Thursday 25th, April 2024
canara news

ಬಂಟರ ಸಂಘ ಮುಂಬಯಿ ವತಿಯಿಂದ ಆಚರಿಸಲ್ಪಟ್ಟ ವಾರ್ಷಿಕ ಗಣೇಶೋತ್ಸವ

Published On : 19 Sep 2018   |  Reported By : Rons Bantwal


ಧಾರ್ಮಿಕ ಸಭೆ-ತುಳನಾಡ ಗತವೈಭವದೊಂದಿಗೆ ವಿಘ್ನವಿನಾಯಕನ ಜಲಸ್ತಂಭನ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.19: ಮುಂಬಯಿಯಾದ್ಯಂತ ಗಣೇಶ ಚತುಥಿರ್ü ಸಂಭ್ರಮವು ಶಾಸ್ತ್ರೋಕ್ತವಾಗಿ ಆಚರಿಸಲಾಗಿ ದ್ದು, ಮಹಾನಗರದಲ್ಲಿನ ವಿವಿಧ ತುಳುಕನ್ನಡಿಗ ಸಂಸ್ಥೆಗಳು ವಾರ್ಷಿಕ ಗಣೇಶಚತುಥಿರ್ü ಹಬ್ಬವನ್ನು ವಿಜೃಂಭನೆ ಯಿಂದ ಸಂಭ್ರಮಿಸಿದವು. ಬಂಟರ ಸಂಘ ಮುಂಬಯಿ ವತಿಯಿಂದ ಸಂಘದ ಆವರಣದಲ್ಲಿನ ಶ್ರೀ ಮಹಾವಿಷ್ಣು ಮಂದಿರದಲ್ಲಿ ಜ್ಞಾನ ಮಂದಿರದಲ್ಲೂ ಈ ಬಾರಿಯೂ ವಾರ್ಷಿಕ ಗಣೇಶೋತ್ಸವ ಆಚರಿಸಿ ಐದು ದಿನಗಳಿಂದ ವಿಧಿವತ್ತಾಗಿ ಪೂಜಿಸಲ್ಪಟ್ಟು ಕನ್ಯಾ ಸಂಕ್ರಮಣಂ ಮತ್ತು ದೂರ್ವಾಷ್ಟಮೀ ದಿನವಾದ ಇಂದಿಲ್ಲಿ ಸಂಜೆ ಧಾರ್ಮಿಕ ಸಭೆ, ಭವ್ಯ ಮೆರವಣಿಗೆ, ತುಳನಾಡ ಗತವೈಭವದೊಂದಿಗೆ ವಿಘ್ನವಿನಾಯಕ ವಿಗ್ರಹ ವಿಸರ್ಜಿಸಲಾಯಿತು.

ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್.ಪಯ್ಯಾಡೆ ಮುಂದಾಳುತ್ವ ಹಾಗೂ ಸಂಘದ ಜ್ಞಾನ ಮಂದಿರ ಸಮಿತಿ ಕಾರ್ಯಧ್ಯಕ್ಷ ರವೀಂದ್ರ ಎಂ.ಭಂಡಾರಿ ಸಾರಥ್ಯದಲ್ಲಿ ವಾರ್ಷಿಕ ಗಣೇಶೋತ್ಸವ ಅದ್ದೂರಿಯಾಗಿ ಆಚರಿಸಲ್ಪಟ್ಟಿತು. ಮಂದಿರದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ಅನುಗ್ರಹಿಸಿದರು.

ಇಂದು ಸೋಮವಾರ ಸಂಘದ ಕುರ್ಲಾ-ಭಾಂಡೂಪ್ ಮತ್ತು ಸಿಟಿ ಪ್ರಾದೇಶಿಕ ಸಮಿತಿಗಳ ಸೇವೆಗಳೊಂದಿಗೆ ಸಾರ್ವಜನಿಕ ಗಣಹೋಮ, ಅನ್ನಸಂತರ್ಪಣೆ, ಸ್ಪರ್ಧೆಗಳು ನಡೆಸಲ್ಪಟ್ಟವು. ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ `ಸ್ಯಮಂತಕ ಮಣಿ' ಹರಿಕಥಾ ಕಾಲಕ್ಷೇಪವನ್ನೂ ಹಾಗೂ ಮಹಿಳಾ ವಿಭಾಗದ ಸದಸ್ಯೆಯರು ಭಜನೆ ನಡೆಸಿದರು.

ಬಂಟ್ಸ್ ಸಂಘ ಮುಂಬಯಿ ಇದರ ವಿಶ್ವಸ್ಥ ಸದಸ್ಯರು, ಸಂಘದ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಸಿಎ| ಸಂಜೀವ ಶೆಟ್ಟಿ, ಗೌ| ಕೋಶಾಧಿಕಾರಿ ಪ್ರವೀಣ್ ಬಿ.ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಮಹಿಳಾ ವಿಭಾಗಧ್ಯಕ್ಷೆ ರಂಜನಿ ಸುಧಾಕರ್ ಹೆಗ್ಡೆ, ಯುವ ವಿಭಾಗಧ್ಯಕ್ಷ ಶರತ್ ವಿಜಯ್ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ವಿವಿಧ ಪ್ರಾದೇಶಿಕ ವಿಭಾಗೀಯ ಸಮಿತಿಗಳ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರÀು, ಬಂಟರ ಭವನದ ಪ್ರಬಂಧಕ ವಾರಂಗ ಪ್ರವೀಣ್ ಎಸ್.ಶೆಟ್ಟಿ ಸೇರಿದಂತೆ ಭಕ್ತರನೇಕರು ಉಪಸ್ಥಿತರಿದ್ದು ಪೂಜಾಧಿಗಳಲ್ಲಿ ಪಾಲ್ಗೊಂಡರು.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here