Wednesday 14th, May 2025
canara news

ಸಾಹಿತ್ಯ ಬಳಗ ಮುಂಬಯಿ-ರಜತ ಮಹೋತ್ಸವದ `ಸಾಧಕರಿಗೆ ನಮನ' ಕೃತಿಗಳ ಅನಾವರಣ

Published On : 02 Oct 2018   |  Reported By : Ronida Mumbai


(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ಅ.02: ಸಾಹಿತ್ಯ ಬಳಗ ಮುಂಬಯಿ ತನ್ನ ರಜತ ಮಹೋತ್ಸವದ ಅಂಗವಾಗಿ `ಸಾಧಕರಿಗೆ ನಮನ' ನಾಮಾಂಕಿತ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಪಯ್ಕಿ ದ್ವಿತೀಯ ಕಂತಿನ ಹತ್ತು ಕೃತಿ ಕುಸುಮಗಳನ್ನು ಕಳೆದ ರವಿವಾರ (ಸೆ.30) ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ಶ್ರೀ ವಿಶ್ವೇಶತೀರ್ಥ ಸಭಾಗೃಹದಲ್ಲಿ ಬಿಡುಗಡೆ ಗೊಳಿಸಿತು.

ಆ ಪಯ್ಕಿ ವಿಜಯ ಸುಬ್ರಹ್ಮಣ್ಯ ಸಂಗ್ರಹದ ಅಪೂರ್ವ ತೌಳವ ಸಂಶೋಧಕಿ `ಡಾ| ಲಕ್ಷ್ಮೀ ಪ್ರಸಾದ್' (ಕುಸುಮ-11), ಮುದ್ರಾ ವಿಜ್ಞಾನತಜ್ಞೆ, ಸ್ವರ್ಗೀಯ ಸುಮನ್ ಚಿಪ್ಲೂಣ್ಕ್ಕರ್ ಅವರ ಪ್ರೇಮಾ ಎಸ್.ರಾವ್ ಸಂಗ್ರಹದ ಬಗ್ಗೆ `ಮುದ್ರಾ ವಿಜ್ಞಾನಿ ಸುಮನ್ ಚಿಪ್ಲುನ್ಕರ್' (ಕುಸುಮ-12), ಲೇಖಕಿ ಚಿತ್ರಾ ಮೇಲ್ಮನೆ ರಚಿತ ಲೆಕ್ಕ ಪರಿಶೋಧಕ ಸಿಎ| ಸುಬ್ಬರಾವ್ ಬಗ್ಗೆ `ಕರ್ತವ್ಯ ನಿಷ್ಠ ಲೆಕ್ಕ ಪರಿಶೋಧಕ-ಸಿಎ| ಸುಬ್ಬರಾವ್' (ಕುಸುಮ-13), ಲೇಖಕಿ ಪ್ರೇಮಾ ಎಸ್.ರಾವ್ ರಚಿತ ಸ್ವರ್ಗೀಯ ಮುಚ್ಚ್ಚೂರು ನಾರಾಯಣ ಭಟ್ ಕುರಿತ `ಪ್ರಚಾರ ಬಯಸದ ಕಲಾ ಪೆÇೀಷಕ ಮುಚ್ಚೂರು ನಾರಾಯಣ ಭಟ್' (ಕುಸುಮ-14), ಲೇಖಕಿ ಡಾ| ಜಿ.ಪಿ ಕುಸುಮಾ ರಚಿತ `ನೂರನಲ್ವತ್ತು ವರ್ಷಗಳ ಇತಿಹಾಸವಿರುವ ಶ್ರೀಮದ್ಭಾರತ ಮಂಡಳಿ' (ಕುಸುಮ-15), ಲೇಖಕ ಅಶೋಕ್ ಎಸ್.ಸುವರ್ಣ ರಚಿತ `ಸೇವಾ ಮನೋಭಾವದ ಮೊಗವೀರ ವ್ಯವಸ್ಥಾಪಕ ಮಂಡಳಿ` (ಕುಸುಮ-16) ಹೀಗೆ ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್.ಬಿ.ಎಲ್ ರಾವ್ ಸಂಗ್ರಹಣೆಯ ಎಲ್ಲಾ ಆರು ಕೃತಿಗಳು ಅನಾವರಣ ಗೊಳಿಸಲ್ಪಟ್ಟವು.

ಪ್ರಸಿದ್ಧ ಸಾಹಿತಿ, ವಿಜ್ಞಾನಿ ಡಾ| ವ್ಯಾಸರಾವ್ ನಿಂಜೂರ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಕೈಗಾರಿಕೋದ್ಯಮಿ ಶ್ರೀನಿವಾಸ್ ಕಾಂಚನ್ ಮತ್ತು ಸುಮನ್ ಟ್ರಸ್ಟ್ ಯಾದಗಿರಿ ಇದರ ಅಧ್ಯಕ್ಷ ಡಾ| ಮರಿಯಪ್ಪ ನಾಟೇಕರ್ ಉಪಸ್ಥಿತರಿದ್ದು ಅತಿಥಿü ಅಭ್ಯಾಗತರು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆಯಿತ್ತು, ಕೃತಿಗಳ ಅನಾವರಣ ಗೈದರು. ಕೇಶವರಾವ್ ಚಿಪ್ಲೂಣ್ಕ್ಕರ್, ಎಂ.ಹರಿ ಭಟ್, ಸಿಎ| ಸುಬ್ಬರಾವ್, ಡಾ| ಲಕ್ಷ್ಮೀ ಪ್ರಸಾದ್, ಜಗನ್ನಾಥ್ ಪಿ.ಪುತ್ರನ್, ಕೃಷ್ಣಕುಮಾರ ಎಲ್.ಬಂಗೇರ ಅವರು ಗ್ರಂಥ ಗೌರವದ ಸನ್ಮಾನ ಸ್ವೀಕರಿಸಿ ತಮ್ಮ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದರು.

ತನ್ವಿ ರಾವ್ ಅವರ ಯಕ್ಷನೃತ್ಯ ಶೈಲಿಯ ಗಣಪತಿ ಸ್ತುತಿಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆದಿಗೊಂಡವು. ಅನಿತಾ ಆಚಾರ್ಯ ಕಥಕ್, ಅನುಪಮಾ ರಾವ್ ಮೋಹಿನಿಯಾಟ್ಟಂ, ಪ್ರಿಯಾಂಜಲಿ ರಾವ್ ಭರತನಾಟ್ಯ ಹಾಗೂ ವಿದುಷಿ ಸಹನಾ ಭಾರದ್ವಾಜ್ ಶಿಷ್ಯೆಯರಾದ ಜಾಹ್ನವಿ, ಭಾರ್ಗವಿ, ತನ್ವಿ, ಹಂಸಾ ಮತ್ತು ಮನಸ್ವಿ ಅವರು ನೃತ್ಯ ವೈಭವಗಳನ್ನು ಪ್ರಸ್ತುತ ಪಡಿಸಿದರು. ಹಿರಿಯ ಸಾಹಿತಿ ಮತ್ತು ಗಮಕಿ ಕೆ.ಆರ್ ಕೃಷ್ಣಯ್ಯ ಅವರು ಕುಮಾರವ್ಯಾಸ ಭಾರತದ ನಾಂದಿ ಪದ್ಯಗಳ ಕುರಿತು ವ್ಯಾಖ್ಯಾನ ನೀಡಿದರು. ಸಹನಾ ಭಾರದ್ವಾಜ್, ಡಾ| ಸಹನಾ ಪೆÇೀತಿ ಹಾಗೂ ಕಲಾ ಭಾಗವತ್ ಗಮಕ ವಾಚನಗೈದರು.

ಶಾಲಿನಿ ರಾವ್ ಮತ್ತು ಅನಿತಾ ಆಚಾರ್ಯ ಪ್ರಾರ್ಥನೆಯನ್ನಾಡಿದರು. ಸಾಹಿತ್ಯ ಬಳಗದ ಅಧ್ಯಕ್ಷ ಹೆಚ್. ಬಿ. ಎಲ್ ರಾವ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅನುರಾಧಾ ರಾವ್, ಡಾ| ಕರುಣಾಕರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಾ.ದಯಾ ಧನ್ಯವಾದ ಸಮರ್ಪಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here