Monday 7th, July 2025
canara news

ಬಂಟರ ಭವನದಲ್ಲಿ ಬಂಟ್ಸ್ ಲಾ ಫೆÇೀರಮ್‍ನ ವಾರ್ಷಿಕ ಮಹಾಸಭೆ, ನೂತನ ಅಧ್ಯಕ್ಷರಾಗಿ ಡಿ.ಕೆ ಶೆಟ್ಟಿ ಆಯ್ಕೆ

Published On : 10 Oct 2018   |  Reported By : Ronida Mumbai


ಫೆÇೀರಮ್‍ಗೆ ಸದಸ್ಯರೆಲ್ಲರ ಸಹಕಾರ ನಿರಂತರವಾಗಿರಲಿ: ಅಡ್ವಕೇಟ್ ಅಶೋಕ್ ಡಿ.ಶೆಟ್ಟಿ
(ಚಿತ್ರ / ವರದಿ : ರೊನಿಡಾ, ಮುಂಬಯಿ)

ಮುಂಬಯಿ, ಅ.09:ನನ್ನ ಅಧ್ಯಕ್ಷತೆಯ ಕಾಲಾವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿ ಸಂಸ್ಥೆಯನ್ನು ಬೆಳೆಸುವ ಕೆಲಸ ಮಾಡಿದ್ದೇನೆ. ಇದು ನನಗೆ ತೃಪ್ತಿ ಮತ್ತು ಸಂತೋಷ ನೀಡಿದೆ. ಮುಂದಿನ ಅಧ್ಯಕ್ಷರು ಅವರ ಅವಧಿಯಲ್ಲಿ ಒಳ್ಳೆಯ ಕಾರ್ಯಗಳನ್ನು ನಿರ್ವಹಿಸುವವರು ತುಂಬಾ ಭರವಸೆ ಇದೆ. ಇದಕ್ಕಾಗಿ ಫೆÇೀರಮ್ ಎಲ್ಲಾ ಸದಸ್ಯರ ಬೆಂಬಲ ಮತ್ತು ಸಹಕಾರ ಅಗತ್ಯ ಎಂದು ತಿಳಿಸಿದರು.

ಬಂಟ್ಸ್ ಲಾ ಫೆÇೀರಮ್‍ನ ವಾರ್ಷಿಕ ಮಹಾಸಭೆಯು ಕಳೆದ ಶುಕ್ರವಾರ (05.10.2018)ಸಂಜೆ ಬಂಟರ ಭವನದ ಎನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ಫೆÇೀರಮ್‍ನ ಅಧ್ಯಕ್ಷ ಅಶೋಕ್ ಡಿ.ಶೆಟ್ಟಿ ಅವರು ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿದರು.

ಗತ ವಾರ್ಷಿಕ ವರದಿಯನ್ನು ಗೌ| ಪ್ರ.ಕಾರ್ಯದರ್ಶಿ ಜಗದೀಶ್ ಎಸ್.ಹೆಗ್ಡೆ ಮಂಡಿಸಿದರು. ಕೋಶಾಧಿಕಾರಿ ಮೋರ್ಲ ರತ್ನಾಕರ್ ಶೆಟ್ಟಿ ಲೆಕ್ಕ ಪತ್ರ ದಾಖಲೆಗಳ ವರದಿ ಸಲ್ಲಿಸಿದರು. ಸಭಿಕರು ಅಂಗೀಕರಿಸಿದರು. ವೇದಿಕೆಯಲ್ಲಿ ಬಂಟ್ಸ್ ಲಾ ಫೆÇೀರಮ್‍ನ ಉಪಾಧ್ಯಕ್ಷ ಪ್ರಭಾಕರ್ ಕೆ.ಶೆಟ್ಟಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ 2018-2021ರ ಅವಧಿಗೆ ನೂತನ ಅಧ್ಯಕ್ಷರಾಗಿ ಅಡ್ವಕೇಟ್ ಡಿ.ಕೆ.ಶೆಟ್ಟಿ ಅವರು ಆಯ್ಕೆಗೊಂಡರು. ಅಡ್ವಕೇಟ್ ಎಚ್.ಎಂ ಶೆಟ್ಟಿ, ಅಡ್ವಕೇಟ್ ಕರುಣಾಕರ ಶೆಟ್ಟಿ, ಡಾ| ದಯಾನಂದ್ ಬಿ.ಶೆಟ್ಟಿ, ಅಡ್ವಕೇಟ್ ಜಗನ್ನಾಥ್ ಎನ್.ಶೆಟ್ಟಿ, ಅಡ್ವಕೇಟ್ ಜಗದೀಶ್ ಶೆಟ್ಟಿ, ಅಡ್ವಕೇಟ್ ಉಪ್ಪೂರು ಶೇಖರ್ ಶೆಟ್ಟಿ, ಅಡ್ವಕೇಟ್ ರಾಜಶೇಖರ್ ಶೆಟ್ಟಿ, ಅಡ್ವಕೇಟ್ ಶೇಖರ್ ಶೆಟ್ಟಿ, ಅಡ್ವಕೇಟ್ ಶೇಖರ್ ಆರ್.ಶೆಟ್ಟಿ, ಅಡ್ವಕೇಟ್ ಮೋರ್ಲ ರತ್ನಾಕರ್ ಶೆಟ್ಟಿ, ಅಡ್ವಕೇಟ್ ಮಂಜುನಾಥ್ ಹೆಗ್ಡೆ, ಅಡ್ವಕೇಟ್ ಗುಣಕರ್ ಶೆಟ್ಟಿ, ಅಡ್ವಕೇಟ್ ಎಮ್.ಮಾಧವ್ ಶೆಟ್ಟಿ, ಅಡ್ವಕೇಟ್ ರಾಮ್‍ಪ್ರಸಾದ್ ಶೆಟ್ಟಿ ಸೇರಿದಂತೆ 15 ಮಂದಿಯನ್ನು ಸಮಿತಿಗೆ ಆಯ್ಕೆ ಮಾಡಲಾಯಿತು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here