Monday 7th, July 2025
canara news

ರಾಮರಾಜ ಕ್ಷತ್ರಿಯ ಸಂಘದ ವತಿಯಿಂದ ಗಣೇಶೋತ್ಸವ ಸಂಭ್ರಮ

Published On : 25 Sep 2018   |  Reported By : Rons Bantwal


ಮುಂಬಯಿ, ಸೆ.25: ರಾಮರಾಜ ಕ್ಷತ್ರೀಯ ಗಣೇಶೋತ್ಸವ ಸಮಿತಿಯ ವತಿಯಿಂದ ದಿನಾಂಕ 13.9.2018 ರಿಂದ 14.9.2018 ರ ವರೆಗೆ ಸಾಕಿನಾಕದ ಕಾವೇರಿ ಕಾಂಪ್ಲೆಕ್ಸ್‍ನಲ್ಲಿರುವ ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಪೂರ್ಣನಂದ ಶೇರಿಗಾರ್ ಅವರ ಅಧ್ಯಕ್ಷತೆಯಲ್ಲಿ ನೇರವೇರಿತು.

ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮುಂಜಾನೆಯಿಂದ ಗಣಪತಿ ಪ್ರತಿಷ್ಠಾಪನೆ, ನಂತರ ಸಂಘದ ಕಾರ್ಯದರ್ಶಿ ರತ್ನಾಕರ ಬಟ್ವಾಡಿ ಮತ್ತು ರೂಪಾ ಬಂಟ್ವಾಡಿ ದಂಪತಿ ಗಣಹೋಮ ಪೂಜೆಯನ್ನು ನೇರವೇರಿಸಿದರು. ಶ್ರೀ ಸತ್ಯನಾರಾಯಣ ಪೂಜೆಯನ್ನು ಶೇಷಯ್ಯ ಕೋತ್ವಾಲ್ ಮತ್ತು ಸವಿತಾ ಕೋತ್ವಾಲ್ ದಂಪತಿ ನೇರವೇರಿಸಿದರು. ಪೂಜಾ ವಿಧಿ ವಿಧಾನಗಳನ್ನು ಮಧುಸೂಧನ್ ಭಟ್ ಅವರು ನೇರವೇರಿಸಿದರು. ನಂತರ ಅನ್ನಸಂತರ್ಪಣೆ ನೇರವೇರಿತು.

ಇದೇ ಸಂದರ್ಭದಲ್ಲಿ ನೇರವೇರಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿsಯಾಗಿ ಉಪಸ್ಥಿತರಿದ್ದ ರಾಧಾಕೃಷ್ಣ ಯು., ಲಕ್ಷ್ಮೀಶ ಹವಾಲ್ದಾರ್ ಅವರನ್ನು ಪುಷ್ಪಗುಚ್ಛ, ಸ್ಮರಣಿಕೆ ನೀಡಿ ಗೌರವಿಸಿದರು. ವೇದಿಕೆಯಲ್ಲಿ ಬಿ.ಗಣಪತಿ, ದೇವರಾಯ ಎಂ.ಶೇರಿಗಾರ್. ಶಂಕರ ಮುದ್ದೋಡಿ, ಪ್ರಕಾಶ ಭಟ್. ದಯಾನಂದ ಜಿ.ಶೇರೆಗಾರ್, ಡಾ| ದೇವದಾಸ್, ಶ್ರೀನಿವಾಸ ಕೆ., ವೆಂಕಟೇಶ್ ಬಿಜೂರು, ಕೆ.ವಿ ಹೆಗ್ಡೆ, ಶುಭಾ ವಿ.ರಾವ್, ವಿಪುಲ ಎಸ್.ನಾಯಕ್, ರಾಜಶೇಖರ ಹೆಗ್ಡೆ, ಸತೀಶ್ ಕಳೂರು, ಸಂಘದ ಉಪಾಧ್ಯಕ್ಷ ವಿಶ್ವನಾಥ ಎಂ.ಶೇರೆಗಾರ್, ಕೋಶಾಧಿಕಾರಿ ಆರ್ ಕೆ.ದಿನೇಶ್, ಕೆ.ವಿಶ್ವನಾಥ ಶೇರೆಗಾರ್, ಪಿ.ಸುಧೀರ್ ಶೇರೆಗಾರ್, ಜಿ.ದಿನೇಶ್ ಶೇರೆಗಾರ್, ಅಣ್ಣಯ್ಯ ಶೇರೆಗಾರ್, ನಾಗರಾಜ ಆರ್. ಶೇರೆಗಾರ್, ವಾಸುದೇವ ಶೇರೆಗಾರ್, ಅನೂಪ ಕುಂದಾಪುರ, ಕಿರಣ್ ಆರ್. ಶೇರೆಗಾರ್, ಸಂತೋಷ್ ಶೇರೆಗಾರ್, ಸುರೇಂದ್ರ ಆರ್. ಶೇರೆಗಾರ್ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನೇರವೇರಿತು. ದಿನಾಂಕ 14.09.2018 ರಂದು ಶುಕ್ರವಾರ ಸಂಜೆ ಮೆರವಣಿಗೆ ಮೂಲಕ ಶ್ರೀ ಮಹಾ ಗಣಪತಿಯನ್ನು ಜಲವಿಸರ್ಜನೆ ಮಾಡಲಾಯಿತು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here