Saturday 20th, April 2024
canara news

ರುಡ್‍ಸೆಟ್ ಸಂಸ್ಥೆಗಳ ವಾರ್ಷಿಕ ಸಮಾವೇಶದ ಮುಕ್ತಾಯ ಸಮಾರಂಭ

Published On : 22 Sep 2018   |  Reported By : Rons Bantwal


ಯುವಕರಿಗೆ ಸರಿಯಾದ ಮಾರ್ಗದರ್ಶನ ಇಲ್ಲದಿರುವುದರಿಂದ ನಿರುದ್ಯೋಗಿಗಳಾಗಿ ಸಮಾಜ ಘಾತುಕ ಚಟುವಟಿಕೆಗಳಲ್ಲಿ ತೊಡಗಿ ದೇಶದ ಅಭಿವೃದ್ಧಿಯ ಮೇಲೆ ನೇರ ಪರಿಣಾಮ ಬೀರುತ್ತಿದೆ. ರುಡ್‍ಸೆಟ್ ಸಂಸ್ಥೆ ಅಂತಹ ನಿರುಪಯೋಗಿ ಯುವಕರನ್ನು ಗುರುತಿಸಿ ಅವರನ್ನು ತರಬೇತಿ ಮೂಲಕ ಉದ್ಯಮಶೀಲ ವ್ಯಕ್ತಿಗಳನ್ನಾಗಿ ಮಾಡಿ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದರ ಮೂಲಕ ಅವರನ್ನು ಉಪಯೋಗಿ ವ್ಯಕ್ತಿಗಳನ್ನಾಗಿ ಮಾಡುತ್ತಿದೆ ಎಂದು ರುಡ್‍ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಡಾ: ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಅವರು ರುಡ್‍ಸೆಟ್ ಸಂಸ್ಥೆಗಳ ವಾರ್ಷಿಕ ಸಮಾವೇಶದ ಮುಕ್ತಾಯ ಸಮಾರಂಭದಲ್ಲಿ ಮಾತನಾಡುತ್ತ ಹೇಳಿದರು. ಇವತ್ತಿನ ದಿವಸಗಳಲ್ಲಿ ಯಾರೂ ಗಂಡಾಂತರವನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಇದು ಸರ್ಕಾರವನ್ನು ತೀವ್ರ ಚಿಂತನೆಗೆ ಗುರಿ ಮಾಡಿದೆ. ಆದರೆ ರುಡ್‍ಸೆಟ್ ಸಂಸ್ಥೆಗಳ ಮೂಲಕ ಸಾವಿರಾರು ನಿರುದ್ಯೋಗಿಗಳು ಉದ್ಯೋಗವನ್ನು ಲಾಭದಾಯಕವಾಗಿ ನಡೆಸುವುದರ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿ ಲೆಕ್ಕಾಚಾರದ ಗಂಡಾಂತರವನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ರುಡ್‍ಸೆಟ್ ಸಂಸ್ಥೆ ಅಗತ್ಯಕ್ಕೆ ತಕ್ಕಂತೆ ತರಬೇತಿಗಳನ್ನು ನಡೆಸಿ ಮುಂಬರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಬೇಕೆಂದು ಸಲಹೆ ನೀಡಿದರು.

ಸಿಂಡಿಕೇಟ್ ಬ್ಯಾಂಕ್, ವಲಯ ಕಛೇರಿ, ಮಣಿಪಾಲದ ವಲಯ ವ್ಯವಸ್ಥಾಪಕರಾದ ಶ್ರೀ ಭಾಸ್ಕರ್ ಹಂದೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಬಹಳ ರಾಷ್ಟ್ರೀಕೃತ ಬಾಂಕ್‍ಗಳಿಗೆ ಮಾತ್ರ ಜನ್ಮ ನೀಡಿದ ಸ್ಥಳವಾಗದೆ ಅನೇಕ ಮಹಾನುಭಾವ ದಾರ್ಶನಿಕ ವ್ಯಕ್ತಿಗಳಿಗೆ ಜನ್ಮ ನೀಡಿದೆ. ಡಾ: ಡಿ. ವೀರೇಂದ್ರ ಹೆಗ್ಗಡೆ ಅಂತಹ ಮಹಾನುಭಾವರಲ್ಲಿ ಒಬ್ಬರಾಗಿದ್ದು ರುಡ್‍ಸೆಟ್ ಸಂಸ್ಥೆಗಳ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಿಂಡಿಕೇಟ್ ಬ್ಯಾಂಕ್ ಗ್ರಾಮೀಣ ಅಭಿವೃದ್ಧಿ ಮತ್ತು ಸ್ವ ಉದ್ಯೋಗ ಕ್ಷೇತ್ರಗಳ ಅಭಿವೃದ್ಧಿ ನಿರಂತರವಾಗಿ ಸಾಗಲು ರುಡ್‍ಸೆಟ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಸರ್ಕಾರ ಅನುಷ್ಟಾನಗೊಳಿಸಿದ ಅನೇಕ ಉಪಯೋಗಿ ಯೋಜನೆಗಳು ಧರ್ಮಸ್ಥಳದಿಂದ ಪ್ರೇರಿತವಾಗಿವೆ. ಸಂಘಟಿತ ಪ್ರಯತ್ನದಿಂದ ಮಾರುಕಟ್ಟೆಯ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯ ಎಂದು ಹೇಳಿದರು.

ಕೆನರಾ ಬ್ಯಾಂಕ್ ಪ್ರಧಾನ ಕಛೇರಿಯ ಉಪ ಮಹಾ ಪ್ರಬಂಧಕರಾದ ಶ್ರೀ ಎಸ್. ಅನಬುಕ್ಕರಸು ಸರ್ಕಾರದ ಮುಖ್ಯ ಉದೇಶ ರೈತರ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶ ಇರುವುದರಿಂದ ರುಡ್‍ಸೆಟ್ ಸಂಸ್ಥೆ ಹೆಚ್ಚು ಹೆಚ್ಚು ಕೃಷಿ ಆಧಾರಿತ ತರಬೇತಿಗಳನ್ನು ಆಯೋಜಿಸುವಂತೆ ಸಲಹೆ ನೀಡಿದರು.

ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್, ಬೆಂಗಳೂರಿನ ಉಪ ಮಹಾ ಪ್ರಬಂಧಕರಾದ ಶ್ರೀ ಕೆ. ಎನ್. ಶ್ರೀಕಾಂತ್ ಭಾರತೀಯ ಸಣ್ಣ ಕೈಗಾರಿಕಾ ಅಭಿವೃದ್ಧಿ ಬ್ಯಾಂಕ್ ಕಳೆದ 25 ವರ್ಷಗಳಿಂದ ರುಡ್‍ಸೆಟ್ ಸಂಸ್ಥೆಯೊಂದಿಗೆ ಗ್ರಾಮೀಣ ಅಭಿವೃದ್ಧಿಗೆ ಕೈ ಜೋಡಿಸಿದೆ. ರುಡ್‍ಸೆಟ್ ಸಂಸ್ಥೆಯ ಸಾಹಸಗಾಥೆ ನೀರೀಕ್ಷೆಗೂ ಮೀರಿದ್ದು ಇದಕ್ಕೆ ಡಾ: ಹೆಗ್ಗಡೆಯವರ ದೂರದೃಷ್ಟಿತ್ವದ ನಾಯಕತ್ವ ಕಾರಣ ಎಂದು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮದಲ್ಲಿ ಸಿಂಡಿಕೇಟ್ ಬ್ಯಾಂಕ್, ಪ್ರಾದೇಶಿಕ ಕಛೇರಿ, ಮಂಗಳೂರಿನ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ಸಿ. ಎಂ. ತಿಮ್ಮಯ್ಯ, ರಾಷ್ಟ್ರೀಯ ಆರ್‍ಸೆಟಿ ಸಂಸ್ಥೆಗಳ ನಿರ್ದೇಶಕರಾದ ಶ್ರೀ ಪಿ. ಸಂತೋಷ್ ಉಪಸ್ಥಿತರಿದ್ದರು. ರುಡ್‍ಸೆಟ್ ಸಂಸ್ಥೆ ವಿಜಯಪುರದ ಹಿರಿಯ ಉಪನ್ಯಾಸಕರಾದ ಶ್ರೀ ಬಸವರಾಜ್ ಪ್ರಾರ್ಥಿಸಿದರು. ರುಡ್‍ಸೆಟ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಎಂ. ಜನಾರ್ಧನ್ ಸ್ವಾಗತಿಸಿ ತರಬೇತಿಯ ಕಿರು ವರದಿಯನ್ನು ವಾಚಿಸಿದರು. ಶ್ರೀ ಎ. ಕೆ. ಮೊಥಾಲಿಯಾ, ನಿರ್ದೇಶಕರು, ರುಡ್‍ಸೆಟ್ ಸಂಸ್ಥೆ ನಡಿಯಾದ್ ವಂದಿಸಿದರು. ಶ್ರೀಮತಿ ಅನಸೂಯ, ಹಿರಿಯ ಉಪನ್ಯಾಸಕಿ, ರುಡ್‍ಸೆಟ್ ಸಂಸ್ಥೆ, ಉಜಿರೆ ಕಾರ್ಯಕ್ರಮ ನಿರೂಪಿಸಿದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here