Wednesday 14th, May 2025
canara news

ರಕ್ತದಾನ ಶಿಬಿರ ಕೊಟೆಕಾರಿನ ಅಜ್ಜಿನಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

Published On : 23 Sep 2018   |  Reported By : Rons Bantwal


ಉಳ್ಳಾಲ. ಎಸ್ ಡಿಐಪಿ ಅಜ್ಜಿನಡ್ಕ ಸಮಿತಿ ಮತ್ತು ಇಂಫಾಮೇ್ಶನ್, ಎಂಪವರ್ ಮೆಂಟ್ ಕೆ.ಸಿ ರೋಡು ಹಾಗೂ ಯೆನೆಪೂಯ ಮೇಡಿಕಲ್ ಕಾಲೇಜಿ ಸಹಯೋಗದೊಂದಿಗೆ ರಕ್ತದಾನ ಶಿಬಿರ ಕೊಟೆಕಾರಿನ ಅಜ್ಜಿನಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಅಜ್ಜಿನಡ್ಕ ಹಯಾತುಲ್ ಇಸ್ಲಾಂ ಮದರಸ ಸದರ್ ಮುಹಲ್ಲೀಂ ಅಬ್ದುಲ್ ಸತ್ತಾರ್ ಮದನಿ ದುಅ ನೇತೃತ್ವವಹಿಸಿದರು.

ಎಸ್ ಡಿಪಿ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಎಲ್ಲಾ ರಾಜಕೀಯ ಪಕ್ಷಗಳು ರಾಜಕೀಯಕ್ಕೆ ಸೀಮಿತವಾಗಿದ್ದು ಎಸ್ ಡಿಪಿಐ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳದೆ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿ ರಾಜಕೀಯದ ಜೋತೆ ಜನರ ಮಧ್ಯೆ ಸಹಕಾರಿ ನೆಲೆಯಲ್ಲಿ ಬೆಳೆದು ಬರುತ್ತಿದೆ ಎಂದು ಹೇಳಿದರು.

ಎಸ್ ಡಿಪಿಐ ಮಂಗಳೂರು ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯಾ ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಜ್ಜಿನಡ್ಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ 3ದಶಕಗಳ ಕಾಲ ಸೇವೆಗೈದ ನಿವೃತ್ತ ಶಿಕ್ಷಕಿ ಯಶೋದ ರವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಎಸ್ ಡಿಪಿಐ ಪಕ್ಷದ ಸಮಾಜಿಕ ಸೇವೆಯ ಬಗ್ಗೆ ಪತ್ರಿಕೆಯಲ್ಲಿ ಓದಿ ತಿಳಿದಿಕೊಂಡಿದೆನೆ. ಹೆಚ್ಚು ಸಮಾಜ ಸೇವೆಯಲ್ಲಿ ತೊಡಗಿರುವ ಸಂಘಟನೆ. ಭಾರತ ದೇಶದ ಪ್ರಜೆ ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಎಸ್ ಡಿಪಿಐ ಸಂಘಟನೆ ಭಾರತದ ರಾಯಬರಿಯ ಮೂಲಕ ಸುರಕ್ಷತವಾಗಿ ಭಾರತ ದೇಶಕ್ಕೆ ತಲುಪಿಸುವ ಸಂಘಟನೆಯಾಗಿದೆ ಎಂದು ಹೇಳಿದರು.

ಎಸ್ ಡಿಪಿಐ ಅಜ್ಜಿನಡ್ಕ ಘಟಕ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭ ದಾನಿಗಳಿಂದ 65 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು
ಎಸ್ ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ, ಕೊಟೆಕಾರು ಪಟ್ಟಣ ಪಂಚಾಯತ್ ಸದಸ್ಯೆ ಗಳಾದ ಝುಲೈಕ ಬಶೀರ್, ಸುಮತಿ, ಅಜ್ಜಿನಡ್ಕ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಸುಲೈಮಾನ್ ಹಾಜಿ, ಯೇನೆಪೋಯ ಮೆಡಿಕಲ್ ಕಾಲೇಜಿನ ರಕ್ತ ಸಂಗ್ರಹ ಘಟಕದ ಮುಖ್ಯಸ್ಥೆ ಚಿತ್ರಾಶಿ, ಎಸ್ ಡಿಪಿಐ ತಲಪಾಡಿ ವಲಯಾಧ್ಯಕ್ಷ ರಶೀದ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಇಬ್ರಾಹಿಂ ಎಚ್.ಎ, ಅಜ್ಜಿನಡ್ಕ ಶಾಲಾ ಮುಖ್ಯೋಪಾಧ್ಯಾಹಿನಿ ಭಾರತಿ, ಬದ್ರಿಯ ವೆಲ್ ಫರ್ ಸೊಸೈಟಿಯ ಅಧ್ಯಕ್ಷ ಹನೀಫ್ ಎಸ್.ಬಿ, ಐಎಸ್ ಫ್ ಅಲ್-ಅಭಾ ಸೌದಿ ಅರೇಬಿಯಾದ ಅಧ್ಯಕ್ಷ ಹನೀಫ್ ಮಂಜೇಶ್ವರ, ಎಸ್ ಡಿಪಿಐ ಅಜ್ಜಿನಡ್ಕ ಉಪಾಧ್ಯಕ್ಷ ಇಸ್ಮಾಯಿಲ್ ಮುಳ್ಳುಗುಡ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎಸ್ ಡಿಪಿಐ ಅಜ್ಜಿನಡ್ಕ ಕೋಶಾಧಿಕಾರಿ ಇಬ್ರಾಹಿಂ ಅಜ್ಜಿನಡ್ಕ ಸ್ವಾಗತಿದರು. ಎಸ್ ಡಿಪಿಐ ಉಳ್ಳಾಲ ನಗರ ಸಭೆ ಸಮಿತಿಯ ಕಾರ್ಯದರ್ಶಿ ಮುಝಫರ್ ವಂದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here