ಮುಂಬಯಿ, ಸೆ.17: ಪೆರ್ಲ ಬಜಕೂಡ್ಲು ನಿವಾಸಿ ದಿ| ಮಾನಪ್ಪ ಪೂಜಾರಿ ಅವರ ಧರ್ಮಪತ್ನಿ ರಾಧಮ್ಮ (75) ಅವರು ಸ್ವಗೃಹದಲ್ಲಿ ನಿಧನ ಹೊಂದಿದರು.
ಮೂಲತಃ ಅಲಂಕಾರು ಕಲ್ಲೇರಿ ತರವಾಡು ಮನೆಯ ಹಿರಿಯ ಸದಸ್ಯೆ ಆಗಿದ್ದ ರಾಧಮ್ಮ ಮಕ್ಕಳಾದ ಮಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ವಹಣಾಧಿಕಾರಿ ಸದಾನಂದ ಪೆರ್ಲ, ವಸಂತ ಕುಮಾರ್, ಪುರುಷೋತ್ತಮ ಪೆರ್ಲ (ಪತ್ರಕರ್ತ) ಹಾಗೂ ಮಗಳು ಗಾಯತ್ರಿ ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.