಶನಲ್ ಇನ್‍ಸ್ಟಿಟ್ಯೂಟ್ ಟ್ರೇನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯ ಪ್ರಫುಲ್ಲಾ ಎಸ್.ಕೆ ಉರ್ವಾಳ್ ಮತ್ತು ಬಿ.ಆರ್ ಹೊಟೇಲು ಸಮೂಹದ ಚಂಚಲ ಬಿ.ಆರ್ ಶೆಟ್ಟಿ ಪರಿವಾರವು ಪೇಜಾವರ ಮಠ ಮುಂಬಯಿ ಶಾಖೆಯ ಸಹಯೋಗದೊಂದಿಗೆ ಶ್ರೀಕೃಷ್ಣಾಷ್ಟಮಿ ಪ್ರಯುಕ್ತ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅನುಗ್ರಹಗಳೊಂದಿಗೆ ಇಂದಿಲ್ಲಿ ಸೋಮವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಗಾನಗಂಧರ್ವ ಬಿರುದಾಂಕಿಕ ಶ್ರೀ (ಡಾ|) ವಿದ್ಯಾಭೂಷಣ ಬಳಗದ ಭಕ್ತಿಗಾನಸುಧೆ ಸಂಗೀತ ಕಾರ್ಯಕ್ರಮ ಪ್ರಸ್ತುತ ಪಡಿಸಿದರು.

ಧರ್ಮಾರ್ಥವಾಗಿ ನಡೆಸಲ್ಪಟ್ಟ ಭಕ್ತ್ತಿ ಸÀಂಗೀತ ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾನಿಧಿ ವಿದ್ಯಾಭೂಷಣ ಬಳಗವು ಹರಿದಾಸ ಸಾಹಿತ್ಯದ ಭಕ್ತಿಗಾನಸುಧೆ ಪ್ರಸ್ತುತ ಪಡಿಸಿದರು. ಎಂ.ಆರ್ ಸಾಯಿನಾಥ್ (ಮೃದಂಗ), ವಿ.ಶೇಖರ್ (ಘಟಾಂ) ಮತ್ತು ಎಸ್.ಪ್ರದೇಶ್ ಆಚಾರ್ಯ (ವಾಯೋಲಿನ್) ಸಂಗೀತ ವಾದನ ಸಾಧÀನಗಳಲ್ಲಿ ಸಹಕರಿಸಿದರು. ಕಾರ್ಯಕ್ರಮದ ಪ್ರಾಯೋಜಕರುಗಳಾದ ಬಿ.ಆರ್ ಹೊಟೇಲು ಸಮೂಹದ ಆಡಳಿತ ನಿರ್ದೇಶಕ ಬಿ.ಆರ್ ಶೆಟ್ಟಿ, ಐಐಟಿಸಿ ಸಂಸ್ಥೆಯ ನಿರ್ದೇಶಕ ವಿಕ್ರಾಂತ್ ಉರ್ವಾಳ್ ಸರ್ವ ಕಲಾಕಾರರಿಗೆ ಪುಪ್ಫಗುಪ್ಚಗಳನ್ನಿತ್ತು ಗೌರವಿಸಿದರು.

ಈ ಸಂದರ್ಭದಲ್ಲಿ ವಿದ್ವಾನ್ ಎಸ್.ಎನ್ ಉಡುಪ, ವಿದ್ವಾನ್ ಅರವಿಂದ ಬನ್ನಿಂತ್ತಾಯ, ಉದ್ಯಮಿಗಳಾದ ಅನೂಪ್ ಶೆಟ್ಟಿ, ಸುಧೀರ್ ಆರ್.ಎಲ್ ಶೆಟ್ಟಿ, ರವಿ ಸುವರ್ಣ ಘಾಟ್ಕೋಪರ್, ಮುರಳೀ ಭಟ್ ಡೊಂಬಿವಿಲಿ, ಸಂಜಯ್ ಮಿಸ್ತ್ರಿ, ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಅಧ್ಯಕ್ಷ ಡಾ| ಎ.ಎಸ್ ರಾವ್, ಗೌರವ ಕಾರ್ಯದರ್ಶಿ ಬಿ.ಆರ್ ಗುರುಮೂರ್ತಿ, ಎಂ.ನರೇಂದ್ರ, ಶೇಖರ್ ಸಸಿಹಿತ್ಲು,ಶ್ರೀಧರ್ ರಾವ್ ಜೋಕಟ್ಟೆ, ಪದ್ಮನಾಭ ಸಸಿಹಿತ್ಲು, ಪೇಜಾವರ ಮಠದ ಮುಂಬಯಿ ಶಾಖಾಧಿüಕಾರಿಗಳಾದ ಶ್ರೀಹರಿ ಭಟ್, ನಿರಂಜನ ಜೆ.ಗೋಗಟೆ ಮತ್ತಿತರರು ಹಾಜರಿದ್ದರು.

ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಆಯೋಜಿಸಲಾಗಿದ್ದ ಕೃಷ್ಣವೇಷ ಸ್ಪರ್ಧಾ ಪುಟಾಣಿಗಳಿಗೆ ವಿದ್ಯಾಭೂಷಣರು ಬಹುಮಾನ ಪ್ರದಾನಿಸಿ ಅನುಗ್ರಹಿಸಿದರು. ಕು| ಅಧಿತಿ ರಾಮದಾಸ್ ರೆಂಜಾಳ ಮತ್ತು ಕು| ಶ್ರೇಯಾ ಹರಿ ಭಟ್ ರಾಧಾಕೃಷ್ಣರ ನೃತ್ಯ ಪ್ರದರ್ಶಿಸಿದರು. ಪೇಜಾವರ ಮಠದ ಮುಖ್ಯ ವ್ಯವಸ್ಥಾಪಕ ರಾಮದಾಸ ಉಪಾಧ್ಯಾಯ ರೆಂಜಾಳ ಸ್ವಾಗತಿಸಿ ಪ್ರಾಸ್ತವನೆಗೈದು ಕಾರ್ಯಕ್ರಮ ನಿರೂಪಿಸಿದರು. ಮಠದ ವ್ಯವಸ್ಥಾಪಕ ಪ್ರಕಾಶ್ ಆಚಾರ್ಯ ರಾಮಕುಂಜ ಅವರು ವಿದ್ಯಾಭೂಷಣ ಅವರಿಗೆ ಪುಷ್ಫಗುಪ್ಚವಿತ್ತ ಗೌರವಿಸಿ ಸರ್ವರಿಗೂ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here