Wednesday 14th, May 2025
canara news

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಲೋನವಲಾ ಸ್ಥಳೀಯ ಕಚೇರಿ ಪದಾಧಿಕಾರಿಗಳ ಆಯ್ಕೆ

Published On : 17 Sep 2018   |  Reported By : Rons Bantwal


ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತಿ ಆಚರಣೆ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.17: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಲೋನವಲಾ ಸ್ಥಳೀಯ ಕಚೇರಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮತ್ತು ಬ್ರಹ್ಮಶ್ರೀ ನಾರಾಯಣ ಗುರುಗಳ 164ನೇ ಜಯಂತ್ಯೋತ್ಸವ ಇಂದಿಲ್ಲಿ ಭಾನುವಾರ ಲೋನವಲಾ ಇಲ್ಲಿನ ಹೊಟೇಲ್ ರೈನ್‍ಬೋ ರಿಟ್ರೀಟ್ ಇದರ ವ್ಹಿವ್ ಪೆÇಯಿಂಟ್ ಸಭಾಗೃಹದಲ್ಲಿ ಜರುಗಿಸಿತು.

ಲೋನಾವಳ ಸಮಿತಿ ಗೌರವ ಕಾರ್ಯಧ್ಯಕ್ಷ ಶ್ರೀಧರ ಎಸ್.ಪೂಜಾರಿ ಮತ್ತು ಸುಕನ್ಯಾ ಶ್ರೀಧರ್, ಗೌರವ ಕಾರ್ಯಧ್ಯಕ್ಷ ಶ್ರೀಧರ ಎಸ್.ಪೂಜಾರಿ ಮತ್ತು ವಿೂನಾಕ್ಷಿ ಶೇಖರ್, ಕಾರ್ಯಧ್ಯಕ್ಷ ರವಿ ಎ.ಪೂಜಾರಿ ಮತ್ತು ಆರತಿ ಆರ್.ಪೂಜಾರಿ ದಂಪತಿಗಳು, ಗೌರವ ಕಾರ್ಯದರ್ಶಿ ಸುಜಾತಾ ಸಿ.ಪೂಜಾರಿ ಮತ್ತು ಇನ್ನಿತರ ಪದಾಧಿಕಾರಿಗಳನ್ನು ಒಳಗೊಂಡು ಅಸೋಸಿಯೇಶನ್‍ನ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಮ್ಮ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಿದರು.

ನಂತರ 2018-2021ರ ಸಾಲಿನ ಲೋನವಲಾ ಸ್ಥಳೀಯ ಕಚೇರಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಿದ್ದು ಕಾರ್ಯಧ್ಯಕ್ಷರಾಗಿ ಗಣೇಶ್ ಎ.ಪೂಜಾರಿ ಅವರು ಹೊಸ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರÀ ಸಹಿತ ಅಧಿಕಾರ ಸ್ವೀಕರಿಸಿದರು. ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್ ಪ್ರಸ್ತಾವನೆಗೈದು ನೂತನ ಪದಾಧಿಕಾರಿಗಳ ಯಾದಿ ಪ್ರಕಟಿಸಿ ಪ್ರತಿಜ್ಞೆ ಬೋಧಿಸಿದರು. ಅಧ್ಯಕ್ಷ ಚಂದ್ರಶೇಖರ ಪೂಜಾರಿ ಪುಷ್ಪಗುಪ್ಛವನ್ನಿತ್ತು ಅಧಿಕಾರ ಹಸ್ತಾಂತರಿಸಿದರು.

ಇತರ ಪದಾಧಿಕಾರಿಗಳಾಗಿ ಶೇಖರ್ ಎ.ಪೂಜಾರಿ (ಉಪ ಕಾರ್ಯಧ್ಯಕ್ಷ), ರಾಜೇಶ್ ಎಸ್.ಪೂಜಾರಿ (ಗೌರವ ಕಾರ್ಯದರ್ಶಿ), ಸಂದೀಪ್ ಎಸ್.ಪೂಜಾರಿ (ಗೌರವ ಕೋಶಾಧಿಕಾರಿ), ಅಶೋಕ್ ಪೂಜಾರಿ (ಸಹ ಕಾರ್ಯದರ್ಶಿ), ದಯಾನಂದ ಪೂಜಾರಿ (ಸಹ ಕೋಶಾಧಿಕಾರಿ) ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶೇಖರ್ ಬಿ.ಪೂಜಾರಿ, ಸುರೇಶ್ ಡಿ.ಪೂಜಾರಿ, ರಾಜೇಶ್ ಎಸ್.ಪೂಜಾರಿ, ಆನಂದ ಬಿ.ಪೂಜಾರಿ, ದಿನೇಶ್ ಹೆಚ್.ಪೂಜಾರಿ, ವಿಲಾಸಿನಿ ಜಿ.ಪೂಜಾರಿ, ಸುಕನ್ಯಾ ಎಸ್.ಪೂಜಾರಿ, ಆಶಾಲತಾ ಎಸ್.ಪೂಜಾರಿ, ಮಹಿಳಾ ವಿಭಾಗದ ಸದಸ್ಯರಾಗಿ ವಿೂನಾಕ್ಷಿ ಎಸ್. ಪೂಜಾರಿ, ಪ್ರೀತಿ ಡಿ.ಪೂಜಾರಿ, ಯುವ ವಿಭಾಗದ ಸದಸ್ಯರಾಗಿ ಲೋಹಿತ್ ಪೂಜಾರಿ, ಸಂತೋಷ್ ಪೂಜಾರಿ, ಗಣೇಶ್ ಪೂಜಾರಿ, ಉಮೇಶ್ ಕೋಟ್ಯಾನ್, ಆರತಿ ಆರ್.ಪೂಜಾರಿ ಸುಜಾತಾ ಪೂಜಾರಿ ಅಧಿಕಾರ ವಹಿಸಿ ಕೊಂಡರು.

ನನಗೆ ಸಮಾಜ ಸೇವೆಗೈಯಲು ನಿಮ್ಮಿಂದ ಸೌಭಾಗ್ಯ ಸಿಕ್ಕಿದೆ. ಸಮಾಜದ ಏಳಿಗೆಗಾಗಿ ಅವಿರತವಾಗಿ ಶ್ರಮಿಸಿ ಸಮಿತಿ ಮೂಲಕ ಸಮಾಜವನ್ನು ಬಲಪಡಿಸುವ ಪ್ರಯತ್ನ ನಡೆಸುವೆ ಎಂದು ರವಿ ಪೂಜಾರಿ ತಿಳಿಸಿದರು.

ಲೋನಾವಳ ಸ್ಥಳೀಯ ಕಚೇರಿಯ ಸ್ಥಾಪನೆಯ 15 ವರ್ಷಗಳ ಬಳಿಕ ನಾವೆಲ್ಲರೂ ಬಹಳಷ್ಟು ಸಕ್ರೀಯರಾಗಿದ್ದೇವೆ. ಆ ಮೊದಲು ಸಮಾಜ ಬಾಂಧವರ ಒಗ್ಗೂಡುವಿಕೆ ಸಾಧ್ಯವಾಗಿಲ್ಲ. ಆದರೆ ಭವಿಷ್ಯತ್ತಿನಲ್ಲಿ ನಾವೆಲ್ಲರೂ ಏಕಾಗ್ರಸ್ಥರಾಗಿ ಸಮಾಜವನ್ನು ಮುನ್ನಡೆಸುವ ಸ್ಥೈರ್ಯ ನಮ್ಮವರಲ್ಲಿ ಮೊಳಗಿದೆ. ಸಮುದಾಯದಜೊತೆಗೆ ಸಹೋದರತ್ವದಿಂದ ಬೆಸೆದು ಬದುಕುವುದೂ ಇಂದಿನ ಅಗತ್ಯವಾಗಿದೆ. ಸಮಾಜದ ಶ್ರೇಯೋಭಿವೃದ್ಧಿಗೂ ಸ್ಪಂದಿಸೋಣ ಎಂದು ಶ್ರೀಧರ ಪೂಜಾರಿ ತಿಳಿಸಿದರು.

ಚಂದ್ರಶೇಖರ್ ಪೂಜಾರಿ ಅಧ್ಯಕ್ಷೀಯ ನುಡಿಗಳನ್ನಾಡಿ ಲೋನವಲಾದಲ್ಲಿ ಬಿಲ್ಲವರ 60 ಮನೆಗಳಿದ್ದರೂ ಇಷ್ಟೊಂದು ಸಂಖ್ಯೆಯಲ್ಲಿ ಒಗ್ಗೂಡಿದ್ದು ಬಿಲ್ಲವ ಸಮಾಜದ ತಾಕತ್ತು ತೋರುತ್ತದೆ. ಸಂಖ್ಯಾ ಬಲ ಕಡಿಮೆ ಇದ್ದರೂ ಅಖಂಡ ಬಿಲ್ಲವ ಬಾಂಧವರನ್ನು ಒಗ್ಗೂಡಿಸುವ ಕೀರ್ತಿ ಜಯ ಸುವರ್ಣ ಅವರಿಗೆ ಸಲ್ಲುತ್ತದೆ. ಅವರ ದೂರದೃಷ್ಠಿತ್ವ ಮತ್ತು ಶ್ರದ್ಧಾಪೂರ್ವಕ ಕೆಲಸದ ಮೂಲಕ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ನಡೆದಿದೆ. ನಾವೆಲ್ಲರೂ ಸರ್ವರನ್ನು ಸಮಾನತೆ, ಸೌಹಾರ್ದತೆಯಿಂದ ಕಂಡು ಸಮೃದ್ಧಿ, ನೆಮ್ಮದಿಯಿಂದ ಬದುಕುವುದು ಅಗತ್ಯವಿದೆ. ಆ ಮೂಲಕ ಇತರರಿಗೆ ಮಾದರಿ ಆಗೋಣ. ಬಿಲ್ಲವರೆಲ್ಲರೂ ಸಾಂಘಿಕರಾಗಿ, ಸ್ನೇಹಬಾಳ್ವೆಯ ಸಮನ್ವಯಕರಾಗಿ ಬಾಳುತ್ತಾ ಸಮಾಜಕ್ಕೆ ಮಾರ್ಗದರ್ಶರಾಗೋಣ ಎಂದÀು ಕರೆಯಿತ್ತರು.

ಮಧ್ಯಾಹ್ನ ಅವಳಿ ವೀರರಾದ ಕೋಟಿ-ಚೆನ್ನಯರಿಗೆ ಆರಾಧಿಸಿ ಶ್ರೀ ಬ್ರಹ್ಮಶ್ರೀ ನಾರಾಯಣ ಗುರುವರ್ಯರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಅಸೋಸಿಯೇಶನ್‍ನ ಗೌ| ಜೊತೆ ಕಾರ್ಯದರ್ಶಿ ರವೀಂದ್ರ ಎ.ಅವಿೂನ್ (ಶಾಂತಿ) ಪೂಜಾಧಿಗಳನ್ನು ನಡೆಸಿ ಪ್ರಸಾದ ವಿತರಿಸಿ ಹರಸಿದರು. ಅಸೋಸಿಯೇಶನ್ ಮುಂಬಯಿ ಸಮಿತಿ ಹಾಗೂ ಸ್ಥಳಿಯ ಸಮಿತಿ ಮಹಿಳಾ ಮಂಡಳಿಯು ಭಜನೆ ನಡೆಸಿತು.

ಕಾರ್ಯಕ್ರಮದಲ್ಲಿ ಲೋನಾವಳ ನಗರ ಪರಿಷದ್ ಅಧ್ಯಕ್ಷೆ ಶ್ರದ್ಧಾ ಜಾಧವ್, ನಗರ ಸೇವಕಿ ವೃಂದ ಗಣಂತ್ರ, ಲಕ್ಷ್ಮೀನಾರಾಯಣ ಶೆಟ್ಟಿ, ಸತೀಶ್ ಸಾಲ್ಯಾನ್, ಸಂಗೀತಾ ಸುವರ್ಣ, ವಿನಯ್‍ಕುಮಾರ್ ಪಿಂಪ್ರಿ, ಮಾಜಿ ನಗರ ಸೇವಕಿ ಸೌಮ್ಯ ಶೆಟ್ಟಿ ಮತ್ತಿತರ ಗಣ್ಯರು ಅತಿಥಿüಗಳಾಗಿದ್ದರು. ಅಸೋಸಿಯೇಶನ್‍ನ ಉಪಾಧ್ಯಕ್ಷ ಶಂಕರ ಡಿ.ಪೂಜಾರಿ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್ ಜೆ.ಬಂಗೇರ, ಜೊತೆ ಕೋಶಾಧಿಕಾರಿ ಮೋಹನ್ ಡಿ.ಪೂಜಾರಿ, ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎಂ.ಕೋಟ್ಯಾನ್, ಮಾಜಿ ಗೌ| ಪ್ರ| ಕಾರ್ಯದರ್ಶಿ ಧರ್ಮಪಾಲ ಜಿ.ಅಂಚನ್, ಮಾಜಿ ಕೋಶಾಧಿಕಾರಿ ಮಹೇಶ್ ಸಿ.ಕಾರ್ಕಳ, ಗಣೇಶ್ ಬಂಗೇರ ವಿೂರಾರೋಡ್, ಜಗನ್ನಾಥ್ ವಿ.ಅವಿೂನ್ ಉಪ್ಪಳ ಸ್ಥಳಿಯ ಸಮಿತಿಯ ಸೇರಿದಂತೆ ಮಾಜಿ ಮತ್ತು ಹಾಲಿ ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದರು.

ಧನಂಜಯ ಶಾಂತಿ ಪ್ರಾರ್ಥನೆಯನ್ನಾಡಿದರು. ಯಶವಂತ್ ಎನ್.ಪೂಜಾರಿ ಅವರು ಭಕ್ತಿಗೀತೆಯನ್ನಾಡಿದರು. ಆಶಾಲತಾ ಎಸ್.ಪೂಜಾರಿ ಕಾರ್ಯಕ್ರಮ ನಿರ್ವಹಿಸಿ ಕೃತಜ್ಞತೆ ಸಮರ್ಪಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here