Sunday 17th, February 2019
canara news

ವಿಕ್ರೋಲಿಯಲ್ಲಿ ನಡೆದ ರೇನ್‍ಬೊ ಕರಾಟೆ ಕಪ್ ಚ್ಯಾಂಪಿಯನ್‍ಶಿಪ್

Published On : 08 Oct 2018   |  Reported By : Rons Bantwal


ಕರಾಟೆ ಆತ್ಮರಕ್ಷಣೆ-ಭದ್ರತೆಯ ಕಲೆಯಾಗಿದೆ : ಚಿತ್ರನಟ ಸೌರಭ್ ಭಂಡಾರಿ 

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.07: ಬುದ್ಧಿಜೀವಿಗಳಾದ ಮಾನವನಿಗೆ ಗುರುಗಳ ಗೌರವವೇ ಸರ್ವಶ್ರೇಷ್ಠವಾದುದು. ಆದ್ದರಿಂದ ಪ್ರತೀಯೊಬ್ಬ ಶಿಷ್ಯ, ವಿದ್ಯಾಥಿರ್ü ಗುರುಗಳನ್ನು ಗೌರವಿಸಿ ಸನ್ಮಾನಿಸುವುದೇ ಪ್ರಧಾನ ಗುರುದಕ್ಷಿಣೆ. ಕರಾಟೆ ಅಂತಹ ಕ್ರೀಡೆಗೆ ಪೆÇೀಷಕ, ಪಾಲಕರ ಪೆÇ್ರೀತ್ಸಾಹ ಅತ್ಯವಶ್ಯ. ಕಾರಣ, ಜಾಗತೀಕರಣದ ಈ ಯುಗದಲ್ಲಿ ಸ್ವರಕ್ಷಣೆಗೆ ಕರಾಟೆ ಪೂರಕವಾಗಿದೆ. ಕರಾಟೆ ಕಲಿಕೆಯು ನನ್ನ ಬದುಕನ್ನೇ ಬದಲಾಯಿಸಲು ಸಾಧ್ಯವಾಗಿದ್ದು ನಾನು ನಟಿಸಿದ ಪ್ರಥಮ ಚಲನಚಿತ್ರಕ್ಕೆ ಕರಾಟೆಯ ಸಾಹಸಕೃತ್ಯ ಜನಪ್ರಿಯತೆಗೆ ಸಾಕ್ಷಿಯಾಯಿತು. ಕರಾಟೆ ಆತ್ಮರಕ್ಷಣೆ-ಭದ್ರತೆಯ ಕಲೆಯಾಗಿದೆ.ಇಂತಹ ಕರಾಟೆಯಿಂದ ಶಿಸ್ತುಬದ್ಧ ಬದುಕು ಸಾಧ್ಯ ಮತ್ತು ಕರಾಟೆ ಅಭ್ಯಾಸದಿಂದ ಔಷಧಿ, ಆಸ್ಪತ್ರೆಗಳಿಂದ ದೂರ ಉಳಿಯಲೂ ಸಾಧ್ಯವಾಗುವುದು ಎಂದು ರೇನ್‍ಬೊ ಬುಡೊಕಾನ್ ಅಭ್ಯಾಸಿ, ಬ್ಲ್ಯಾಕ್‍ಬೆಲ್ಟ್ ಕರಾಟೆಪಟು ತೌಳವ ಸೂಪರ್‍ಸ್ಟಾರ್ ಚಿತ್ರನಟ ಸೌರಭ್ ಎಸ್. ಭಂಡಾರಿ ಕಡಂದಲೆ ತಿಳಿಸಿದರು.

ಇಂದಿಲ್ಲಿ ರವಿವಾರ ವಿಕ್ರೋಲಿ ಪೂರ್ವದ ಠಾಗೋರ್ ನಗರದಲ್ಲಿನ ಸಂದೇಶ ಕಾಲೇಜ್ ಸಭಾಗೃಹದಲ್ಲಿ ಮಿಸ್ಟರ್ ಚೇವ್ ಚೂ ಶೂಟ್ ಸ್ಥಾಪಿತ ಕರಾಟೆ ಬುಡೊಕಾನ್ ಇಂಟರ್‍ನ್ಯಾಷನಲ್ ಸಂಯೋಜಿತ ರೈನ್‍ಬೋ ಬುಡೊಕಾನ್ ಕರಾಟೆ ಆಕಾಡೆಮಿ ಆಯೋಜಿಸಿದ್ದ 6ನೇ ರೈನ್‍ಬೋ ಕಪ್ 2018-2019 ಚ್ಯಾಂಪಿಯನ್‍ಶಿಪ್ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿüಯಾಗಿದ್ದು ಸ್ಪರ್ಧಿಗಳನ್ನುದ್ದೇಶಿಸಿ ನಟ ಸೌರಭ್ ಭಂಡಾರಿ ಮಾತನಾಡಿ ಎಲ್ಲಾ ಸ್ಪರ್ಧಿಗಳಿಗೆ ಶುಭಾರೈಸಿದರು.

ಕರಾಟೆ ಬುಡೊಕಾನ್ ಇಂಟರ್‍ನ್ಯಾಷನಲ್ ಆಸ್ಟ್ರೇಲಿಯಾ, ಇಂಡಿಯನ್ ಒಲಿಂಪಿಕ್ ಅಸೋಸಿಯೇಶನ್, ಕರಾಟೆ ಬುಡೊಕಾನ್ ಫೆಡರೇಶನ್ ಇಂಡಿಯಾ ಮತ್ತು ಮಹಾರಾಷ್ಟ್ರ ಕರಾಟೆ ಅಸೋಸಿಯೇಶನ್ ಇವುಗಳ ಸಹಯೋಗದೊಂದಿಗೆ ಸಯೋಜಿಸಲ್ಪಟ್ಟ ಕರಾಟೆ ಪಂದ್ಯಾಟವನ್ನು ಕಡಂದಲೆ ಸುರೇಶ್ ಎಸ್.ಭಂಡಾರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಭಂಡಾರಿ ಸೇವಾ ಸಮಿತಿ ಮುಂಬಯಿ ಇದರ ನಿಕಟಪೂರ್ವ ಮಹಿಳಾವಿಭಾಧ್ಯಕ್ಷೆ ಶೋಭಾ ಸುರೇಶ್ ಭಂಡಾರಿ ಕರಾಟೆ ಗ್ರಾಂಡ್ ಮಾಸ್ಟರ್ ರಿಚ್ಚರ್ಡ್ ಎಲ್.ಟಿ ಚೇವ್ ಅವರ ಭಾವಚಿತ್ರಕ್ಕೆ ಪುಷ್ಪವೃಷ್ಠಿಗೈದರು. ಸಂದೇಶ ಕಾಲೇಜ್‍ನ ಮುಖ್ಯಸ್ಥ ಸಂದೇಶ್ ಮಾತ್ರೆ ಅವರು ಶ್ರೀಫಲ ಹೊಡೆದು ಸಂಪ್ರದಾಯಿಕವಾಗಿ ಸ್ಪರ್ಧೆಗೆ ಚಾಲನೆಯನ್ನಿತ್ತರು.

ಸುರೇಶ್ ಭಂಡಾರಿ ಮಾತನಾಡಿ ಕರಾಟೆ ಜಪಾನ್ ಮೂಲದ್ದಾದರೂ ಮನುಕುಲದ ಆತ್ಮಸ್ಥೈರ್ಯ ಬಲಪಡಿಸುವ ಕಲಾ ಕ್ರೀಡೆಯಾಗಿದೆ. ಇದರಿಂದ ಸ್ವಂತಿಕೆಯ ಮನೋಬಲ ಹೆಚ್ಚುತ್ತದೆ. ಕರಾಟೆ ಜೀವನ ರಕ್ಷಣಾತ್ಮಕ ಕಲೆಯೂ ಹೌದು. ಸ್ವಂತ ಸ್ವರಕ್ಷಣೆಗೆ ದೊಡ್ಡ ಸಾಧನಾತಂತ್ರವಾದ ಈ ಕಲೆಯನ್ನು ಮೈಗೂಡಿಸುವುದರಿಂದ ಸ್ವರಕ್ಷಣೆಗೆ ಆಶ್ರಯವಾಗಬಲ್ಲದು. ಇದು ಸ್ಪರ್ಧೆಯಲ್ಲ ಶಾರೀರಿಕ, ಮನೋಶಕ್ತಿ ತುಂಬುವ ಆಟ. ಎದುರಾಳಿಯನ್ನು ಎದುರಿಸುವ ಕಲೆಯಾಗಿದೆ. ಇಂತಹ ಕಲೆಯ ಪರಿಪೆÇೀಷಣೆ ಅಗತ್ಯವಿದೆ ಎಂದರು.

ಕರಾಟೆ ಮಾತ್ರವಲ್ಲ ಯಾವುದೇ ಸ್ಪರ್ಧಿಗಳು ಜೀವನ ಕಾಲದ ಚಾಂಪಿಯನ್‍ಗಳಾಗಬೇಕು. ಅವಕಾಶಗಳನ್ನು ಸದುಪಯೋಗ ಪಡಿಸಿ ಸ್ವಮನೋಭಾವವನ್ನು ಮೈಗೂಡಿಸಿ ಸ್ಪರ್ಧೆಗಳನ್ನು ಎದುರಿಸಿ ಜಯಶೀಲರಾದಾಗ ನಮ್ಮ ಗುರಿಗಳು ತನ್ನಷ್ಟಕ್ಕೇ ಫಲಪ್ರದವಾಗ ಬಲ್ಲವು ಎಂದು ಸಂದೇಶ್ ಅಭಿಪ್ರಾಯ ಪಟ್ಟರು.

ಮಾಜಿ ಮಾರ್ಷಯಲ್ ಆರ್ಟ್ಸ್ ಮಾಜಿ ಪಟು ನಿಜಾಮುದ್ದೀನ್ ಮುಲ್ಲಾ, ಸಲೀಮ್ ಗುಲ್‍ಖಾನ್, ದಯಾನಂದ ಪೂಜಾರಿ, ಬ್ರಿಜೇಸ್ ಸಿಂಗ್, ನರೇಶ್ ಎನ್.ಬಾಡೇಕರ್, ಸೃಷ್ಟಿ ವಿ.ಶೆಟ್ಟಿ, ರಾಜೇಂದ್ರ ಪಿ. ಬೋಸಾಲೆ, ಪ್ರವೀಣ್ ಪೈ, ಪ್ರಸಾದ್ ಹಿಂದೂಲ್ಕರ್, ಆನಂತ್ ಕುಲೆ, ಸಂತೋಷ್ ಚವ್ಹಾಣ್ ಉಪಸ್ಥಿತರಿದ್ದರು.

ಕಟಾಸ್, ಕುಮಿಟೆ, ವೆಪ್ಪನ್ಸ್ ಸ್ಪರ್ಧೆಯಲ್ಲಿ ಮಹಿಳಾ ಪುರುಷರು ವಿಭಾಗಗಳಲ್ಲಿ ನಡೆಸಲ್ಪಟ್ಟ ಚ್ಯಾಂಪಿಯನ್‍ಶಿಪ್‍ನಲ್ಲಿ ಮಹಿಳೆ-ಪುರುಷರು, ಬಾಲಕ-ಬಾಲಕಿಯರಿಗೆ ಸ್ಪರ್ಧೆಗಳು ನಡೆಸಲ್ಪಟ್ಟವು. ಬ್ರೌನ್, ಬ್ಲಾಕ್ ಬೆಲ್ಟ್‍ಗಳೊಂದಿಗೆ ಗ್ರಾಂಡ್ ಚಾಂಪಿಯಾನ್ ಶಿಪ್ ಸ್ಪರ್ಧೆ ನಡೆದಿದ್ದು ಐಬಿಸಿಸಿ ಸದಸ್ಯ ಮತ್ತು ಆರ್‍ಬಿಕೆಎ ಸಂಸ್ಥಾಪಕ, ಭಾರತೀಯ ತಾಂತ್ರಿಕ ನಿರ್ದೇಶಕ ವಸಂತ್ ಟಿ.ಶೆಟ್ಟಿ ಸ್ವಾಗತಿಸಿದರು. ಕೆ.ಶ್ರೀಧರನ್ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಆರ್‍ಬಿಕೆಎ ಸದಸ್ಯ ವಿಜಯ್ ಎನ್.ಪೂಜಾರಿ ವಂದಿಸಿದರು.
More News

ಸೇವ್ ಸುವರ್ಣ ತ್ರಿಭುಜ ನಾಪತ್ತೆಯಾದ ಮೀನುಗಾರರ ಪತ್ತೆಗೆ ಉಳ್ಳಾಲ ಪತ್ರಕರ್ತರ ಜಾಗೃತಿ
ಸೇವ್ ಸುವರ್ಣ ತ್ರಿಭುಜ ನಾಪತ್ತೆಯಾದ ಮೀನುಗಾರರ ಪತ್ತೆಗೆ ಉಳ್ಳಾಲ ಪತ್ರಕರ್ತರ ಜಾಗೃತಿ
ಮಾ.04: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ
ಮಾ.04: ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಉತ್ಸವ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮ ಕಲಶೋತ್ಸವ
ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಠಬಂಧ ಬ್ರಹ್ಮ ಕಲಶೋತ್ಸವ

Comment Here