Wednesday 14th, May 2025
canara news

ಮುಂಬಯಿನಲ್ಲಿ ಜರಗುವ ದ್ವಿತೀಯ ಭಾರತಭಾರತಿ ಸ್ನೇಹ ಮಿಲನದ ಪೂರ್ವಭಾವಿ ಸಭೆ

Published On : 29 Sep 2018   |  Reported By : Rons Bantwal


ಸಾಮರಸ್ಯದ ಜೀವನ ಧರ್ಮವೇ ಶ್ರೇಷ್ಠವಾದುದು : ತೋನ್ಸೆ ಆನಂದ್ ಶೆಟ್ಟಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಸೆ.29: ಭಾರತಿಯರಲ್ಲಿ ಭಾರತೀಯತೆಯೇ ಸೌಹಾರ್ದತೆಯ ಬದುಕುವಾಗಿದೆ. ಆದಿಯಿಂದಲೂ ಒಗ್ಗೂಡಿವಿಕೆಯ ಬಾಳಿನಿಂದ ನಾವೆಲ್ಲರೂ ಒಂದು ಎಂದು ವಿಶ್ವಕ್ಕೇ ಸಾರಿದ ಭಾರತೀಯರಲ್ಲಿ ಜಾತಿ ಎನ್ನುವುದಿಲ್ಲ. ಅದರಲ್ಲೂ ತುಳು ಕನ್ನಡಿಗರು ತುಂಬಾ ಬುದ್ಧಿವಂತರು, ತಿಳುವಳಿಕಾ ಜ್ಞಾನಿಗಳು. ಆದ್ದರಿಂದ ನಮ್ಮಲ್ಲಿನ ಸಮಾನತೆಯ ಬದುಕಿನಲ್ಲಿ ಸ್ಪರ್ಧೆ ಬೇಡ. ನಾವು ಅರಿವಿನ ಸಹಾಯದಿಂದ ಸ್ಪರ್ಧೆ ಮಾಡುವ ಅಗತ್ಯವಿದ್ದು, ವಿಚಾರಧಾರೆ, ಜ್ಞಾನವಿಲ್ಲದೆ ಯಾರನ್ನು ಹೀಯಾಳಿಸುವುದು ಸರಿಯಲ್ಲ. ನಮ್ಮಲ್ಲಿ ವ್ಯಾಪರ, ವಹಿವಟ್ಟುಗಳಲ್ಲಿ ಸ್ಪರ್ಧೆ ಇರಲಿ. ಆದರೆ ಬದುಕಿಗಾಗಿ ಸ್ಪರ್ಧೆ ಸಲ್ಲದು. ನಮ್ಮ ಜೀವನ ಧರ್ಮವೇ ಶ್ರೇಷ್ಠವಾದುದು. ಭವ್ಯ ಭಾರತಕ್ಕೆ ವಿಶಾಲ ಹೃದಯಿಗಳಗೋಣ. ಎಂದು ಮಹಾನಗರದಲ್ಲಿನ ಪ್ರತಿಷ್ಠಿತ ಕೈಗಾರಿಕೋದ್ಯಮಿ, ಭಾರತ ಭಾರತಿ ಕರ್ನಾಟಕ ಕೌಟುಂಬಿಕ ಸ್ನೇಹ ಸಮ್ಮೀಲನ ಮುಂಬಯಿ ಸಮಿತಿ ಗೌರವಾಧ್ಯಕ್ಷ ತೋನ್ಸೆ ಆನಂದ್ ಎಂ.ಶೆಟ್ಟಿ ತಿಳಿಸಿದರು.

ಬರುವ ನವೆಂಬರ್‍ನಲ್ಲಿ ಬಂಟರ ಭವನದಲ್ಲಿ ಆಯೋಜಿಸಲಾಗಿರುವ ಮುಂಬಯಿನ ದ್ವಿತೀಯ ಭಾರತ ಭಾರತಿ ಕರ್ನಾಟಕ ಕೌಟುಂಬಿಕ ಸ್ನೇಹ ಸಮ್ಮೀಲನದ ಪೂರ್ವ ತಯಾರಿ ಸಭೆ ಇಂದಿಲ್ಲಿ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಸಂಘದ ಅನೆಕ್ಸ್ ಕಟ್ಟಡದಲ್ಲಿನ ವಿಜಯಲಕ್ಷಿ ್ಮೀ ಮಹೇಶ್ ಶೆಟ್ಟಿ (ಬಾಬಾ ಗ್ರೂಪ್) ಕಿರು ಸಭಾಗೃಹದಲ್ಲಿ ನಡೆಸಲಾಗಿದ್ದು ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಆನಂದ್ ಶೆಟ್ಟಿ ಮಾತನಾಡಿದರು.

ಪ್ರಧಾನ ಅಭ್ಯಾಗತರಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರಸಾಲ್ಯಾನ್, ಗೌರವ ಕೋಶಾಧಿಕಾರಿ ಶಿವಾನಂದ ಪೈ ವೇದಿಕೆಯಲ್ಲಿ ಆಸೀನರಾಗಿದ್ದರು.

ಬರೇ ಟಿಆರ್‍ಪಿ ಕಿಮ್ಮತ್ತು, ಸ್ಪರ್ಧೆಗಾಗಿ ಮಾಧ್ಯಮಗಳು ಜನರನ್ನು ತಪ್ಪು ಹಾದಿಗೆ ಒಯ್ಯುತ್ತಿರುವ ಸತ್ಯ ಬುದ್ಧಿವಂತರು ತಿಳಿಯುತ್ತಿದ್ದು ಇದರಿಂದ ಮಾಧ್ಯಮಗಳ ಮೇಲೆ ಜನತೆ ವಿಶ್ವಾಸ ಕಳೆಯುವಂತಾಗಿದೆ ಎಂದು ಖೇದ ವ್ಯಕ್ತಪಡಿಸಿದ ಆನಂದ್ ಶೆಟ್ಟಿ, ನಮ್ಮ ರಾಷ್ಟ್ರವನ್ನು, ಶಕ್ತಿಶಾಲಿಯಾಗಿ ಮಾಡುವುದು, ಅದನ್ನು ಉಳಿಸಿಡುವ ಏಕಮೇವ ಮಾರ್ಗ, ರಾಷ್ಟ್ರದಲ್ಲಿನ ಎಲ್ಲಜನರನ್ನು ಎಚ್ಚರಿಸಿ ಸಂಘಟಿಸುವುದೇ ಬುದ್ಧಿಜೀವಿಗಳ ಜವಾಬ್ದಾರಿಯಾಗಿದೆ. ಅದಕಾಗಿ ಸಾಂಘಿಕ ಜೀವನದ ಅವಶ್ಯಕತೆ ಅಗತ್ಯವಾಗಿದೆ. ನಾವು ನಮ್ಮೆಲ್ಲರ ಜಾತಿ, ಭಾಷೆ, ಪ್ರಾಂತಗಳನ್ನು ಮರೆತು ಒಂದಾಗಿ ಮುನ್ನಡೆದರೆ ಮಾತ್ರ ನಮ್ಮ ದೇಶಕ್ಕೆ ಉಜ್ವಲ ಭವಿಷ್ಯ ಕಟ್ಟಿಟ್ಟ ಬುತ್ತಿಯಾಗಲಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲಾ ಒಟ್ಟಾಗಬೇಕು. ತುಳು ಕನ್ನಡಿಗರೆಲ್ಲಾ ಒಟ್ಟಾಗಿ ನ.18ರಂದು ಒಂದೇ ವೇದಿಕೆಯಡಿ ಏಕತೆಯಿಂದ ಒಗ್ಗೂಡಿ ನಾವೆಲ್ಲ ಒಂದು ಎಂದು ಒಕ್ಕೊರಲಿನಿಂದ ಧ್ವನಿ ಎತ್ತಬೇಕಾಗಿದೆ ಎಂದೂ ಆನಂದ್ ಶೆಟ್ಟಿ ಸಲಹಿದರು.

ಆನಂದ ಶೆಟ್ರು ಇದ್ದಲ್ಲಿ ಎಲ್ಲವೂ ಒಳಿತಾಗುವುದು. ಅದ್ದಂತೆ ಆರು ವರ್ಷಗಳ ಹಿಂದೆ ಇದೇ ಕಾರ್ಯಕ್ರಮ ನಡೆಸಲ್ಪಟ್ಟಿದ್ದು ಅದೂ ಯಶಸ್ಸಗಿತ್ತು. ಸಮಾಜದಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ಥಾನಮಾನ, ಜವಾಬ್ದಾರಿಗಳಿವೆ. ಅದನ್ನು ಪ್ರಾಮಾಣಿಕವಾಗಿ ನಿಭಾಯಿಸಿದಾಗಲೇ ಜನನಾಯಕರಾಗಲು ಸಾಧ್ಯ. ನಾವೂ ಮುಂಬಯಿಗೆ ಕರೆಸಿ ಊರಿನ ಸ್ವಾಮೀಜಿಗಳು, ಜನಪ್ರತಿನಿಧಿಗಳಿಗೆ ಕರೆಸಿ ಸನ್ಮಾನಿಸುತ್ತೇವೆ ಆದರೆ ನಮಗೆ ಅವರಿಂದ ಯಾವ ಸ್ಥಾನಮಾನವೂ ಸಿಗುತ್ತಿಲ್ಲ ಎನ್ನುವುದು ದುರದೃಷ್ಟ. ಅವರೆಲ್ಲರೂ ಸಮಾಜದಿಂದ ಬಹಳಷ್ಟು ಅಪೇಕ್ಷಿಸುತಾರೆ ಆದರೆ ಅವರಿಗೆ ಸಮಾಜದ ಕಾಳಜಿಕ್ಕಿಂತ ತಮ್ಮತನವೇ ಪ್ರತಿಷ್ಠೆಯಾಗುತ್ತದೆ. ಎಲ್ಲರೂ ನಮ್ಮವರೇ ಆದ್ದರಿಂದ ನಾವೆಲ್ಲರೂ ಒಗ್ಗಟ್ಟಾಗಿ ಬದುಕು ರೂಪಿಸÀಬೇಕು. ಭಾರತೀಯತೆ ತೋರ್ಪಡಿಸಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸೋಣ. ನಮಗೆಲ್ಲರಿಗೂ ಸ್ವಜಾತಿಯಲ್ಲಿ ಅಭಿಮಾನವಿರಲಿ ಆದರೆ ಜಾತಿಜಾತಿ ಅಂಥ ಬೇಧ ಮರೆತು ಸಾಮರಸ್ಯದಿದ ಬಾಳೋಣ ಎಂದÀು ಐಕಳ ಹರೀಶ್ ಶೆಟ್ಟಿ ಆಶಯ ವ್ಯಕ್ತಪಡಿಸಿದರು.

ಕಡಂದಲೆ ಸುರೇಶ್ ಎಸ್.ಭಂಡಾರಿ ಮಾತ್ನಾಡಿ ಹಿಂದೂ ಧರ್ಮದ ಬಗ್ಗೆ ಜ್ಞಾನೋದಯಕ್ಕಾಗಿನ ಈ ಚಿಂತನೆ ಶ್ಲ್ಲಾಘನೀಯ. ಇದೊಂದು ದೇಶಭಕ್ತರ ಭಾವೈಕ್ಯತಾ ಕಾರ್ಯಕ್ರಮ. ಎಲ್ಲಾ ಜಾತಿ ಧರ್ಮಗಳನ್ನು ಗೌರವಿಸುವುದು ನಮ್ಮ ಧರ್ಮವಾಗಬೇಕು. ಸ್ವಚ್ಛಂದ ಬಾಳಿಗ್ಗೆ ಧರ್ಮ ರಕ್ಷಣ ಅತ್ಯವಶ್ಯ. ಹಿಂದೂ ಧರ್ಮ ನಾವು ಹುಟ್ಟು ಪಡೆದ ಧರ್ಮವಾಗಿದ್ದು, ಅದು ಜನನಿದಾತೆಗೆ ಸಮಾನ. ಮಾತೆಯನ್ನು ಮೊದಲಾಗಿ ಗೌರವಿಸುವುದು ನಮ್ಮ ರಕ್ಷಣೆ, ಪರಮ ಜವಾಬ್ದಾರಿ ಆಗಿದೆ ಆದುದರಿಂದ ತುಳು ಕನ್ನಡಿಗರ ದಿಟ್ಟತನ ಇಂತಹ ಕಾರ್ಯಕ್ರಮದಲ್ಲಿ ನಾವೆಲ್ಲರೂ ಒಗ್ಗೂಡಿ ತೋರ್ಪಡಿಬೇಕು.

ಭಾರತ ಭಾರತಿ ಸಂಚಾಲಕ ಬಾಲಕೃಷ್ಣ ಪಿ.ಭಂಡಾರಿ, ಸಾಮಾಜಿಕ ಧುರೀಣರುಗಳಾದ ಕರ್ನಿರೆ ವಿಶ್ವನಾಥ ಶೆಟ್ಟಿ, ದೇವದಾಸ್ ಎಲ್.ಕುಲಾಲ್, ಚಂದ್ರಶೇಖರ್ ಎಸ್. ಪೂಜಾರಿ ಮಾತನಾಡಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು.

ನಾವೆಲ್ಲರೂ ಹೊಟ್ಟೆಪಾಡನ್ನು ಹರಸಿ ಮುಂಬಯಿ ಸೇರಿದವರು. ವೃತ್ತಿ, ಜನಜೀವನ, ಉದರಪೆÇೀಷಣೆ ಮಧ್ಯೆ ಸಂಘಸಂಸ್ಥೆಗಳನ್ನು ಕಟ್ಟಿಬೆಳೆಸುತ್ತಾ ಸಾಂಘಿಕ ಬದುಕು ರೂಪಿಸಿದ ನಾವು ಅಖಂಡ ಭಾರತದ ಏಕತೆಯಲ್ಲೂ ಒಗ್ಗೂಡಬೇಕು. ಭಾರತ ರಾಷ್ಟ್ರದ ಭಾವಕ್ಯತೆ ಸಾರುವ ಈ ಸಭೆಯಲ್ಲಿ ಮಹಾನಗರ ಮುಂಬಯಿ ಅಲ್ಲಿನ ಸಮಗ್ರ ಜನತೆ ಜಾತಿ ಮತ ಬೇಧವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಭೆಯನ್ನು ಯಶಸ್ವಿ ಗೊಳಿಸುವಂತೆ ಈ ಸಭೆಯ ಅಧ್ಯಕ್ಷತೆ ವಹಿಸಿ ಕರ್ನಾಟಕ ಕೌಟುಂಬಿಕ ಸ್ನೇಹ ಸಮ್ಮೀಲನ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ತಿಳಿಸಿದರು.

ಕೆ.ಎಲ್ ಕುಮಾರ್, ನ್ಯಾ| ಆರ್.ಎಂ ಭಂಡಾರಿ, ಉಳ್ತೂರು ಮೋಹನ್‍ದಾಸ್ ಶೆಟ್ಟಿ, ನ್ಯಾ| ಸುಭಾಷ್ ಶೆಟ್ಟಿ, ಜಿ.ಟಿ ಆಚಾರ್ಯ, ವಿಶ್ವನಾಥ ಮಾಡ, ಜಯಂತಿ ವಿ.ಉಳ್ಳಾಲ್, ಡಾ| ಪ್ರಭಾಕರ್ ಶೆಟ್ಟಿ ಬೋಳ ಸೇರಿದಂತೆ ನೂರಾರು ಗಣ್ಯರು ಉಪಸ್ಥಿತರಿದ್ದರು. ಶೋಭಾ ಜಯಸೂರ್ಯ ಶೆಟ್ಟಿ ಮತ್ತು ಸುಪ್ರೀಯಾ ರಘುವೀರ ಶೆಟ್ಟಿ ಪ್ರಾರ್ಥನೆಗೈದರು. ಕಾರ್ಯಕ್ರಮ ಯಶಸ್ವಿಗಾಗಿ ಉಪ ಸಮಿತಿಗಳನ್ನು ರಚಿಸಲಾದ್ದು ಸಮಿತಿ ಗೌ| ಪ್ರ| ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರಸಾಲ್ಯಾನ್ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here