Monday 22nd, April 2019
canara news

14ನೇ ವಾರ್ಷಿಕ ಯಕ್ಷಗಾನ ಕಲಾಪ್ರಶಸ್ತಿ ಪ್ರದಾನಿಸಿದ ಬಿಲ್ಲವರ ಅಸೋಸಿಯೇಶನ್ ಮುಂಬಯಿ

Published On : 13 Sep 2018   |  Reported By : Ronida Mumbai


ಕಲಾವಿದರನ್ನು ಗೌರವಿಸುವುದು ಉದಾರ ಮನೋಭಾವ : ಶಿವಾನಂದ ಹೆಗಡೆ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಸೆ.13: ಬಿಲ್ಲವರ ಅಸೋಸಿಯೇಶನ್ ಕಳೆದ ಎಂಟು ದಶಕಗಳಿಂದ ಮಾಡುತ್ತಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಕಲಾ ಸೇವೆ ಶ್ಲಾಘನೀಯವಾದುದು. ಕಲಾವಿದರಿಗೆ ಪ್ರಶಸ್ತಿ, ಸನ್ಮಾನ ನೀಡಿ ಕಲೆ ಹಾಗೂ ಕಲಾವಿದರಿಗೆ ಸನ್ಮಾನಿಸುವುದು ಅಭಿನಂದನೀಯ. ಜಯ ಸಿ.ಸುವರ್ಣ ಅವರಿಗೆ ತಮ್ಮ ತಾಯಿ ಮತ್ತು ಕಲೆಯ ಮೇಲಿನ ಪ್ರೀತಿ ಎಷ್ಟು ಅಳವಾಗಿದೆ ಎಂಬುಂದು ಈ ಪ್ರಶಸ್ತಿ ಕಾರ್ಯಕ್ರಮದಿಂದ ಅರಿವಾಗುತ್ತದೆ. ಅವಿಭಜಿತ ದಕ್ಷಿಣ ಕನ್ನಡಿಗರು ಕಲಾ ಸೇವೆಯ ತುಡಿತವುಳ್ಳವರಾಗಿದ್ದಾರೆ. ಯಕ್ಷಗಾನ ಕಲೆಗೆ ಹೆಚ್ಚಿನ ಪೆÇ್ರೀತ್ಸಾಹವನ್ನು ನೀಡುತ್ತಾರೆ. ಯಾವುದೇ ಮೇಳವಿರಲಿ ಅಥವಾ ತಿಟ್ಟಿನವರೇ ಇರಲಿ ಅವಿಭಜಿತ ದಕ್ಷಿಣ ಕನ್ನಡಿಗರು ಜಾತಿ ಮತ ಭೇದವಿಲ್ಲದೆ ಕಲಾವಿದರ ಜೊತೆಗೆ ಮೇಳವನ್ನು ಪ್ರೀತಿಸಿ ಪೆÇ್ರೀತ್ಸಾಹವನ್ನು ನೀಡುತ್ತಿದ್ದಾರೆ. ಕಲೆ ಹಾಗೂ ಕಲಾವಿದರನ್ನು ಗೌರವಿಸುವುದು ಉದಾರ ಮನೋಭಾವ ದಕ್ಷಿಣ ಕನ್ನಡಿಗರಲ್ಲಿದೆ ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಕೆರೆಮನೆ ಶಿವಾನಂದ ಹೆಗಡೆ ತಿಳಿಸಿದರು.

ಇಂದಿಲ್ಲಿ ಶನಿವಾರ ಸಂಜೆ ಸಾಂತಕ್ರೂಜ್ ಪೂರ್ವದಲ್ಲಿನ ಬಿಲ್ಲವರ ಭವನದ ಶ್ರೀನಾರಾಯಣ ಗುರು ಸಭಾಗೃಹದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ತನ್ನ ಸಂಚಲಕತ್ವದ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿ ವತಿಯಿಂದ ಜಯ ಸಿ.ಸುವರ್ಣ ಅವರು ತನ್ನ ಮಾತೃಶ್ರೀ ದಿ| ಅಚ್ಚು ಸಿ.ಸುವರ್ಣ ಸ್ಮರಣಾರ್ಥ ವಾರ್ಷಿಕವಾಗಿ ಕೊಡಮಾಡಿದ 14ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೌರವ ಅತಿಥಿsಯಾಗಿ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿದರು.

ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ಜರುಗಿಸಲ್ಪಟ್ಟ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಪ್ರಶಸ್ತಿಯ ಪ್ರಾಯೋಜಕರೂ, ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸುವರ್ಣ ದೀಪ ಬೆಳಗಿಸಿ ಉದ್ಘಾಟಿಸಿದರು. ಗೌರವ ಅತಿಥಿüಯಾಗಿ ಬಿಎಎಸ್‍ಎಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಕಂಪೆನಿ ಸೆಕ್ರೆಟರಿ ಪ್ರದೀಪ್ ಎಂ.ಚಂದನ್, ಹಿರಿಯ ಯಕ್ಷಗಾನ ಕಲಾವಿದ, ಸಂಘಟಕ ಕೆರೆಮನೆ ಶಿವಾನಂದ ಹೆಗಡೆ, ಭಾರತ್ ಬ್ಯಾಂಕ್ ನಿರ್ದೇಶಕ ವಾಸುದೇವ ಆರ್.ಕೋಟ್ಯಾನ್, ಹಿರಿಯ ಯಕ್ಷಗಾನ ವಿದ್ವಾಂಸ, ಸಂಘಟಕ ಹೆಚ್.ಬಿ.ಎಲ್ ರಾವ್, ಗೋಕುಲ್ ಹೊಟೇಲ್ ದಹಿಸರ್ ಕೃಷ್ಣ ವಿ.ಆಚಾರ್ಯ, ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀ ಕಾರ್ಯಾಧ್ಯಕ್ಷ ಎನ್.ಟಿ ಪೂಜಾರಿ ಉಪಸ್ಥಿತರಿದ್ದು, ನಾಡಿನ ಹಿರಿಯ ಪ್ರಸಿದ್ಧ ಯಕ್ಷಗಾನ ಕಲಾವಿದ, ಸಂಘಟಕ ಐರೋಡಿ ಗೋವಿಂದಪ್ಪ ಅವರಿಗೆ 14ನೇ ವಾರ್ಷಿಕ ಯಕ್ಷಗಾನ ಕಲಾ ಪ್ರಶಸ್ತಿ-2018ನ್ನು ಪ್ರದಾನಿಸಿ ಅಭಿನಂದಿಸಿದರು.

ಅಸೋಸಿಯೇಶನ್‍ನ ಉಪಾಧ್ಯಕ್ಷರುಗಳಾದ ಶಂಕರ ಡಿ.ಪೂಜಾರಿ, ಹರೀಶ್ ಜಿ.ಅವಿೂನ್, ಶ್ರೀನಿವಾಸ ಆರ್.ಕರ್ಕೇರ, ಗೌ| ಪ್ರ| ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ಕುಕ್ಯಾನ್ ಸಸಿಹಿತ್ಲು ವೇದಿಕೆಯಲ್ಲಿ ಆಸೀನರಾಗಿದ್ದರು.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಅಭಿವೃದ್ಧಿಯನ್ನು ಹೊಂದಿದ ಜಿಲ್ಲೆಯಾಗಿದೆ. ಸಂಸ್ಕೃತಿ, ಸಂಸ್ಕಾರವನ್ನು ಹೊಂದಿರುವ ಬುದ್ಧಿ ಜೀವಿಗಳಿರುವ ಈ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತಿಮತ ಭೇದದ ಸಂಘರ್ಷ ನಡೆಯಕೂಡದು. ಬಿಲ್ಲವ ಸಮಾಜದ ಕಲಾವಿದರಿಗೆ ಒಂದು ಮೇಳದಲ್ಲಿ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಐರೋಡಿ ಗೋವಿಂದಪ್ಪ ಅವರು ಆ ಮೇಳದ ವಿರುದ್ಧ ಧ್ವನಿ ಎತ್ತಿ ರಂಗಭೂಮಿಗೆ ಜಯವನ್ನು ಒದಗಿಸಿದವರಾಗಿದ್ದಾರೆ. ಆ ಮೂಲಕ ಕಲಾವಿದ ಜಾತ್ಯತೀತ ಎಂಬುದನ್ನು ತೋರಿಸಿಕೊಟ್ಟಿದ್ದರು ಎಂದು ಜಯ ಸುವರ್ಣ ನುಡಿದರು.


ಪ್ರದೀಪ್ ಚಂದನ್ ಮಾತನಾಡಿ ಜಯ ಸುವರ್ಣ ಅವರ ನಿಸ್ವಾರ್ಥ ಸೇವೆ, ಅಲೆಯ ಮೇಲಿನ ಅಭಿಮಾನ ಮೆಚ್ಚುವಂತದ್ದು. ಯಕ್ಷಗಾನವನ್ನು ನಾವೂ ಮುಂದಿನ ಜನಾಂಗಕ್ಕೆ ಉಳಿಸುವ ಅನಿವಾರ್ಯತೆ ಇದೆ. ನಮ್ಮ ಮಕ್ಕಳು ಯಕ್ಷಗಾನದತ್ತ ಒಲವು ತೋರುವಂತೆ ಮಾಡಬೇಕು. ಸಂಘ ಸಂಸ್ಥೆಗಳು ಕೂಡಿ ಯಕ್ಷಗಾನಕ್ಕೆ ಪೆÇ್ರೀತ್ಸಾಹ ನೀಡಿ ಅದನ್ನು ಉಳಿಸಿ ಬೆಳೆಸಬೇಕು, ಆಗ ನಮ್ಮ ಕಲೆ, ಸಂಸ್ಕೃತಿ ಶಾಶ್ವತವಾಗಿ ಉಳಿಯಬಹುದಾಗಿದೆ. ನಾವೆಲ್ಲಾ ಯಕ್ಷಗಾನ ಕಲೆಯ ಬೆಳವಣಿಗೆಯಲ್ಲಿ ಭಾಗಿಯಾಗೋಣ ಎಂದರು.

ಹೆಚ್.ಬಿ.ಎಲ್ ರಾವ್ ಅಭಿನಂದನಾ ಭಾಷಣಗೈದು ಮುಂಬಯಿ ಮಹಾನಗರದಲ್ಲಿ ಸನ್ಮಾನಗಳು ನಡೆಯುತ್ತಿದೆ, ಆದರೆ ಪ್ರಶಸ್ತಿ ಎಂಬ ನಾಮಕರಣ ಆಗಿದ್ದರೆ ಅದು ಜಯ ಸಿ. ಸುವರ್ಣ ಅವರಿಂದಾಗಿದೆ. ಪ್ರಶಸ್ತಿ ಎಂಬುದು ಶಾಶ್ವತವಾದುದು. ಸದಾ ನೆನಪಿನಲ್ಲಿ ಉಳಿಯುವಂತದ್ದು, ಅಂತಹ ಮಹತ್ತರವಾದ ಪ್ರಶಸ್ತಿಯು ಬಿಲ್ಲವರ ಎಸೋಸಿಯೇಶನ್ ಮುಖಾಂತರ ಜಯ ಸಿ.ಸುವರ್ಣಾವರ ನೇತ್ರತ್ವದಲ್ಲಿ ಪ್ರದಾನವಾಗುತ್ತಿದೆ. 5 ದಶಕಗಳಿಂದ ಕಲಾಸೇವೆಯನ್ನು ಮಾಡಿರುವ, ತೆಂಕು-ಬಡಗುತಿಟ್ಟಿನಲ್ಲಿ ಪ್ರಸಿದ್ಧಿ ಪಡೆದಿರುವ ಮಹಾನ್ ಕಲಾವಿದ ಐರೋಡಿ ಗೋವಿಂದಪ್ಪ ಅವರಿಗೆ ಈ ಪ್ರಶಸ್ತಿ ಸಲ್ಲುತ್ತಿರುವುದು ಅಭಿನಂದನೀಯ ಎಂದÀರು.

ಜಾಗತೀಕರಣದ ಭರಾಟೆಯಲ್ಲಿ ತನ್ನನ್ನು ಹೆತ್ತು ಹೊತ್ತು ಸಾಕಿದಂತಹ ತಂದೆ-ತಾಯಿಯರ ನೆನಪು ಮಕ್ಕಳ ಮನಸ್ಸಿನಲ್ಲಿ ಮರೆಯಾಗುವ ಕಾಲ ಇದಾಗಿದೆ. ಆದರೆ ತನ್ನ ತಾಯಿಯ ನೆನಪು ಸ್ಥಿರವಾಗಿ ಉಳಿಯಬೇಕು, ಎಲ್ಲಾ ಜನರಿಗೂ ತನ್ನ ತಾಯಿಯ ನೆನಪು ಹುಟ್ಟಿಸುವಂತೆ ಮಾಡಬೇಕೆಂಬ ನೆಲೆಯಲ್ಲಿ ಜಯ ಸಿ.ಸುವರ್ಣ ಅವರು ಈ ಪ್ರಶಸ್ತಿ ಪ್ರದಾನದ ಮೂಲಕ ಸರ್ವರಿಗೂ ಮಾದರಿಯಾಗಿದ್ದಾರೆ. ಈ ಪ್ರಶಸ್ತಿ ಪಡೆಯಲು ಭಾಗ್ಯ ಬೇಕು. ಯಕ್ಷಗಾನದ ಬೆಳವಣಿಗೆಯಲ್ಲಿ ಬಿಲ್ಲವ ಕಲಾವಿದರ ಕೊಡುಗೆಯೂ ಕೊಡುಗೆಯೂ ಅಪಾರ. ಕಲಾವಿದರ ಮೇಲೆ ಯಾರೂ ಕೂಡಾ ಜಾತೀಯ ಅಸೂಯೆ ತೋರಬಾರದು ಎಂದು ಐರೋಡಿ ಗೋವಿಂದಪ್ಪ ಪ್ರಶಸ್ತಿಗೆ ಉತ್ತರಿಸಿದರು.

ಭಾಗವತ ಮುದ್ದು ಅಂಚನ್ ಅವರು ಭಾಗವತಿಕೆ ಶೈಲಿಯಲ್ಲಿ ಪ್ರಾರ್ಥನೆಗೈದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಶಾಂತಿ ಪ್ರಸ್ತಾವನೆಗೈದರು. ಸಾಂಸ್ಕೃತಿಕ ಸಮಿತಿ ಕಾರ್ಯಾಧ್ಯಕ್ಷ ದಯಾನಂದ್ ಆರ್.ಪೂಜಾರಿ ಸ್ವಾಗತಿಸಿದರು. ಸಹಾಯಕ ಸಂಪಾದಕ ಹರೀಶ್ ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ದಿ| ಈಶ್ವರ್ ಕೆ.ಹೆಜಮಾಡಿ ಸ್ಮಾರಣಾರ್ಥವಾಗಿ ಕರ್ನಾಟಕ ಜಾನಪದ, ಯಕ್ಷಗಾನ ಅಕಾಡೆಮಿ ಸಾಹಿತ್ಯ ಪ್ರಶಸ್ತಿ ಹಾಗೂ ಶ್ರೀ ವಿಶ್ವೇಶ್ವರ ತೀರ್ಥ ಪ್ರಶಸ್ತಿ ಪುರಸ್ಕೃತ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯು ಈ ವರ್ಷದ ತಿರುಗಾಟದ ಪ್ರಥಮ ಸೇವೆಯಾಟವಾಗಿ `ಪಾಂಡವ ಅಶ್ವಮೇಧ' ಪೌರಾಣಿಕ ಕಥಾಭಾಗ ಯಕ್ಷಗಾನ ಬಯಲಾಟ ಪ್ರದರ್ಶಿಸಿದರು.
,

 
More News

ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ
ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ  ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'

Comment Here