Wednesday 14th, May 2025
canara news

ರೋಜರಿ ಕ್ರೆಡಿಟ್ ಕೋ-ಒ ಸೊಸೈಟಿ ಲಿ. ಕುಂದಾಪುರ. 27ನೇ ವಾರ್ಷಿಕ ಸಭೆ - ಸ್ಥಿರ ಮತ್ತು ಉತ್ತಮ ಪ್ರಗತಿಯತ್ತ ಶೇ. 17 ಡಿವಿಡೆಂಡ್ ಘೋಷಣೆ

Published On : 26 Sep 2018   |  Reported By : Bernard J Costa


ಕುಂದಾಪುರ, ಸೆ.27: ‘ಅನೇಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಸಂಘವು ಕಳೆದ ಹಣಕಾಸು ವರ್ಷದಲ್ಲಿ ಪ್ರಮುಖ ಕ್ಷೇತ್ರಗಳಲ್ಲಿ ಸ್ಥಿರ ಮತ್ತು ಉತ್ತಮ ಪ್ರಗತಿಯನ್ನು ಹೊಂದಿ ಸೊಸೈಟಿ ಸೊಸೈಟಿಯು ಕಳೆದ ಸಾಲಿನಲ್ಲಿ 255 ಕೋಟಿ ರೂಪಾಯಿ ವ್ಯವಹಾರ ಮಾಡಿ ಹೊಸ ಮೈಲಿಗಲ್ಲನ್ನು ದಾಟಿದೆ. 53 ಕೋಟಿ ರೂ. ಠೇವಣಿ ಸಂಗ್ರಹಿಸಿ 63 ಲಕ್ಷ ರೂಪಾಯಿ ನಿವ್ವಳ ಲಾಭ ಪಡೆದಿದೆ’ ಕುಂದಾಪುರ ಭಾನುವಾರದಂದು ಸಂತ ಮೇರಿಸ್ ಪಿ.ಯು. ಕಾಲೇಜ್ ಸಭಾಂಗಣದಲ್ಲಿ ನೆಡೆದ ಪ್ರತಿಷ್ಟಿತ ರೋಜರಿ ಕ್ರೆಡಿಟ್ ಕೋ-ಒಪರೇಟಿವ್ ಸೊಸೈಟಿ ಲಿ. ಕುಂದಾಪುರ. 27ನೇ ವಾರ್ಷಿಕ ಸಭೆಯಲ್ಲಿ ಸೊಸೈಟಿಯ ಅಧ್ಯಕ್ಷ ಜೋನ್ಸನ್ ಡಿಆಲ್ಮೇಡಾ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು ‘ಸೊಸೈಟಿಯನ್ನು ಇನ್ನು ಬಹಳಸ್ಟು ಎತ್ತರಕ್ಕೆ ಬೆಳೆಸುವ ಇರಾದೆ ಮತ್ತು ಸಂಕಲ್ಪ ನಮ್ಮದಾಗಿದೆ, ಸಂಸ್ಥೆ ಈಗಾಗಲೇ ಕುಂದಾಪುರ ತಾಲೂಕು ಗಡಿಯನ್ನು ದಾಟಿ ಉಡುಪಿ ಜಿಲ್ಲೆಗೆ ನಮ್ಮ ಶಾಖೆಗಳನ್ನು ವಿಸ್ತರಿಸಿ ಅಲ್ಲಿ ನಮ್ಮ ಸೊಸೈಟಿಯು ದೊಡ್ಡ ಮೊತ್ತದ ಠೇವಣಿಯನ್ನು ಸಂಗ್ರಹಿಸಿದೆ, ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯಾದಾದ್ಯಂತ ಶಾಖೆಯನ್ನು ತೆರೆಯುವ ಕನಸು ಈ ಆಡಳಿತ ಮಂಡಳಿ ಕಂಡಿದೆ ಎಂದು ಅವರು ಹೇಳುತ್ತಾ ಸದಸ್ಯರಿಗೆ ಶೇ. 17 ಡಿವಿಡೆಂಂಡ್ ಘೋಷಣೆ ಮಾಡಿದರು.

ಸಂಘದ ಸಲಹೆಗಾರ ಕುಂದಾಪುರ ವಲಯ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ಸ್ಟ್ಯಾನಿ ತಾವ್ರೊ ‘ಸಂಸ್ಥೆಗಳಲ್ಲಿ ಜನರಿಗೆ ವಿಶ್ವಾಸ ಇರಬೇಕು, ಸಂಸ್ಥೆಗೆ ಜನರಲ್ಲಿ ವಿಶ್ವಾಸ ಇರಬೇಕು ಹಾಗಿದ್ದಲ್ಲಿ ವ್ಯಹಾರ ಉತ್ತಮವಾಗಿ ನೆಡೆಯುತ್ತದೆ, ಸಂಸ್ಥೆಯಲ್ಲಿ ಚುನಾಯಿತರಾದವರು ಜವಾಬ್ದಾರಿಯಿಂದ ಉತ್ತಮವಾಗಿ ಆಡಳಿತ ನೆಡೆಸಬೇಕು, ಇಲ್ಲಿನ ಹಿರಿಯರು ದೂರದ್ರಷ್ಟಿ ಇಟ್ಟುಕೊಂಡು ಈ ಸಂಸ್ಥೆಯನ್ನು ಹುಟ್ಟುಹಾಕಿದ್ದರು, ಬ್ಯಾಂಕುಗಳು ಎಸ್ಟೇ ಇದ್ದರೂ ಸಹಕಾರಿ ಸಂಘಗಳಿಂದ ಜನರಿಗೆ ಉಪಯೋಗವಿದೆ, ಸಂಸ್ಥೆಯು ರೋಜರಿ ಮಾತೆಯ ಆಶಿರ್ವಾದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಲಿ’ ಎಂದು ಅವರು ಆಶಿರ್ವಚನ ಮಾಡಿದರು.

ಪಡುಕೋಣೆ ಶಾಖಾ ಸಭಾಪತಿ ಕಿರಣ್ ಮೆಲ್ವಿನ್ ಲೋಬೊ ಸ್ವಾಗತಿಸಿದರು, ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿ ಪಾಸ್ಕಲ್ ಡಿಸೋಜಾ ವರದಿಯನ್ನು ವಾಚಿಸಿದರು. ವ್ಯಹಸ್ಥಾಪಕಿ ಮೇಬಲ್ ಪುಟಾರ್ಡೊ, ಉಪಾಧ್ಯಕ್ಷರಾದ ಜೋನ್ ಮಿನೇಜೆಸ್, ನಿರ್ದೇಶಕಿ ಡಾಯಾನಾ ಡಿಆಲ್ಮೇಡಾ ಸೊಸೈಟಿಯ ಸಂಘದ ಲೆಕ್ಕ ಪತ್ರಗಳನ್ನು ಹಾಗೂ ಲಾಭಾಂಶ ವಿಂಗಡನೆಯನ್ನು ಸಭೆಯ ಮುಂದಿಟ್ಟರು. ಸದಸ್ಯರು ತಮ್ಮ ಶಂಕ್ಕೆ ಸಲಹೆಗಳನ್ನು ಮುಂದಿಟ್ಟರು. ಲೆಕ್ಕ ಪರೀಶೋಧಕ ವೆಂಕಟರಮಣ ಇವರು ಆದಾಯ ತೆರಿಗೆ ಹಾಗೂ ಸೊಸೈಟಿ ವ್ಯವಹಾರದ ಬಗ್ಗೆ ಬಗ್ಗೆ ಮಾಹಿತಿಯನ್ನು ಸಭೆಗೆ ನೀಡಿದರು. ಬಸ್ರೂರು ಶಾಖಾ ಸಭಾಪತಿ ಫಿಲಿಪ್ ಡಿ’ ಕೋಸ್ತ, ಕೋಟೆಶ್ವರ ಶಾಖಾ ಸಭಾಪತಿ ಸ್ಟ್ಯಾನಿ ಡಿಸೋಜಾ, ಗಂಗೊಳ್ಳಿ ಶಾಖಾ ಸಭಾಪತಿ ಜೆರಾಲ್ಡ್ ಕ್ರಾಸ್ತಾ, ನಿರ್ದೇಶಾಕರಾದ ಜಾಕೋಬ್ ಡಿ’ ಸೋಜಾ, ಶಾಂತಿ ಕರ್ವಾಲ್ಲೊ, ಸಲಹದಾರಾದ ಬ್ಯಾಪ್ಟಿಸ್ಟ್ ಡಾಯಸ್ ಉಪಸ್ಥಿತರಿದ್ದರು. ಬೈಂದೂರು ಶಾಖಾ ಸಭಾಪತಿ ಮಾರ್ಟಿನ್ ಡಾಯಸ್ ವಂದಿಸಿದರು, ನಿರ್ದೇಶಕ ವಿನೋದ್ ಕ್ರಾಸ್ತಾ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here