Monday 22nd, April 2019
canara news

21 ನೇ ಅಖಿಲ ಭಾರತ ಕುವೆಂಪು ಸ್ಮಾರಕ ಎಕಾಂಕ ನಾಟಕ ಸ್ಪರ್ಧೆ ಉದ್ಘಾಟನೆ

Published On : 14 Sep 2018   |  Reported By : media release


ಆಧುನಿಕ ರಂಗಭೂಮಿಯಲ್ಲಿ ಏಕಾಂಕ ನಾಟಕಗಳಿಗೆ ವಿಶೇಷ ಮಹತ್ವವಿದೆ.- ಶ್ಯಾಮಲ ಗೋಪಿನಾಥ್

ಮುಂಬಯಿ : ಯಕ್ಷಗಾನ , ದೊಡ್ಡಾಟ, ಸಣ್ಣಾಟ, ಮೂಡಲಪಾಯ, ನಾಟಕ ಇತ್ಯಾದಿ ರಂಗಕಲೆಗಳಿಂದ ಕರ್ಣಾಟಕದಲ್ಲಿ ಥಿಯೇಟರ್ ಗಳಿಗೆ ತನ್ನದೇ ಆದ ಪರಂಪರೆ ಇದೆ. ಕೈಲಾಸಂ, ಶ್ರೀರಂಗ, ಕುವೆಂಪು, ಕಾರಂತ, ಕಾರ್ನಾಡ್, ಕಂಬಾರ, ಲಂಕೇಶ್... ಇವರೆಲ್ಲಾ ಕನ್ನಡ ರಂಗಭೂಮಿಯನ್ನು ಬೆಳೆಸಿದವರು.ತಮ್ಮದೇ ಆದ ರಂಗ ಇತಿಹಾಸವನ್ನು ಸೃಷ್ಟಿಸಿದವರು. ಆಧುನಿಕ ರಂಗಭೂಮಿಯಲ್ಲಿ ಏಕಾಂಕ ನಾಟಕಗಳಿಗೆ ವಿಶೇಷ ಮಹತ್ವ ಇರುವುದು. ಕನ್ನಡ ರಂಗಭೂಮಿಯು ಸಂಪದ್ಭರಿತವಾಗಿದೆ ಎಂದು ಎಚ್. ಡಿ. ಎಫ್. ಸಿ. ಬ್ಯಾಂಕಿನ ಕಾರ್ಯಾಧ್ಯಕ್ಷೆ ಶ್ಯಾಮಲಾ ಗೋಪಿನಾಥ್ ನುಡಿದರು.

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಆಯೋಜಿಸಿದ 21ನೇ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ -2018 ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಇಂದು ಉದ್ಘಾಟನೆ ಗೊಂಡಿದ್ದು ಶ್ಯಾಮಲಾ ಗೋಪಿನಾಥ್ ದೀಪ ಬೆಳಗಿಸಿ ತಮ್ಮ ಉದ್ಘಾಟನಾ ಭಾಷಣ ಮಾಡಿದರು.

ಸುಮಾರು 85 ವರ್ಷಗಳ ದೀರ್ಘ ಇತಿಹಾಸವಿರುವ ಕರ್ನಾಟಕ ಸಂಘ ಮುಂಬಯಿ ತನ್ನ ಸಮರ್ಥ ನಾಯಕತ್ವದಿಂದಾಗಿ ಇಂದಿನ ತನಕವೂ ಕನ್ನಡದ ಕೆಲಸಗಳನ್ನು ಮುಂದುವರಿಸುತ್ತಾ ಬಂದಿದೆ. ಭಾಷಾ ಸೌಹಾರ್ದತೆಗೂ ಕೆಲಸಮಾಡುತ್ತಾ ಬಂದಿದೆ. ಸಂಘದ ಚಟುವಟಿಕೆಗಳು ನನಗೆ ಖುಷಿ ನೀಡಿದೆ ಬಿಡುವಿನ ಸಮಯದಲ್ಲಿ ಇವರೆಲ್ಲ ಕನ್ನಡದ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಆರ್ಥಿಕ ಕ್ಷೇತ್ರದಲ್ಲಿರುವ ನನಗೆ ಇಂದು ಕುವೆಂಪು ಸ್ಮಾರಕ 21ನೆಯ ಏಕಾಂಕ ನಾಟಕ ಸ್ಪರ್ಧೆಯನ್ನು ಉದ್ಘಾಟಿಸುವ ಅವಕಾಶ ದೊರೆತಿರುವುದಕ್ಕೆ ನಾನು ಸಂತೋಷ ಪಟ್ಟಿದ್ದೇನೆ. ಕರ್ನಾಟಕ ಸಂಘದ ನೂತನ ಕಟ್ಟಡ ಆದಷ್ಟು ಶೀಘ್ರ ನಿರ್ಮಾಣಗೊಳ್ಳಲಿ ಎಂದು ನಾವೆಲ್ಲ ಹಾರೈಸೋಣ ಎಂದರು.

ಮುಖ್ಯ ಅತಿಥಿ ಮೈಸೂರ್ ಅಸೋಸಿಯೇಶನ್‍ನ ಕೆ. ಮಂಜುನಾಥಯ್ಯ ಮಾತನಾಡುತ್ತಾ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಎಲ್ಲ ತಂಡಗಳಿಗೆ ಪ್ರತಿಷ್ಠೆ ತಂದು ಕೊಟ್ಟಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಸತತವಾಗಿ ಈ ಸ್ಪರ್ಧೆಯನ್ನು ಆಯೋಜಿಸುತ್ತಾ ಬಂದಿರುವ ಕರ್ನಾಟಕ ಸಂಘವನ್ನು ಎಲ್ಲ ಕನ್ನಡಿಗರ ಪರವಾಗಿ ಅಭಿನಂದಿಸಬೇಕು. ಭಾಷೆಯ ಹೆಚ್ಚುಗಾರಿಕೆಯು ಆ ಭಾಷೆಯಲ್ಲಿ ಸಂಸ್ಕೃತಿಯ ಪ್ರತಿಬಿಂಬ ಕಂಡಾಗ. ಅದರಲ್ಲಿ ನಾಟಕ ಪ್ರಮುಖವಾಗಿ ಗುರುತಿಸುವಂತದ್ದು. ಸಂಗೀತ, ಪಠ್ಯ, ಕಥಾನಕ, ಪಾತ್ರ... ಎಲ್ಲವೂ ಇರುವ ನಾಟಕ ಜೀವನವನ್ನೇ ಪ್ರತಿಬಿಂಬಿಸುತ್ತದೆ. ಕಲೆಯ ಮೂಲಕ ಜನರಿಗೆ ನಿಜವಾದ ಅನುಭವ ತಂದುಕೊಡುವುದು ನಾಟಕ. ಜನಾಂಗಕ್ಕೆ ಎಚ್ಚರಿಕೆ ಕೊಡುವ ಕೆಲಸ ಅದು ಮಾಡುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ ಸಂಘದ ಉಪಾಧ್ಯಕ್ಷ ಡಾ| ಈಶ್ವರ ಅಲೆವೂರು ಮಾತನಾಡುತ್ತಾ ಎಪ್ಪತ್ತು - ಎಂಭತ್ತರ ದಶಕದಲ್ಲಿ ಕಲಾ ಕೇಂದ್ರ ಮುಂಬಯಿಯವರಿಗೆ ನಾಟಕ ಸ್ಪರ್ಧೆಗಳನ್ನುಆಯೋಜಿಸಿದ್ದರೆ ಅನಂತರ ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಗಳು ಕರ್ನಾಟಕದ ತಂಡಗಳಿಗೂ ಅವಕಾಶ ನೀಡಿತು. ಸಾವಿರಾರು ಕಲಾವಿದರನ್ನು ಶ್ರೋತೃಗಳನ್ನು ಬೆಸೆಯುವ ಮಾನವೀಯಗೊಳಿಸುವ ಕೆಲಸವನ್ನು ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಕರ್ನಾಟಕ ಸಂಘವು ಕಳೆದ ಎರಡು ದಶಕಗಳಿಂದ ಮಾಡುತ್ತಾ ಬಂದಿದೆ. ಸಾಹಿತ್ಯ ಭಾರತಿ, ಕಲಾಭಾರತಿ..... ಇಂತಹ ಚಟುವಟಿಕೆಗಳ ಮೂಲಕವೂ ಕರ್ನಾಟಕ ಸಂಘ ಮುಂಬಯಿಯಲ್ಲಿ ಸಕ್ರಿಯವಿದೆ. ಕನ್ನಡಿಗರ ಪೆÇ್ರೀತ್ಸಾಹ ವೇ ಇದಕ್ಕೆ ಕಾರಣ ಎಂದರು.

ಪ್ರಸ್ತಾವಿಕ ನುಡಿಗಳನ್ನು ಆಡಿದ ಸಂಘಟಕ, ಕತೆಗಾರ ಓಂದಾಸ್ ಕಣ್ಣಂಗಾರ್ ಅವರು ಕುವೆಂಪು ಸ್ಮಾರಕ ನಾಟಕ ಸ್ಪರ್ಧೆಯ ಹಿನ್ನೆಲೆ, ಸಂಘಕ್ಕೆ ನೀಡಿದ ತಂಡಗಳ ಪೆÇ್ರೀತ್ಸಾಹವನ್ನು ಸ್ಮರಿಸಿದರು.

ಉದ್ಘಾಟಕರ ಪರಿಚಯವನ್ನು ರಂಗ ಕಲಾವಿದ ಸುರೇಂದ್ರ ಮಾರ್ನಾಡ್ ಮಾಡಿದರು. ಸಂಘದ ಗೌ. ಪ್ರ. ಕಾರ್ಯದರ್ಶಿ ರಂಗ ನಿರ್ದೇಶಕ ಡಾ. ಭರತ್ ಕುಮಾರ್ ಪೆÇಲಿಪು ಮತ್ತು ಡಾ. ಈಶ್ವರ್ ಅಲೆವೂರು ಅತಿಥಿಗಳನ್ನು ಗೌರವಿಸಿದರು. ಗಣೇಶ್ ಎರ್ಮಾಳ್ ಪ್ರಾರ್ಥನೆ ಹಾಡಿದರು. ಸಭಾ ಕಾರ್ಯಕ್ರಮನ್ನು ಕತೆಗಾರ ರಾಜೀವ ನಾರಾಯಣ ನಾಯಕ ನಿರೂಪಿಸಿ ವಂದಿಸಿದರು. ಅನಂತರ ನಾಟಕ ಸ್ಪರ್ಧೆಯ ಮೊದಲ ನಾಟಕ ಪ್ರದರ್ಶನಗೊಂಡಿತು.
More News

ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ
ಮುಲುಂಡ್ ಕನ್ನಡ ಸಂಘದ ಉದ್ಘಾಟನಾ ಸಮಾರಂಭದ ಕಾರ್ಯಕ್ರಮ
ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ  ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಿಲ್ಲವ ಭವನದಲ್ಲಿ ಗುರುವಾರದ ಶ್ರೀ ಗುರು ಅನ್ನ ಪ್ರಸಾದ ಅನ್ನದಾನಕ್ಕೆ ಚಾಲನೆ ಬಿಲ್ಲವರು ಸರ್ವರನ್ನು ಗೌರವಿಸುವ ಸಂಸ್ಕಾರವುಳ್ಳವರು-ಯೋಗಿಶ್ ಶೆಟ್ಟಿ ಜೆಪ್ಪು
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'
ಬಂಟರ ಸಂಘ ಬೆಂಗಳೂರು ಸಂಭ್ರಮಿಸಿದ `ಬಿಸು ಪರ್ಬ-2019'

Comment Here