ಪ್ರಶಸ್ತಿಗೆ ಮುಡಿಗೇರಿಸಿದ ಶಂಕರ್ ಶೆಟ್ಟಿ ವಿರಾರ್-ಹರೀಶ್ ಎನ್.ಶೆಟ್ಟಿ-ಚಂದ್ರಶೇಖರ ಬೆಳ್ಚಡ
ಮುಂಬಯಿ, ಸೆ.11: ಗ್ಲೋಬಲ್ ಪೀಸ್ ಫೌಂಡೇಶನ್ ಸಂಸ್ಥೆ ಹಾಗೂ ಕಾವೇರಿ ಕನ್ನಡ ಸಂಘ ಮತ್ತು ಇಂಟರ್‍ನೇಶನಲ್ ಕಲ್ಚರಲ್ ಫೆಸ್ಟ್ (ಐಸಿಎಫ್) ಜೊತೆಗೂಡಿ ಕಳೆದ ಶುಕ್ರವಾರ ಅಮೇರಿಕಾದ ವಾಷಿಂಟನ್ ಡಿಸಿ ಅಲ್ಲಿನ ಚಾಂಟಿಲಿನಲ್ಲಿ 18ನೇ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಂಭ್ರಮಿಸಿದವು ಜೊತೆಗೆ ಅಂತಾರಾಷ್ಟ್ರೀಯ ವರ್ಷದ ವ್ಯಕ್ತಿ 2018 ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆಯೋಜಿಸಿತ್ತು.
ಕಾರ್ಯಕ್ರಮದಲ್ಲಿ ಮುಂಬಯಿ ಮಹಾನಗರದಲ್ಲಿನ ತುಳುಕನ್ನಡಿಗ ಸಾಧಕರೂ, ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳ ಮುಂದಾಳುಗಳಾದ ವಿೂರಾ-ಡಹಾಣು ಬಂಟ್ಸ್ ಸಂಸ್ಥೆಯ ಗೌರವಾಧ್ಯಕ್ಷ, ರೈಲ್ವೇ ಯಾತ್ರಿ ಸಂಘ ಮುಂಬಯಿ ಅಧ್ಯಕ್ಷ ಶಂಕರ್ ಬಿ.ಶೆಟ್ಟಿ ವಿರಾರ್, ಮಲಾಡ್ ಕನ್ನಡ ಸಂಘದ ಅಧ್ಯಕ್ಷ ಹರೀಶ್ ಎನ್.ಶೆಟ್ಟಿ ಮತ್ತು ತೀಯಾ ಸಮಾಜ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಆರ್.ಬೆಳ್ಚಡ ಅವರಿಗೆ `ಇಂಟರ್‍ನೇಶನಲ್ ಮ್ಯಾನ್ ಆಫ್ ದ ಈಯರ್' ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಸುಭೋದ್ ಕೋಪರ್ಡೆ, ಐಸಿಎಫ್ ಅಧ್ಯಕ್ಷ ಮಂಜುನಾಥ್ ಸಾಗರ್, ಗ್ಲೋಬಲ್ ಪೀಸ್ ಫೌಂಡೇಶನ್ ಕಾರ್ಯದರ್ಶಿ ಪೆÇ್ರ|ಎಂ.ಬಿ ಕುದರಿ, ಸುಪ್ರಿಯಾ ಸವಲ್ಗ್ ತಂಝಾನಿಯಾ, ಎಸ್.ಎಸ್ ನಾಯಕ್ ಅತಿಥಿüಗಣ್ಯರಾಗಿದ್ದು, ಪುರಸ್ಕೃತರಿಗೆ ಶಾಲು ಹೊದಿಸಿ ಸ್ಮರಣಿಕೆ, ಪ್ರಶಸ್ತಿಪತ್ರ ಪ್ರದಾನಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ರತಿ ಶಂಕರ್ ಶೆಟ್ಟಿ, ವನಿತಾ ಹರೀಶ್ ಶೆಟ್ಟಿ, ದಿವಿಜಾ ಚಂದ್ರಶೇಖರ್, ರಿಸರ್ವೇಶನ್ ಚಲನಚಿತ್ರದ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ ಸೇರಿದತೆ ಅನೇಕ ಗಣ್ಯರು ಉಪಸ್ಥಿತರಿದ್ದು ಪುರಸ್ಕೃತರಿಗೆ ಅಭಿನಂದಿಸಿದರು.