Friday 19th, April 2024
canara news

ಡೊಂಬಿವಿಲಿಯಲ್ಲಿ ಭಂಡಾರಿ ಸೇವಾ ಸಮಿತಿ ನಡೆಸಿದ ಆರೋಗ್ಯ ಮಾಹಿತಿ-ಮಾಗ೯ದಶ೯ನ ಶಿಬಿರ

Published On : 12 Sep 2018   |  Reported By : Rons Bantwal


ಮುಂಬಯಿ, ಸೆ.11: ಭಂಡಾರಿ ಸೇವಾ ಸಮಿತಿ ಮುಂಬಯಿ ಸಂಸ್ಥೆಯು ಇಂದಿಲ್ಲಿ ಶನಿವಾರ ಸಂಜೆ ಡೊಂಬಿವಿಲಿ ಪೂವ೯ದ ರಘುವೀರ ನಗರದ ರೋಟರಿ ಸೇವಾ ಕೇಂದ್ರದ ಆರ್‍ಎಸ್‍ಕೆ ಸಭಾಗೃಹದಲ್ಲಿ ಆರೋಗ್ಯ ಮಾಹಿತಿ ಮತ್ತು ಮಾಗ೯ದಶ೯ನ ಶಿಬಿರ ಆಯೋಜಿಸಿದ್ದು, ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ಹಾಗೂ ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ಶೇಖರ ಎಸ್.ಭಂಡಾರಿ ಅವರು ದೀಪ ಪ್ರಜ್ವಲಿಸಿ ಉಭಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಭಂಡಾರಿ ಸೇವಾ ಸಮಿತಿಯ ಅಧ್ಯಕ್ಷ ನ್ಯಾ| ಆರ್.ಎಂ ಭಂಡಾರಿ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಹೆಸರಾಂತ ಸಂಪನ್ಮೂಲ ವ್ಯಕ್ತಿ, ಕೌನ್ಸಲರ್ ಆರ್.ವಿಜಯನ್ ಮತ್ತು ಹೆಸರಾಂತ ವೈದ್ಯಾಧಿಕಾರಿ ಡಾ| ಸುಜಾತಾ ಕೆ.ಭಂಡಾರೆ ಅವರು ಶಿಬಿರ ನಡೆಸಿ ಆರೋಗ್ಯ ಭಾಗ್ಯಕ್ಕೆ ಮತ್ತು ಸ್ವಸ್ಥ್ಯ ಜೀವನಕ್ಕೆ ಕೆಲವೊಂದು ಸೂತ್ರಗಳನ್ನು, ಎಲ್ಲಾ ಕಾಯಿಲೆ ಕಾಮಾಲೆಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ ರೋಗಗಳನು ತಡೆಗಟ್ಟಲು ಮಾಗ9 ಮಾಗ9ದಶಿ9ಗಳನು ಮನ ಮುಟ್ಟುವ ಹಾಗೆ ತಿಳಿಹೇಳಿದರು ತಿಳಿಯ ಪಡಿಸಿದರು.

ಕಾರ್ಯಕ್ರಮದಲ್ಲಿ ಸೇವಾ ಸಮಿತಿಯ ಜೊತೆ ಕಾರ್ಯದರ್ಶಿ ನ್ಯಾ| ಶಾಂತರಾಜ ಡಿ.ಭಂಡಾರಿ, ಜೊತೆ ಕೋಶಾಧಿಕಾರಿ ಪ್ರಕಾಶ್ ಭಂಡಾರಿ ಮತ್ತು ಸುಭಾಷ್ ಭಂಡಾರಿ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ರೇಖಾ ಎ.ಭಂಡಾರಿ, ಗೌರವ ಕಾರ್ಯದರ್ಶಿ ಜಯಸುಧಾ ಟಿ.ಭಂಡಾರಿ, ಕೇಶವ ಭಂಡಾರಿ ಸೇರಿದಂತೆ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಶಿಬಿರಕ್ಕಾಗಿ ಸ್ಥಳವಕಾಶವನ್ನು ನೀಡಿದ ಸಮಾಜದ ಹಿರಿಯ, ಕೊಡುಗೈ ದಾನಿ ಭುಜಂಗ ವಿ ಭಂಡಾರಿ, ಮಕ್ಕಳಿಗೆ ಬಹುಮಾನ ಪ್ರಾಯೋಜಿಸಿದ ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಹಾಗೂ ಲಘು ಉಪಾಹಾರ ನೀಡಿದ ಜೊತೆ ಕಾರ್ಯದರ್ಶಿಗಳಾದ ರಂಜಿತ್ ಎಸ್.ಭಂಡಾರಿ ಅವರನ್ನು ಪುಷ್ಫಗುಚ್ಛ ನೀಡಿ ಗೌರವಿಸಲಾಯಿತು.

ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಸ್ತುತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಉಪಾಧ್ಯಕ್ಷ ಪ್ರಭಾಕರ್ ಪಿ.ಭಂಡಾರಿ ಮತ್ತು ಥಾಣೆ ಮತ್ತು ಗೌರವ ಕೋಶಾಧಿಕಾರಿ ಕರುಣಾಕರ ಎಸ್.ಭಂಡಾರಿ ಪುಷ್ಪಗುಚ್ಛ ನೀಡಿದರು. ಗೌ| ಪ್ರ| ಕಾರ್ಯದರ್ಶಿ ಶಶಿಧರ್ ಡಿ.ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಪುರುಷೋತ್ತಮ ಜಿ.ಭಂಡಾರಿ,ಧನ್ಯವದಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಿರಿಯಲ್ ಆಟಿ9ಸ್ಟಗಳಾದ ಭರತ್ ಠಾಕುರ್ ಹಾಗೂ ತೇಜಸ್ ರಜಪೂತ್ ಮಿಮಿಕ್ರಿಯೊಂದಿಗೆ ಸಭಿಕರನ್ನು ರಂಜಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here