Wednesday 14th, May 2025
canara news

ಭಾರತ್ ಬ್ಯಾಂಕ್ ನಿರ್ದೇಶಕ ಮಂಡಳಿಗೆ ನಡೆಸಲ್ಪಟ್ಟ ಚುನಾವಣೆ

Published On : 02 Oct 2018   |  Reported By : Rons Bantwal


ಮೂರು ರಾಜ್ಯಗಳ 45 ಮತದಾನ ಕೇಂದ್ರಗಳಲ್ಲಿ ನಡೆದ ಚುನಾವಣಾ ಪ್ರಕ್ರಿಯೆ
(ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.02: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಪ್ರಾಯೋಜಕತ್ವದ ರಾಷ್ಟ್ರದ ಪ್ರತಿಷ್ಠಿತ ಹಣಕಾಸು ಸಂಸ್ಥೆ ದಿ.ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ 2018-2021ರ ಸಾಲಿನ ನಿರ್ದೇಶಕ ಮಂಡಳಿಗೆ ಸ್ಪರ್ಧೆ ಏರ್ಪಟ್ಟ ಕಾರಣ ಇಂದಿಲ್ಲಿ ಮಂಗಳವಾರ ಚುನಾವಣೆ ನಡೆಸಲ್ಪಟ್ಟಿತು. ಒಟ್ಟು ಇಪ್ಪತ್ತೆರಡು ಸ್ಥಾನಗಳಿರುವ ಬ್ಯಾಂಕ್‍ನ ನಿರ್ದೇಶಕ ಮಂಡಳಿಗೆ ಇಬ್ಬರು ಮಹಿಳಾ ಸದಸ್ಯೆಯರು, ಇಬ್ಬರು ಸಹ ಸದಸ್ಯರು (ಕೋ.ಆಪ್ಟೆಡ್) ಮತ್ತು ಒಂದು ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ವರ್ಗದ ಸ್ಥಾನಗಳನ್ನು ಹೊರತು ಪಡಿಸಿ ಉಳಿದ ಹದಿನೇಳು ಸ್ಥಾನಗಳಿಗೆ ಹತ್ತೊಂಬತ್ತು ಆಕಾಂಕ್ಷಿಗಳು ಕಣದಲ್ಲಿದ್ದು ಹೆಚ್ಚುವರಿ ಎರಡು ಉಮೇದುವಾರರ ನಿಮಿತ್ತ ಚುನಾವಣೆ ಏರ್ಪಟ್ಟಿತು.

../../../../http://canaranews.com/uploaded/01-10-2018/Bharat/Baharat (1).jpg

ಭಾರತ್ ಬ್ಯಾಂಕ್ ಒಟ್ಟು 102 ಶಾಖೆಗಳನ್ನು ಹೊಂದಿದ್ದು ಮಲ್ಟಿಸ್ಟೇಟ್ ಬ್ಯಾಂಕ್ ಆಗಿ ದೇಶದ ಮೂರು ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ ಮತ್ತು ಗುಜರಾತ್ ರಾಜ್ಯಗಳಲ್ಲಿ ಕಾರ್ಯನಿರ್ವಾಹಿಸುತ್ತಿದ್ದು, ಬ್ಯಾಂಕ್ ಮಂಡಳಿಗೆ ಚುನಾವಣೆ ಮೂಲಕವೇ ಆಯ್ಕೆಪ್ರÀಕ್ರಿಯೆ ನಡೆಸುವುದು ಅನಿವಾರ್ಯ ಆಯಿತೆಂದು ಬಲ್ಲ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ರಾಜ್ಯದ ವಿಶೇಷವಾಗಿ ಮುಂಬಯಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಶಾಖೆಗಳಂತೆ 13 ಮತದಾನ ಕೇಂದ್ರಗಳು ಮತ್ತು ಸ್ಥಾನೀಯ ಶಾಲೆಗಳಲ್ಲಿ 11 ಮತದಾನ ಕೇಂದ್ರಗಳು, ಕರ್ನಾಟಕ ರಾಜ್ಯದ ಬೆಂಗಳೂರುನಲ್ಲಿ 4 ಮತದಾನ ಕೇಂದ್ರಗಳು, ಮಂಗಳೂರುನಲ್ಲಿ 10 ಮತದಾನ ಕೇಂದ್ರಗಳು, ಬೆಳಗಾವಿಯಲ್ಲಿ 1 ಮತ್ತು ಹುಬ್ಬಳ್ಳಿನಲ್ಲಿ 1 ಮತದಾನ ಕೇಂದ್ರ, ಹಾಗೂ ಗುಜರಾತ್ ರಾಜ್ಯದಲ್ಲಿ 5 ಮತದಾನ ಹೀಗೆ ಒಟ್ಟು 45 ಕೇಂದ್ರಗಳನ್ನು ರಚಿಸಿ ಬ್ಯಾಂಕ್‍ನ ಷೇರುದಾರರಿಗೆ ಚುನಾವಣಾ ಅಧಿಕಾರಿಗಳು ಮತದಾನ ಮಾಡುವ ವ್ಯವಸ್ಥೆ ಮಾಡಿದ್ದರು. ಬಹುತೇಕವಾಗಿ ಎಲ್ಲಾ ಮತದಾನ ಕೇಂಂದ್ರಗಳಲ್ಲಿ ಬಿರುಸಿನ ಮತ್ತು ಶಾಂತಿಯುತ ಮತದಾನ ನಡೆದಿದ್ದು ಆಸಕ್ತ ಯುವಕರು ಮತ್ತು ನೂರಾರು ಹಿರಿಯ ನಾಗರೀಕರೂ ಬೆಳಗಿನಿಂದಲೇ ಆಯಾಯ ಮತದಾನ ಕೇಂದ್ರಕ್ಕೆ ಸ್ಪಚ್ಛೆಯಿಂದಲೇ ಆಗಮಿಸಿ ಮತದಾನಗೈದರು.

ಬ್ಯಾಂಕ್ ಮಂಡಳಿಗೆ ಹಿಂದುಳಿದ ಜಾತಿ ಮತ್ತು ಪರಿಶಿಷ್ಟ ವರ್ಗದ ಸದಸ್ಯತ್ವ ಮತ್ತು ಇಬ್ಬರು ಮಹಿಳಾ ಸ್ಥಾನಗಳಿಗೆ ಹೊರತು ಪಡಿಸಿ ಉಳಿದ ಸಾಮಾನ್ಯ ವಿಭಾಗದ 17 ಸದಸ್ಯತ್ವಕಾಗಿ ಒಟ್ಟು 19 ಅಭ್ಯಥಿರ್üಗಳು ಕಣದಲ್ಲಿದ್ದರು. ಆ ಪಯ್ಕಿ ಅವಿೂನ್ ಲಿಂಗಪ್ಪ ವೆಂಕಪ್ಪ, ಅವಿೂನ್ ಸೋಮನಾಥ್ ಬಾಬು, ಸತೀಶ್ ಎನ್.ಬಂಗೇರ, ಕೋಟ್ಯಾನ್ ಜಯ ಐತಪ್ಪ, ಕೋಟ್ಯಾನ್ ಪ್ರೇಮನಾಥ್ ಪ್ರಮೇಶ್ವರ್, ಕೋಟ್ಯಾನ್ ಪುರುಷೋತ್ತಮ್ ಶ್ರೀನಿವಾಸ್, ಕೋಟ್ಯಾನ್ ವಾಸುದೇವ ರಾಜು, ಕುಂದರ್ ದಾಮೋದರ್ ಚಂದು, ಪೂಜಾರಿ ನಾರಾಯಣ ತಿಮ್ಮ, ಪೂಜಾರಿ ಗಂಗಾಧರ್ ಜಾರಪ್ಪ, ಪೂಜಾರಿ ಕೊರಗಪ್ಪ ಬೂಬ, ಪೂಜಾರಿ ಮೋಹನ್‍ದಾಸ್ ಅಂಗರ, ಪೂಜಾರಿ ಶಿವಾಜಿ ಉಪ್ಪೂರು, ಸಾಲ್ಯಾನ್ ಬಾಸ್ಕರ್ ಮುದ್ದು, ಸುವರ್ಣ ಜಯ ಚಂದು, ಸುವರ್ಣ ಜ್ಯೋತಿ ಕೃಷ್ಣ, ಸುವರ್ಣ ನಾರಾಯಣ ಕಾರ್ನಾಡ್, ಸುವರ್ಣ ರೋಹಿತ್ ಮೋಹನ್‍ಚಂದ್ರ, ಸುವರ್ಣ ಸೂರ್ಯಕಾಂತ್ ಜಯ ಸ್ಪರ್ಧಿಸಿದ್ದರು.

ಬೆಳಿಗ್ಗಿನಿಂದ ಸಂಜೆ ವರೆಗೆ ನಡೆದ ಮತದಾನದಲ್ಲಿ ಸುಮಾರು 13,958 ಮತಗಳು ಚಲಾವಣೆ ಗೊಂಡಿರುವ ಬಗ್ಗೆ ತಿಳಿದಿದ್ದು, ಇದೇ ಗುರುವಾರ (ಅ.04) ಮುಂಬಯಿನಲ್ಲಿ ಮತಎಣಿಕೆ ನಡೆಸಿ ಸ್ಪರ್ಧಿಗಳ ಫಲಿತಾಂಶ ಪ್ರಕಟವಾಗಲಿ ದ್ದು, ಅ.05ನೇ ಶುಕ್ರವಾರ ಒಟ್ಟು ನೂತನ ಬ್ಯಾಂಕ್ ಮಂಡಳಿಯ ಫಲಿತಾಂಶ ಚುನಾವಣಾಧಿಕಾರಿಗಳು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here