Wednesday 14th, May 2025
canara news

ಭಾರತೀಯ ಸೇನೆಗೆ ನಿಯುಕ್ತಿಗೊಂಡ ಸೂಡ ಮೂಲದ ಶೆಟ್ಟಿ ಶಮನ್

Published On : 27 Sep 2018   |  Reported By : Rons Bantwal


ಕಾರ್ಕಳ ಸೂಡದ ಯುವಕ ಇಂಡಿಯನ್ ಆರ್ಮಿ ಲೆಫ್ಟಿನೆಂಟ್ ಕ್ಯಾಪ್ಟನ್

ಮುಂಬಯಿ (ಬೆಳ್ಮಣ್), 27: ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 33ನೇ ರ್ಯಾಂಕ್ ಪಡೆದು ಇಂಡಿಯನ್ ಆರ್ಮಿ ಆಫೀಸರ್ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ನಿಯುಕ್ತಿಗೊಂಡ ಕಾರ್ಕಳ ತಾಲೂಕಿನ ಬೆಳ್ಮಣ್ ಸಮೀಪದ ಸೂಡದ ಯುವಕ ಲೆಫ್ಟಿನೆಂಟ್ ಶಮನ್ ಶೆಟ್ಟಿ ಈಗ ಸೇನಾ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿ ಸಾಧನೆ ಮಾಡಿದ್ದಾರೆ. ಮುಂಬಯಿ ಉದ್ಯಮಿ, ಉಡುಪಿ ಬೈಲೂರು ಪಡುಮನೆ ದಿ| ಸುಧಾಕರ ಶೆಟ್ಟಿ ಮತ್ತು ಸೂಡಕಲ್ಲಬೈಲು ಶೋಭಾ ಶೆಟ್ಟಿ ದಂಪತಿ ಸುಪುತ್ರ ಕ್ಯಾ| ಶಮನ್ ಸುಧಾಕರ ಶೆಟ್ಟಿ ಪದೋನ್ನತಿಗೊಂಡು ಸೇನೆಯಲ್ಲಿಕ್ಯಾಪ್ಟನ್ ಆಗಿ ನೇಮಕ ಗೊಂಡಿದ್ದಾರೆ.

ಕ್ಯಾಪ್ಟನ್ ಆಗಿ ಪದೋನ್ನತಿ:
ಶಮನ್ ಶೆಟ್ಟಿ 2016ರಅಕ್ಟೋಬರ್ 1ರಿಂದ ಒಂದು ವರ್ಷ ಚೆನೈನ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಮುಗಿಸಿ 2017ರಲ್ಲಿ ಇಂಡಿಯನ್ ಆರ್ಮಿ ಆಫೀಸರ್ ಲೆಫ್ಟಿನೆಂಟ್ ಆಗಿ ನೇಮಕ ಗೊಂಡಿದ್ದರು. ಭಾರತೀಯ ಭೂ ಸೇನೆಯಲ್ಲಿ 9ನೇ ರಜಪೂತಾ ಅಲ್ಲಿನ ರೈಫಲ್ಸ್‍ಗೆ ಇನ್‍ಫೆಂಟ್ರಿ ಬೆಟಾಲಿಯನ್ ಲೆಫ್ಟಿನೆಂಟ್ ಆಗಿ ನಿಯುಕ್ತಿ ಗೊಂಡು ಅಸ್ಸಾಂನಲ್ಲಿ ಕರ್ತವ್ಯ ನಿರ್ವಹಿಸಿ ಈಗ ಸೇನಾ ಕ್ಯಾಪ್ಟನ್ ಆಗಿ ಅಸ್ಸಾಂರೆಜಿಮೆಂಟ್‍ನ ಸೇನಾ ಶಿಬಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸೂಡದಲ್ಲಿ ಹುಟ್ಟಿ ಪ್ರಾಥಮಿಕ,ಪ್ರೌಢ ಮತ್ತು ಪಿಯುಸಿ ಶಿಕ್ಷಣವನ್ನು ಮುಂಬೈಯಲ್ಲಿ ಪಡೆದಿದ್ದರು. ದಾವಣಗೆರೆಯ ಬಾಪೂಜಿ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನೊಲಾಜಿಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಇಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ 33ನೇ ರ್ಯಾಂಕ್ ಪಡೆದ ಪ್ರತಿಭಾನ್ವಿತರಾದ ಇವರು ಚೆನ್ನೈನಲ್ಲಿ ಒಂದು ವರ್ಷದ ತರಬೇತಿ ಪೂರ್ಣಗೊಳಿಸಿದ ಬಳಿಕ 2017ರಲ್ಲಿ ಭಾರತೀಯ ಸೇನೆಯಲ್ಲಿ ಇಂಡಿಯನ್ ಆರ್ಮಿ ಆಫೀಸರ್ ಲೆಫ್ಟಿನೆಂಟ್ ಆಗಿ ನೇಮಕ ಗೊಂಡಿದ್ದರು.

ಛಲ ಹಾಗೂ ಸತತ ಪರಿಶ್ರಮದಿಂದ ಸೇನೆಯಲ್ಲಿ ನಿಯುಕ್ತಿಗೊಂಡು ಪದೋನ್ನತಿ ಹೊಂದಿ ಉತ್ತಮ ಸಾಧನೆಯ ಮೂಲಕ ದೇಶ ಸೇವೆ ನಡೆಸುತ್ತಿರುವುದು ತುಂಬಾ ಅಭಿಮಾನ ಮತ್ತು ಹೆಮ್ಮೆಯ ಸಂಗತಿ. ಗಣೇಶ್ ಶೆಟ್ಟಿ ಕಲ್ಲಬೈಲು, ಸೂಡ (ಸೋದರ ಮಾವ), ಅಧ್ಯಕ್ಷರು ಸೂಡ ಬಂಟರ ಸಂಘ, ಮಾಜಿ ಸದಸ್ಯರು ಬೆಳ್ಮಣ್ ಗ್ರಾಮ ಪಂಚಾಯತ್.) ತಾಯಿ ಹಾಗೂ ಗುರು ಹಿರಿಯರ ಆಶೀರ್ವಾದದೊಂದಿಗೆ ದಕ್ಷ ಹಾಗೂ ಪ್ರಾಮಾಣಿಕ ಸೇವೆಯಿಂದ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿದ್ದೇನೆ. ದೇಶರಕ್ಷಕನಾಗಿ ಸೇನೆಯಲ್ಲಿದ್ದು ದೇಶಸೇವೆ ಮಾಡುವ ಸುಯೋಗ ಒದಗಿ ಬಂದುದು ಹೆಮ್ಮೆ ಅನಿಸುತ್ತಿದೆ ಎಂದು ಕ್ಯಾ| ಶಮನ್ ಶೆಟ್ಟಿ ತಿಳಿಸಿರುತ್ತಾರೆ ಎಂದು ಪತ್ರಕರ್ತ ಬಿ.ಪುಂಡಲೀಕ ಮರಾಠೆ ಶಿರ್ವ ತಿಳಿಸಿರುತ್ತಾರೆ.

ಜನರಲ್ ಆಫೀಸರ್ ಕಮಾಂಡಿಂಗ್ ಇನ್‍ಚೀಫ್ ಗೌರವ:
ಕ್ಯಾ| ಶಮನ್ ಶೆಟ್ಟಿ ಬೆಟಾಲಿಯನ್‍ಇಂಟಲಿಜೆನ್ಸ್‍ಟೀಮ್‍ನ ಸದಸ್ಯರಾಗಿದ್ದು ಭಯೋತ್ಪಾದಕರೊಂದಿಗಿನ ಕಾರ್ಯಾಚರಣೆಯಲ್ಲಿ ಉಗ್ರರನ್ನು ಜೀವಂತವಾಗಿ ಸೆರೆ ಹಿಡಿದಿದ್ದರು. ಸೇನೆಯ ಆಪರೇಷನ್ ರ್ಹಿನೋ ಕಾರ್ಯಾಚರಣೆಯಲ್ಲಿ ನಡೆಸಿದ ಅಪ್ರತಿಮ ಸೇವೆಗಾಗಿ ಜನರಲ್ ಆಫೀಸರ್ ಕಮಾಂಡಿಂಗ್ ಇನ್‍ಚೀಫ್ (ಜಿ.ಒ.ಸಿ) ಗೌರವವನ್ನು ಈಸ್ಟರ್ನ್ ಆರ್ಮಿ ಕಮಾಂಡರ್ ಮತ್ತು ರೆಜಿಮೆಂಟ್ ಕರ್ನಲ್ ಲೆ| ಜ| ಅಭಯ್ ಕೃಷ್ಣ ಅವರು ಸೇನಾ ಮುಖ್ಯಸ್ಥ ಜ| ಬಿಪಿನ್ ರಾವತ್ ಅವರ ಉಪಸ್ಥಿತಿಯಲ್ಲಿ ಸೆಪ್ಟಂಬರ್ 22 ರಂದು ಪ್ರದಾನ ಮಾಡಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here