Wednesday 14th, May 2025
canara news

ವಿಧ್ಯುಚ್ಛಕ್ತಿ ಬೆಳಕು ಕಾಣದ ಬಜ್ಪೆ ಅಲ್ಲಿನ ಬಡ ಕುಟುಂಬಕ್ಕೆ

Published On : 11 Oct 2018   |  Reported By : Rons Bantwal


ವಿದ್ಯುತ್ ಸಂಪರ್ಕ ಒದಗಿಸಿದ ಭವಾನಿ ಫೌಂಡೇಶನ್
(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ, ಅ.10: ವೈಜ್ಞಾನಿಕವಾಗಿ ಮುನ್ನಡೆವ ಈ ಡಿಜಿಟಲ್ ಯುಗದಲ್ಲೂ ಅತೀ ಮುಂದುವರಿದ ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆ ಸ್ವಾಮಿಲಪದವು ಉಗ್ರಾಣಿ ಇಲ್ಲಿ ವಿಧ್ಯುಚ್ಛಕ್ತಿ ಬೆಳಕು ಕಾಣದೆ ಅಂಧಾಕಾರದಲ್ಲಿ ಬಾಳುವ ಕುಟುಂಬಕ್ಕೆ ಭವಾನಿ ಫೌಂಡೇಶನ್ ಮುಂಬಯಿ ಮತ್ತು ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ವಿದ್ಯಾಲಯದ ಉಭಯ ಸಂಸ್ಥೆಗಳು ಜೊತೆಗೂಡಿ ಪ್ರಕಾಶಮಾನ ಗೊಳಿಸಿ ಮಾನವೀಯತೆ ಮೆರೆದಿವೆ.

ಪತಿ ಬೂಬ ಅವರ ಅಕಾಲಿಕ ಮರಣದಿಂದ ಭಾರೀ ಸಂಕಷ್ಟದಿಂದ ತನ್ನ ಇಬ್ಬರು ಮಕ್ಕಳಾದ ಲೋಕೇಶ್-16. ಮತ್ತು ಮಲ್ಲಿಕ -14 (ಇಬ್ಬರೂ ವಿದ್ಯಾಥಿರ್üಗಳು) ಅವರೊಂದಿಗೆ ಜೀವನ ಸಾಗಿಸುತ್ತಿದ್ದ ಗೋಪಿ ಬೂಬ ಕಾಡಿಬೇಡಿ ಉಳಕ್ಕೊಳ್ಳಲು ಒಂದು ಸೂರು ಸಿದ್ಧಪಡಿಸಿ ನೆಲೆಯಾಗಿ 6 ವರ್ಷ ಕಳೆದರೂ ಚಿಮಿಣಿ ದೀಪದಲ್ಲೇ ಜೀವ ನಡೆಸುತ್ತಿದ್ದರು. ಇದನ್ನರಿತ ಪೆÇೀಲಿಸ್ ಅಧಿಕಾರಿ, ಭವಾನಿ ಫೌಂಡೇಶನ್ ಮುಂಬಯಿ ಇದರ ವಿಶ್ವಸ್ಥ ಸದಸ್ಯ ಗೋಪಾಲಕೃಷ್ಣ ಕುಂದರ್ ಬಜ್ಪೆ ಅವರು ಕತ್ತಲಿನ ಬಾಳಿಗೆ ಬೆಳಕನ್ನು ನೀಡುವ ಪ್ರಯತ್ನ ನಡೆಸಿ ಎಲೆಕ್ಟ್ರೀಷಿಯನ್ ವಿಶ್ವನಾಥ್ ಅವರ ಸಹಯೋಗದೊಂದಿಗೆ ವಿದ್ಯಾಥಿರ್üಗಳಾದ ಜಗದೀಶ್ ಮತ್ತು ನೋಣಯ್ಯ ಅವರನ್ನು ಒಳಗೊಂಡು ಭವಾನಿ ಫೌಂಡೇಶನ್‍ನ ಧನಸಹಾಯದೊಂದಿಗೆ ಗೋಪಿ ಬೂಬ ಮನೆಗೆ ವಿದ್ಯುಚ್ಛಕ್ತಿ ಕಾಮಗಾರಿ ಮಾಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಿಯೇ ಬಿಟ್ಟರು.

ಕಳೆದ ಶನಿವಾರ ಅದಿಕೃತವಾಗಿ ಭವಾನಿ ಫೌಂಡೇಶನ್ ಮುಂಬಯಿ ಇದರ ಸಂಸ್ಥಾಪಕ ಅಧ್ಯಕ್ಷÀ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ) ಅವರು ಒತ್ತುಗುಂಡಿ ಒತ್ತಿ ಮನೆಗೆ ವಿದ್ಯುಚ್ಛಕ್ತಿ ಬೆಳಕನ್ನು ಪ್ರಕಾಶಮಾನ ಗೊಳಿಸಿದರು. ಈ ಸಂದರ್ಭದಲ್ಲಿ ಫೌಂಡೇಶನ್‍ನ ಚೆಲ್ಲಡ್ಕ ರಾಧಾಕೃಷ್ಣ ಡಿ.ಶೆಟ್ಟಿ, ಎಸ್‍ಎನ್‍ಎಸ್ ಪಾಲಿಟೆಕ್ನಿಕ್‍ನ ಪ್ರಾಂಶುಪಾಲೆ ಎನ್.ಶಶಿಪ್ರಭಾ, ಇಲೆಕ್ಟ್ರಾನಿಕ್ಸ್ ಮತ್ತು ಇಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥೆ ಎಸ್.ವಿಜೇತಾ ಮತ್ತು ವಿದ್ಯಾಥಿರ್üಗಳಾದ ಕೆ.ಜಗದೀಶ್ ಮತ್ತು ಎಸ್.ನೋಣಯ್ಯ ಉಪಸ್ಥಿತರಿದ್ದರು.

ಗೋಪಾಲಕೃಷ್ಣ ಕುಂದರ್ ಕುಟುಂಬದ ಸ್ಥಿತಿಗತಿ ತಿಳಿಸಿದ್ದು, ಮನೆಯ ದುಸ್ಥಿತಿಯನ್ನು ಕಣ್ಣಾರೆ ಕಂಡ ಕೆ.ಡಿ ಶೆಟ್ಟಿ ಅವರು ಶೀಘ್ರವೇ ಮನೆಯನ್ನೂ ದುರಸ್ತಿಗೊಳಿಸುವ ಭರವಸೆ ನೀಡಿರುವರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here