Wednesday 14th, May 2025
canara news

ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿಗೆ ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್-2018 ಪ್ರದಾನ

Published On : 09 Oct 2018   |  Reported By : Rons Bantwal


ಬೆಳ್ತಂಗಡಿ: ಇಂಡಿಯನ್ ಟೆಕ್ನಿಕಲ್ ಎಜುಕೇಶನ್ ಬೋರ್ಡ್ ಮುಂಬೈ (ಐಟಿಇಎಸ್) ಇದರಿಂದ ಮಾನ್ಯತೆ ಪಡೆದು ಕಳೆದ ಐದು ವರ್ಷಗಳಿಂದ ಬೆಳ್ತಂಗಡಿಯಲ್ಲಿ ತಾಂತ್ರಿಕ ಮತ್ತು ವೃತ್ತಿ ತರಬೇತಿ ನೀಡುತ್ತಿರುವ ತಾಲೂಕಿನ ಮೊಟ್ಟಮೊದಲ ಫ್ಯಾಶನ್ ಡಿಸೈನ್ ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿರುವ *ಅನುಗ್ರಹ ಟ್ರೈನಿಂಗ್ ಕಾಲೇಜು ಬೆಳ್ತಂಗಡಿ ಗೆ* *ಐಟಿಇಎಸ್ ಮುಂಬೈ ಸಂಸ್ಥೆಯಿಂದ* *ಬೆಸ್ಟ್ ಪರ್ಫಾರ್ಮೆನ್ಸ್ ಅವಾರ್ಡ್* ಲಭಿಸಿದೆ.

ಜೊತೆಗೆ ಐಟಿಇಎಸ್ ಸಂಸ್ಥೆ 2017-18 ರಲ್ಲಿ ನಡೆಸಿದ *ಆಲ್ ಇಂಡಿಯಾ* *ಎಕ್ಸಾಮಿನೇಶನ್‌* ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿ ಮೂಡಿಬಂದಿರುವ ಇದೇ ಕಾಲೇಜಿನ ವಿದ್ಯಾರ್ಥಿನಿ *ಮೆರಿಟಾ ಪ್ರಿಯಾ* ಅವರಿಗೆ ವಿಶೇಷ ನಗದು ಪುರಸ್ಕಾರವನ್ನೂ ನೀಡಿದೆ.

ಅ. 6 ರಂದು ಮಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ *ಐಟಿಇಎಸ್ ಬೋರ್ಡ್ ಮುಂಬೈ ಇದರ ಅದ್ಯಕ್ಷ ಪಾಂಡುರಂಗ ನಾಯಕ್, ಪರಿಸರ ಸ್ನೇಹಿ ಮತ್ತು ಸಾಮಾಜಿಕ ಕಾರ್ಯಕರ್ತ ದಿನೇಶ್ ಹೊಳ್ಳ, ಪ್ರ. ಕಾರ್ಯದರ್ಶಿ ಗೋಯಲ್, ಸಮಿತಿಯ ಹಿರಿಯ ಸದಸ್ಯ ಸದಾನಂದ ಹಾಗೂ ಬೋರ್ಡ್ ಸದಸ್ಯರುಗಳ ಸಮ್ಮುಖ ಅನುಗ್ರಹ ಸಂಸ್ಥೆಯ ಚೇರ್‌ಮೆನ್ ತಲ್‌ಹತ್ ಎಂ.ಜಿ, ಟ್ರಸ್ಟಿ ಮುನೀರಾ ಕೆ.ವೈ, ಕಾಲೇಜು ಪ್ರಾಂಶುಪಾಲ ಜೈಸನ್ ಪಿ, ಆಡಳಿತ ಮಂಡಳಿ ಸದಸ್ಯರುಗಳಾದ ಜಿ ಇಸುಬು ಮತ್ತು ಮುಹಮ್ಮದ್ ಅಶ್ರಫ್ ಹಾಗೂ ವಿದ್ಯಾರ್ಥಿನಿ ಮೆರಿಟಾ ಪ್ರಿಯಾ ಮತ್ತು ಅವರ ಪೋಷಕರು ಈ ಪುರಸ್ಕಾರ ಸ್ವೀಕರಿಸಿದರು.*

ಸದ್ರಿ ಕಾರ್ಯಕ್ರಮದಲ್ಲಿ ಅನುಗ್ರಹ ಮಾತ್ರವಲ್ಲದೆ ಐಟಿಇಎಸ್ ಮಾನ್ಯತೆ ಪಡೆದ ದಕ್ಷಿಣ ಕನ್ನಡ ಮತ್ತು ಉಡುಪಿ, ಕಾಸರಗೋಡು ಜಿಲ್ಲೆಯ ಐ. ಟಿ. ಐ. ಮತ್ತು ಡಿಪ್ಲೋಮಾ ಕಾಲೇಜುಗಳ ಪ್ರಾಂಶುಪಾಲರುಗಳು, ವಿದ್ಯಾರ್ಥಿಗಳು ಪಾಳ್ಗೊಂಡಿದ್ದರು.

*ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜು ಈಗಾಗಲೇ 10 ನೇ ತರಗತಿ, PUC ಹಾಗೂ ಬೇರೆ ಬೇರೆ ವಿದ್ಯಾಭ್ಯಾಸ ಸ್ಥರಗಳಲ್ಲಿ ಪಾಸ್ ಅಥವಾ ಪೈಲ್ ಆದ ವಿದ್ಯಾರ್ಥಿಗಳಿಗೆ ವೃತ್ತಿ, ತಾಂತ್ರಿಕ ಮತ್ತು ಸ್ವ ಉದ್ಯೋಗ ತರಬೇತಿ ನೀಡಿ ಅವರನ್ನು ಉದ್ಯೋಗಿಗಳನ್ನಾಗಿ ಮಾಡುವ ಅತ್ಯುತ್ತಮ ದ್ಯೇಯದೊಂದಿಗೆ ಕೆಲಸ ನಿರ್ವಹಿಸುತ್ತಿದೆ*




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here