Wednesday 14th, May 2025
canara news

ಅ.10-12: ಮೈಸೂರು ಅಸೋಸಿಯೇಷನ್‍ನಲ್ಲಿ ನಾಟಕೋತ್ಸವ

Published On : 28 Sep 2018   |  Reported By : Rons Bantwal


ಕನ್ನಡ ಸಂಘಗಳ ನಾಡಹಬ್ಬ- ಉಪಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ್‍ಗೆ ಸನ್ಮಾನ

ಮುಂಬಯಿ, ಸೆ.27: ಕನ್ನಡ ಕಲಾ ಕೇಂದ್ರ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ನಾಟಕೋತ್ಸವ ಆಯೋಜಿಸಿದೆ.

ನಾಟಕೋತ್ಸವು ಮಾಟುಂಗಾ ಪೂರ್ವದ (ಸೆಂಟ್ರಲ್ ರೈಲ್ವೇ) ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಸಭಾಗೃಹದಲ್ಲಿ ಇದೇ ಅ.10ನೇ ಬುಧವಾರ ಸಂಜೆ ಆರಂಭ ಗೊಳ್ಳಲಿದೆ. ಅಂದು ಸಂಜೆ 6.30 ಗಂಟೆಗೆ ಗಜಾನನ ಯುವಕ ಮಂಡಳಿ ಶೇಷಗಿರಿ ಇವರಿಂದ ಎಂ.ಗಣೇಶ್ ಉಡುಪಿ ನಿರ್ದೇಶನದಲ್ಲಿ `ವಾಲಿವಧೆ' ಕನ್ನಡ ನಾಟಕ, ಅ.11ನೇ ಗುರುವಾರ ಸಂಜೆ 6.30 ಗಂಟೆಗೆ ರಂಗಭೂಮಿ ಉಡುಪಿ ತಂಡವು ರವಿರಾಜ್ ಹೆಚ್.ಪಿ ನಿರ್ದೇಶನದ `ಐ.ಸಿ.ಯು' ಕನ್ನಡ ನಾಟಕ ಪ್ರಸ್ತುತ ಪಡಿಸಲಿದೆ. ಅ.12ನೇ ಶುಕ್ರವಾರ ಸಂಜೆ 6.30 ಗಂಟೆಗೆ ರಂಗಾಯಣ ಮೈಸೂರು ತಂಡವು ಆಶಿಷ್ ಪಾಠಕ್ ನಿರ್ದೇಶನದಲ್ಲಿ `ಪುಂಟಿಲ' ಕನ್ನಡ ನಾಟಕ ಪ್ರದರ್ಶಿಸಲಿದೆ ಎಂದು ಉಭಯ ಸಂಸ್ಥೆಗಳ ಸಂಘಟಕರು ತಿಳಿಸಿದ್ದಾರೆ.

ಅ.13-14: ಕನ್ನಡ ಸಂಘ-ಸಂಸ್ಥೆಗಳಿಂದ ನಾಡಹಬ್ಬ:

ಕರ್ನಾಟಕ ಸರ್ಕಾರ ಮತ್ತು ಮುಂಬಯಿ ಕನ್ನಡ ಸಂಘಗಳು ಒಡಗೂಡಿ ಇದೇ ಅ.13ನೇ ಶÀನಿವಾರ ಸಂಜೆ ನಾಡಹಬ್ಬ ಹಮ್ಮಿಕೊಳ್ಳಲಾಗಿದೆ. ಸಂಜೆ 4.00 ಗಂಟೆಗೆ ರಾಷ್ಟೀಯ ಕನ್ನಡ ಶಾಲೆ ವಡಲಾ ಇಲ್ಲಿಂದ ಮೈಸೂರು ಅಸೋಸಿಯೇಷನ್ ವರೆಗೆ ಕನ್ನಡಾಂಭೆ ಕಾನಡಾ ವಿಠ್ಠಲು ಮೆರವಣಿಗೆ. ಸಂಜೆ 5.00 ಗಂಟೆಗೆ ಸವಿತಿನಿಸು. 5.30 ಗಂಟೆಗೆ ಶಾಲಾಮಕ್ಕಳಿಂದ ನೃತ್ಯ ಕಾರ್ಯಕ್ರಮ.6.00 ಗಂಟೆಗೆ ಕರ್ನಾಟಕ ರಾಜ್ಯದ ಉಪಮುಖ್ಯಮಂತ್ರಿ ಸನ್ಮಾನ್ಯ ಡಾ| ಜಿ. ಪರಮೇಶ್ವರ್ ಅವರಿಗೆ ವಿವಿಧ ಸಂಘ ಸಂಸ್ಥೆಗಳಿಂದ ಸನ್ಮಾನ. ಸಂಜೆ 6.30ಕ್ಕೆ ರಂಗ ತರಬೇತಿಯಿಂದ `ಸಮಾಜ ಸುಧಾರಣೆ' ಚಲನಚಿತ್ರ ಪ್ರದರ್ಶನ. 7.15 ಗಂಟೆಗೆ ಮೈಸೂರು ಸೆರೆಮನೆಯಲ್ಲಿರುವ ಸೆರೆಯಾಳುಗಳಿಂದ ಹುಲುಗಪ್ಪ ಕಟ್ಟೀಮ ನಿರ್ದೇಶನದಲ್ಲಿ ಜಾ `ಸಂಗ್ಯಾ ಬಾಳ್ಯಾ' ನಪದ ನಾಟಕ.

ಅ.14ನೇ ಭಾನುವಾರ ಮಧ್ಯಾಹ್ನ 2.00 ಗಂಟೆಗೆ ರಂಗಭೂಮಿಯಿಂದ `ಸಮಾಜ ಸುಧಾರಣೆ' ವಿಚಾರ ಸಂಕಿರಣ. ಸಂಜೆ 4.00 ಗಂಟೆಗೆ ಸುಗಮ ಸಂಗೀತ. 6.00 ಗಂಟೆಗೆ ಜಯಂತ ಕಾಯ್ಕಿಣಿ ರಚನೆಯ, ಹುಲುಗಪ್ಪ ಕಟ್ಟೀಮ ನಿರ್ದೇಶನದಲ್ಲಿ ಮೈಸೂರು ಕಾರಾಗೃಹದಲ್ಲಿರುವ ಸೆರೆಯಾಳು ಕಲಾವಿದರಿಂದ `ಜತೆಗಿರುವನು ಚಂದಿರ' ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ಮಹಾನಗರದಲ್ಲಿ ಕನ್ನಡ ಸಂಘ-ಸಂಸ್ಥೆಗಳ ಎಲ್ಲಾ ಮುಖ್ಯಸ್ಥರು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಲ್ಲಾ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಸಂಘಟಕರು ಈ ಮೂಲಕ ವಿನಂತಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here