Thursday 25th, April 2024
canara news

ವಿದೇಶಗಳಿಗೆ ತೆರಳುವ ಜನರು ಎದುರಿಸಬೇಕಗುವ ಸಮಶ್ಶೆಗಳು ಹಾಗೂ ನೆರವು

Published On : 14 Oct 2018   |  Reported By : Dr Gerald PInto


“ಅನಧಿಕ್ರತ ಹಾಗೂ ಕೆಂದ್ರ ಸರಕಾರದ ವಿದೆಶಾಂಗ ಇಲಾಖೆಯೊಂದಿಗೆ ನೊಂದಾವಣಿ ಮಾಡದೆ ಇರುವ ಏಜೆಂಟ್‍ಗಳ ಮೂಲಕ ವಿದೇಶಕ್ಕೆ ನೌಕರಿಗೆ ಹೋಗುವ ಮಹಿಳೆಯರು, ಆಶಿಕ್ಶಿತ ಕಾರ್ಮಿಕರು ಮೋಸ ಹೋಗವ ಸಾದ್ಯತೆ ಹೆಚ್ಚು. ಕಾನೂನು ಬಾಹಿರವಾಗಿ ನೌಕರಿಗೆ ವಿದೆಶಗಳಿಗೆ ಹೋದರೆ ಅಥವಾ ಅಲ್ಲಿ ಕಾನೂನು ಬಾಹಿರವಾಗಿ ಅಲ್ಲಿ ಉಳಿದರೆ, ಸರಕಾರದ ವಿದೇಶಾಂಗ ಖಾತೆ ಕೂಡಾ ನೆರವಿಗೆ ಬರುವುದಿಲ್ಲಾ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಯಾವುದೇ ನೊಂದಾಯಿತ ಏಜೆನ್ಸಿ ಇಲ್ಲಾ. ಮುಂಬಾಯಿ ಅಥವಾ ದೆಹಲಿಯಲ್ಲಿ ಇರುವವರು ಇಲ್ಲಿಯ ಜನರ ಮೂಲಕ ಪತ್ರಿಕೆಯಲ್ಲಿ ಜಾಹೀರಾತು ನೀಡಿ, ಜನರನ್ನು ಮುಂಬಾಯಿ ಅಥವಾ ದೆಹಲಿಗೆ ಕಳುಹಿಸಿಕೊಡುತ್ತಾರೆ. ಆವರಿಗೆ ಕಮಿಷನ್ ಸಿಗುತ್ತದೆ, ಆದರೆ ಅವರು ಏಜೆಂಟರು ಅಲ್ಲಾ. ಅವರಿಗೆ ಮುಂದಿನದ್ದುಏನೂ ತಿಳಿದಿರುವುದಿಲ್ಲಾ.

ಈ ಕಾರ್ಮಿಕರನ್ನು ಮುಂಬಾಯಿಂದ ನೇಪಾಳಕ್ಕೆ, ಅಲ್ಲಿಂದ ದುಬಾಯಿಗೆ ಕಳುಹಿಸಿ ಅಲ್ಲಿ ಅವರನ್ನು ಹರಾಜು ಹಾಕಿ ಮಾರಲಾಗುತ್ತದೆ. ಮೂರು ತಿಂಗಳು ಅವರನ್ನು ಅವರ ತಾತ್ಕಲಿಕ ವಿಸಾ ಮುಗಿಯುತನಕ ಸರಿಯಾಗಿ ನೋಡಲಾಗುತ್ತದೆ. ನಂತರ ಗುಲಾಮರಾಗಿ ನೋಡುತ್ತಾರೆ. ಆಗ ಅವರಿಗೆ ಪೊಲಿಸರಿಗೆ ದೂರು ಕೊಡಲೂ ಸಾದ್ಯವಿಲ್ಲಾ. ಅವರ ಹತ್ತಿರ ವೀಸ ಇಲ್ಲದೆ ಇರುವುದರಿಂದ ಅವರು ಕಾನೂನು ಬಾಹಿರವಾಗಿ ಅಲ್ಲಿ ಉಳಿಯುತ್ತಾರೆ, ದೂರು ಕೊಟ್ಟರೆ ಅವರನ್ನೆ ಜೈಲಿಗೆ ಕಳುಹಿಸುತ್ತಾರೆ. ಇದಕ್ಕೆ ಅವರು ಹಲವಾರು ಉದಾಹರಣೆಗಳನ್ನು ಅವರು ನೀಡಿದರು. ಅವುಗಳಲ್ಲಿ ಶಿರ್ವದ ಜಸಿಂತ ಮೇಂಡೋನ್ಸ ಒಂದಾಗಿದೆ. ಗಂಡ ತೀರಿಕೊಂಡಾಗ, ಮಕ್ಕಳಿಗೆ ಶಿಕ್ಷಣ ನೀಡಲು ಅವರು ಗಲ್ಪ್ ದೇಶಕ್ಕೆ( ಖಟಾರಿಗೆ ) ಒಂದು ಹಿಂದು ಕುಟುಂಬದ ಮಗುವನ್ನು ನೋಡಲು ಕರೆದುಕೊಂಡು ಹೋಗುತ್ತೇವೆ ಎಂದು ಏಜೆಂಟರು ಹೇಳಿದ್ದರು, ಆದರೆ ಅವರನ್ನು ವಾಸ್ತವವಾಗಿ 4.5 ಲಕ್ಷಕ್ಕೆ ಒಬ್ಬ ಅರಬನಿಗೆ ಮಾರಲಾಗಿತ್ತು.

ಆದುದರಿಂದ ಪ್ರತಿಯೊಂದು ಸಮೂದಯದ ಸಂಗಟನೆಗಳು, ಇಗರ್ಜಿಗಳು ವಿದೇಶಕ್ಕೆ ನೌಕರಿಗೆ ತೆರಳುವ ಬಡ ಕಾರ್ಮಿಕರ ಬಗ್ಗೆ ಕಾಳಜಿ ವಹಿಸಿ, ಏಜನ್ಸಿ, ವಿದೆಶಿ ಕೆಲಸ ನೀಡುವವನ ಬಗ್ಗೆ ವಿವರ ಹಾಗೂ ಕೆಲಸದ ಕರಾರು ಹಾಗೂ ಜೀವ ವಿಮೆ ಇದರ ಬಗ್ಗೆ ಮಾಹಿತಿ ಪಡೆದು ಮಾರ್ಗದರ್ಶನ ನೀಡಬೇಕು”, ಎಂದು ಡಾ. ರವೀಂದ್ರ ಶಾನುಬೋಗ್, ಅದ್ಯಕ್ಷರು, ಮಾನವಹಕ್ಕುಗಳ ರಕ್ಷಣಾ ಪ್ರತಿಷ್ಥಾನ ಉಡುಪಿ ಇವರು ಹೇಳಿದರು. 14-10-2018 ರಂದು ಕಥೊಲಿಕ ಸಭೆ ಉಡುಪಿ ಪ್ರದೆಶ (ರಿ )ಇವರು, ಉಡುಪಿಯ ತಮ್ಮ ಕಚೇರಿಯ ಸಭಾ ಭವನದಲ್ಲಿ ಏರ್ಪಡಿಸಿದ ವಿದೇಶಗಳಿಗೆ ತೆರಳುವ ಜನರು ಎದುರಿಸಬೇಕಗುವ ಸಮಶ್ಶೆಗಳು ಹಾಗೂ ನೆರವು ಇದರ ಬಗ್ಗೆ ಮಾತನಾಡಿದರು. ಸರಿಯಾಗಿ ನೊಂದಾಯಿತ ಏಜೆಂಟುಗಳ ಮೂಲಕ ಹೋದರೆ ಮಾತ್ರ ವೆಕ್ತಿ ತೀರಿಹೋದರೆ, ಕಣ್ಮರೆಯಾದರೆ, ಕೊಲೆಯಾದರೆ ಪರಿಹಾರ ಸಿಗುತ್ತದೆ, ಇಲ್ಲದಿದ್ದರೆ ಹೆಣ ದಫನ ಮಡುವ ವೆವಸ್ತೆ ಕೂಡಾ ಗಲ್ಫ್ ದೆಶಗಳಲ್ಲಿ ಇಲ್ಲಾ, ಹೆಣವನ್ನು ತರಲೂ ಸಾದ್ಯವಿಲ್ಲಾ ಎಂದು ಅವರು ಹೇಳಿದರು.

ಕಥೊಲಿಕ ಸಭೆ ಉಡುಪಿ ಪ್ರದೆಶ (ರಿ ) ಇದರ ಅದ್ಯಕ್ಷರಾದ ಆಲ್ವಿನ್ ಕ್ವಾಡ್ರಸ್ ಅದ್ಯಕ್ಷತೆ ವಹಿಸಿ ಪ್ರಸ್ತಾವನೆ ನೀಡಿದರು. ಆಲ್ಪೊನ್ಸ್ ಡಿ ಕೋಸ್ತಾ ,ಡಾ. ರವೀಂದ್ರ ಶಾನುಬೋಗ್ ಇವರನ್ನು ಪರಿಚಯಿಸಿದರು. ಕಾರ್ಯದರ್ಶಿ ಮೇಕ್ಸಿಮ್ ಡಿ ಸೋಜ ವಂದಿಸಿದರು. ಪ್ಲೈವಾನ್ ಡಿ ಸೋಜ ಕಾರ್ಯಕ್ರಮ ನಿರೂಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here