Wednesday 14th, May 2025
canara news

ಬಿಲ್ಲವ ಭವನದಲ್ಲಿ ಆಯೋಜಿಸಲ್ಪಟ್ಟ ಕಾಂತಾಬಾರೆ-ಬೂದಬಾರೆ ಸ್ಪರ್ಧೆ

Published On : 01 Oct 2018   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಸೆ.30: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಯುವಾಭ್ಯುದಯ ಉಪಸಮಿತಿ ಇಂದು ಆದಿತ್ಯವಾರ ಬೆಳಿಗ್ಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ 2018ನೇ ಸಾಲಿನ ವಾರ್ಷಿಕ ಕಾಂತಾಬಾರೆ-ಬೂದಬಾರೆ ಒಳಾಂಗಣ ಸ್ಪರ್ಧೆಗೆ ಭಾರತ್ ಬ್ಯಾಂಕ್ ಮಾಜಿ ನಿರ್ದೇಶಕ, ಬಿಜೆಪಿ ಧುರೀಣ ಎಲ್.ವಿ ಅವಿೂನ್ ಕೋಟಿ-ಚೆನ್ನಯ ಹಾಗೂ ಕಾಂತಾಬಾರೆ-ಬೂದಬಾರೆ ಅವರ ಭಾವಚಿತ್ರಕ್ಕೆ ಪುಷ್ಪಗುಪ್ಛವನ್ನಿತ್ತು ದೀಪ ಬೆಳಗಿಸಿ ಸಂಕೇತಿಕವಾಗಿ ಸ್ಪರ್ಧೆಗಳನ್ನು ಉದ್ಘಾಟಿಸಿದರು.

ಬಿಲ್ಲವರ ಅಸೋಸಿಯೇಶನ್‍ನ ಮಾಜಿ ಗೌ|ಪ್ರ| ಕೋಶಾಧಿಕಾರಿ ಎನ್.ಎಂ ಸನೀಲ್ ಮತ್ತು ಹಾಲಿ ಉಪಾಧ್ಯಕ್ಷ ಹರೀಶ್ ಜಿ.ಅವಿೂನ್ ಟೇಬಲ್ ಟೆನಿಸ್ ಆಟವನ್ನಾಡಿ, ಅಧ್ಯಕ್ಷ ಚಂದ್ರಶೇಖರ ಪೂಜಾರಿ ಮತ್ತು ಉಪಾಧ್ಯಕ್ಷ ಶ್ರೀನಿವಾಸ ಆರ್.ಕರ್ಕೇರ ಅವರು ಕೇರಂ ಆಟವನ್ನಾಡಿ ಸ್ಪರ್ಧೆಗಳನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಸೋಸಿಯೇಶನ್‍ನ ಗೌ| ಪ್ರ| ಕಾರ್ಯದರ್ಶಿ ಧನಂಜಯ ಎಸ್.ಕೋಟ್ಯಾನ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಹೇಶ್ ಸಿ. ಕಾರ್ಕಳ, ಹರೀಶ್ ಜಿ.ಪೂಜಾರಿ ಕೊಕ್ಕರ್ಣೆ, ನಿಲೇಶ್ ಪೂಜಾರಿ ಪಲಿಮಾರ್, ಭವನದ ವ್ಯವಸ್ಥಾಪಕ ಭಾಸ್ಕರ್ ಟಿ.ಪೂಜಾರಿ ಸೇರಿದಂತೆ ಯುವ ವಿಭಾಗೀಯ ಮುಖ್ಯಸ್ಥರು, ಪದಾಧಿಕಾರಿಗಳು, ಸದಸ್ಯರನೇಕರು ಉಪಸ್ಥಿತರಿದ್ದು ಟೇಬಲ್ ಟೆನಿಸ್, ಕೆರಂ, ಚೆಸ್, ಸಂಗೀತ, ಚಿತ್ರಕಲೆ, ರಂಗೋಲಿ, ಲ್ಯಾಂಡ್‍ಸ್ಕೇಪ್ ಇತ್ಯಾದಿ ಸ್ಪರ್ಧೆಗಳು ನಡೆಸಲ್ಪಟ್ಟವು.

ಯುವಾಭ್ಯುದ ಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎಂ.ಕೋಟ್ಯಾನ್ ಸುಖಾಗಮನ ಬಯಸಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಕಾರ್ಯದರ್ಶಿ ಉಮೇಶ್ ಎನ್.ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ರವಿ ಎಸ್.ಸನೀಲ್ ಸ್ಪರ್ಧೆಗಳನ್ನು ನಿರ್ವಹಿಸಿದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here