ಬರಹಗಾರರಿಗೆ ಅನುಕರಣೆ ಅಪಾಯದ ಶಬ್ದವಾಗಿದೆ : ಸುನಂದ ಪ್ರಕಾಶ ಕಡಮೆ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)
ಮುಂಬಯಿ,: ತಂದೆಯ ಸ್ವಾತಂತ್ರ್ಯವೇ ನಮ್ಮನ್ನು ಈ ಮಟ್ಟಕ್ಕೆ ಬೆಳೆಸಿದೆ. ಹೆಣ್ಣು ಎಂಬ ಭಾವನೆ ಇದ್ದರೂ ಮನದೊಳಗಿನ ನೋವು ಕರಗಿಸಿ ಕೊಂಡಂತೆ ಜನತೆಯ ಅಪಾರ ಪ್ರೀತಿಯಿಂದ ಬೆಳೆದವಳು. ಬರೆದ ಮೇಲೆ ನೋವು ಕಡಿಮೆಯಾಗ ತೊಡಗಿದಂತೆ ನನ್ನ ಬರವಣಿಗೆಯೇ ಬದುಕನ್ನೇ ಬದಲಾಯಿಸಿತು. ಓದಿನಿಂದ ಬದುಕನ್ನು ಬದಲಾಯಿಸಿಕೊಂಡ ನಾನು ಕವಿತೆಯೊಡನೆ ಮನಸೆಳೆದು ಕಂಕಣಭಾಗ್ಯಕ್ಕೆ ಪ್ರಾಪ್ತಳಾದೆ. ಹೆಣ್ಣಿನ ಪರಿಸ್ಥಿತಿ ಮೇಲೆ ಸಮಾಜದ ಉದ್ದೇಶಗಳು ಏನಿದ್ದರೂ ಅದನ್ನು ಹೆಣ್ಣಾದವಳು ಮೆಟ್ಟಿನಿಂತು ಸದ್ಗುಣಶೀಲಳಾಗಿ ಜಯಿಸಿಕೊಳ್ಳಬೇಕು. ಹೆಣ್ಣಿಗೆ ಹೆಣ್ಣೇ ಅಬಲೆಯಂತೆ ಕಾಣುವುದಕ್ಕಿಂತ ಸ್ವಂತಿಕೆಯ ಛಲದಿಂದಸಫಲತೆ ಕಂಡುಕೊಳ್ಳಬೇಕು. ನಮ್ಮಲ್ಲಿ ಸಂಪ್ರದಾಯಕ್ಕಿಂತ ವ್ಯಕ್ತಿ ಸ್ವಾತಂತ್ರ್ಯ ಮೆಲೆಂದೆಣಿಸಿದಈ ಸಮಾಜದಲ್ಲಿ ನಮ್ಮ ನೋವನ್ನು ಬರವಣಿಗೆಯಲ್ಲಿ ವ್ಯಯಿಸಿ ನಾವು ಶುದ್ಧಿಗಳಾಗಬೇಕು. ಬರಹಗಾರರಿಗೆ ಅನುಕರಣೆ ಅಪಾಯದ ಶಬ್ದವಾಗಿದ್ದು ಸ್ವಭಾಷೆಯ ಬರಹಗಳೇ ಸಮಾಧಾನ ಕೊಡುತ್ತದೆ. ಆದುದರಿಂದ ಪಾತ್ರಕ್ಕೆ ವ್ಯಕ್ತಿತ್ವ ಹುಟ್ಟಿದಂತೆ ಆಗುತ್ತದೆ ಎಂದು ಹುಬ್ಬಳ್ಳಿಯ ಹಿರಿಯ ಸಾಹಿತಿ, ಕಾದಂಬರಿಗಾರ್ತಿ ಸುನಂದ ಪ್ರಕಾಶ ಕಡಮೆ ತಿಳಿಸಿದರು.
ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ನೃತ್ಯ ಅಭಿನಯ ಕಲಾಕ್ಷೇತ್ರ ಇವುಗಳ ಜಂಟಿ ಆಶ್ರಯದಲ್ಲಿ ಇಂದಿಲ್ಲಿ ಶನಿವಾರ ಸಂಜೆ ಘಾಟ್ಕೋಪರ್ ಪಶ್ಚಿಮದ ಅಸಲ್ಫಾ ಇಲ್ಲಿನ ಶ್ರೀ ಕ್ಷೇತ್ರ ಗೀತಾಂಬಿಕಾ ದೇವಸ್ಥಾನದ ಸಭಾಗೃಹದಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ `ನಾನೇಕೆ ಬರೆಯುತ್ತಿದ್ದೇನೆ' ವಿಚಾರಿತ ಸಂವಾದವನ್ನುದ್ದೇಶಿಸಿ ಸುನಂದ ಪ್ರಕಾಶಕಡಮೆ ಮಾತನಾಡಿದರು.
ವೇದಿಕೆಯಲ್ಲಿ ಹಿರಿಯ ಹೆಸರಾಂತ ಕವಿ ಪ್ರಕಾಶ ಕಡಮೆ, ವಿದ್ಯಾಧರ ಕನ್ನಡ ಪ್ರತಿಷ್ಠಾನ ಧಾರವಾಡ (ಮುಂಬಯಿ) ಅಧ್ಯಕ್ಷ ವಿದ್ಯಾಧರ ಮುತಾಲಿಕ ದೇಸಾಯಿ, ಹಿರಿಯ ಸಾಹಿತಿ ಡಾ| ವಿಶ್ವನಾಥ್ ಕಾರ್ನಾಡ್, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ ಸಂವಾದ ವೇದಿಕೆಯಲ್ಲಿ ಆಸೀನರಾಗಿದ್ದರು.
ಯಾವುದೇ ಹಿನ್ನಲೆ ಇಲ್ಲದೆ ಸಾಹಿತ್ಯಲೋಕಕ್ಕೆ ಅಂಟಿಕೊಂಡ ನಾನು ಕವಿಯಾಗಿ ಗುರುತಿಸಿ ಕೊಂಡಿರುವೆ. ಸಾಹಿತಿಕ ವಾತಾವರಣ ಇಲ್ಲದೇ ಈ ತನಕ ಮುನ್ನಡೆದು ಬಂದು ಸಾಹಿತ್ಯವನ್ನು ಎದೆಯಾಳದಲ್ಲಿ ತಿಳಿದುಕೊಂಡು ಅದರ ಜೊತೆಗೆನೇ ಬದುಕು ಕಟ್ಟಿಕೊಂಡೆನು ಎಂದು ಪ್ರಕಾಶ ಕಡಮೆ ನುಡಿದರು.
ಡಾ| ಜಿ.ಎನ್ ಉಪಾಧ್ಯ ಅಧ್ಯಕ್ಷೀಯ ನುಡಿಗಳನ್ನಾಡಿ ಸಾಹಿತ್ಯ ಚೇತನ ನೀಡಿದ ಈ ದಂಪತಿ ಲಗ್ನದ ಬಳಿಕ ಪಕ್ಕ ಸಾಹಿತ್ಯದ ಬದುಕನ್ನು ಕಟ್ಟಿಕೊಂಡವರು. ಬರವಣಿಗೆಯಿಂದ ಬದುಕು ಸಾಧ್ಯ ಎಂದು ತೋರಿಸಿಕೊಟ್ಟ ಜೋಡಿ. ಸುನಂದ ಪ್ರಕಾಶ್ ಅವರು ಮಹಿಳಾ ಸಂಘಟಿತ್ವಕ್ಕೆ ಸಂಚಲನ ಗೊಳಿಸಿದ ಧೀಮಂತ ಲೇಖಕಿ. ಇಂತವರಿಂದ ನಡೆಸುವುದೇ ಸರ್ವೋತ್ತಮ ಸಂಬಂಧ ಬೆಳೆಸುವ ಕಾರ್ಯಕ್ರಮ ಇದಾಗಿದೆ ಎಂದರು.
ಕಾಳನಾಯಕ ವಿ.ಮೈಸೂರು, ಗಿರಿ ಸೂರ್ಯರಾಮ ಉಡುಪಿ, ಹೇಮಾ ಸದಾನಂದ ಅವಿೂನ್, ಪತ್ರಕರ್ತ ಸೋಮನಾಥ್ ಕರ್ಕೇರ, ಕೆ.ನಾರಾಯಣ, ಜಯಲಕ್ಷಿ ್ಮೀ ಜೋಕಟ್ಟೆ, ರಮಾ ಉಡುಪ, ಕುಮುದಾ ಆಳ್ವ, ಜ್ಯೋತಿ ಶೆಟ್ಟಿ, ವಿನೋದ್ ಹುಬ್ಬಳ್ಳಿ, ಚಂದ್ರಶೇಖರ್ ಬೆಳಗಾಂ, ಡಾ| ಕರುಣಾಕರ್ ಶೆಟ್ಟಿ, ಸಾ.ದಯಾ, ಅಶೋಕ್ ಎಸ್.ಸುವರ್ಣ, ನಂದಾ ಶೆಟ್ಟಿ ಕಲ್ಯಾಣ್, ಡಾ| ಉಮಾ ರಾವ್, ಅನುಪಮ ಎನ್.ಎಸ್ ಗೌಡ, ಸದಾನಂದ ಅವಿೂನ್, ಲತಾ ಸಂತೋಷ್ ಶೆಟ್ಟಿ ಮುದ್ದುಮನೆ, ಸುರೇಖಾ ಶೆಟ್ಟಿ ಸಂವಾದದಲ್ಲಿ ಪಾಲ್ಗೊಂಡರು.
ಲೇಖಕಿ ಹೇಮಾ ಸದಾನಂದ ಅವಿೂನ್ ಸ್ವಾಗತಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸಂವಾದನಡೆಸಿದರು. ಸುರೇಖಾ ಎಸ್.ದೇವಾಡಿಗ ವಂದಿಸಿದರು.