Wednesday 14th, May 2025
canara news

ಸೆ.29: ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ರಿ.) ಇದರ ಹತ್ತನೇ ವಾರ್ಷಿಕ ಮಹಾಸಭೆ

Published On : 15 Sep 2018   |  Reported By : Ronida Mumbai


ಮುಂಬಯಿ, ಸೆ.15: ಹೊರನಾಡ ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾನಗರ ಮುಂಬಯಿಯಲ್ಲಿ ಪತ್ರಕರ್ತರ ಸಂಘಟನೆಯಾಗಿ ರೂಪುಗೊಂಡು ದಶಮಾನೋತ್ಸವ ಸಂಭ್ರಮಿಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ನೋ.) ಇದರ 10ನೇ ವಾರ್ಷಿಕ ಮಹಾಸಭೆಯನ್ನು ಇದೇ ಸೆ.29ನೇ ಶನಿವಾರ ಪೂರ್ವಾಹ್ನ 10.30 ಗಂಟೆಗೆ ಸ್ವಾಮಿ ನಿತ್ಯಾನಂದ ಸಭಾಗೃಹ, ಮುಖ್ಯ ಅಧ್ಯಾಪಕ ಭವನ, ಸಯಾನ್ ಪಶ್ಚಿಮ, ಮುಂಬಯಿ ಇಲ್ಲಿ ಸಂಘದ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಬೃಹನ್ಮುಂಬಯಿಯಲ್ಲಿ ಒಂದು ದಶಕದ ಹಿಂದೆ ಸ್ಥಾಪಿಸಲ್ಪಟ್ಟ ಈ ಸಂಘಟನೆಯು ಕ್ರಿಯಾಶೀಲವಾಗಿ ಸೇವಾ ನಿರತವಾಗಿದ್ದು, ಸಂಘವು ಮಹಾರಾಷ್ಟ್ರದಾದ್ಯಂತ ನೆಲೆಯಾಗಿರುವ ಕನ್ನಡಿಗ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿದೆ. ಸಭೆಯಲ್ಲಿ ಸಂಘದ ಕಾರ್ಯಚಟುವಟಿಕೆ, ಯೋಜನೆ ಇತ್ಯಾದಿ ವಿಚಾರಗಳ ಬಗ್ಗೆ ವಿಚಾರ ವಿನಿಮಯ ಮಾಡಲಾಗುವುದು ಎಂದು ಸಂಘದ ಕಾರ್ಯದರ್ಶಿ ಹರೀಶ್ ಹೆಜ್ಮಾಡಿ ತಿಳಿಸಿದ್ದಾರೆ.

ಸಂಘದ ಪತ್ರಕರ್ತ ಸದಸ್ಯರ ಅನೇಕಾನೇಕ ಸಮಸ್ಯೆUಳಿಗೆ ಸ್ಪಂದಿಸುತ್ತಾ ಸದಸ್ಯರ ಮತ್ತು ಅವರ ಪರಿವಾರದ ಬಗ್ಗೆಯೂ ಕಾಳಜಿ ವಹಿಸಿ ಸೇವಾತತ್ಪ ಸಂಘದ ಭವಿಷ್ಯತ್ತಿನ ಯಶಸ್ಸಿಗೆ ಸಹಕಾರಿ ಆಗುವಂತೆ ಸಂಘದ ಸರ್ವ ಸದಸ್ಯರು ಕ್ಲಪ್ತ ಸಮಯಕ್ಕೆ ಮಹಾಸಭೆಯಲ್ಲಿ ಹಾಜರಾಗಿ ಮಹಾಸಭೆಯ ಯಶಸ್ಸಿಗೆ ಸಹಕರಿಸುವಂತೆ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಈ ಮೂಲಕ ವಿನಂತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here