ಮುಂಬಯಿ, ಅ.16: ಆಲ್ ಇಂಡಿಯಾ ಟ್ರಾನ್ಸ್‍ಪೆÇೀರ್ಟ್ ಕಾಂಗ್ರೇಸ್ (ಎಐಟಿಸಿ-ಇಂಟಕ್) ಕರ್ನಾಟಕ ರಾಜ್ಯಧ್ಯಕ್ಷರಾಗಿ ಸುನೀಲ್ ಪಾಯ್ಸ್ ಪುತ್ತೂರು ಆಯ್ಕೆ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಲ್ಲಾಜೆ ಮೂಲದ ಸುನೀಲ್ ಪಾಯ್ಸ್ ರಾಷ್ಟ್ರದ ಆಥಿರ್üಕ ರಾಜಧಾನಿ ಬೃಹನ್ಮುಂಬಯಿ ಅಲ್ಲಿನ ಯಶಸ್ವಿ ಯುವೋದ್ಯಮಿ, ತೆರೆಮರೆಯ ಸಮಾಜ ಸೇವಕ, ಕೊಡುಗೈದಾನಿ ಆಗಿದ್ದು, ನಿತ್ಯಾಧರ್ ಎಲೆಕ್ಟ್ರಿಕಲ್ ಮತ್ತು ಕೆನರಾ ಪಿಂಟೋ ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕರಾಗಿರುವರು.
ಸುನೀಲ್ ಪಾಯ್ಸ್ ಇತ್ತೀಚೆಗಷ್ಟೇ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇದರ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕ ಅಗಿ ನೇಮಕ ಗೊಂಡಿರುವ ಇವರು ನಿರಾಶ್ರಿತರ ಮತ್ತು ಬಡವರ ಪಾಲಿನ ದೇವರು ಎಂದೇ ಜನಜನಿತರು.
ಪುತ್ತೂರು ಕಲ್ಲಾಜೆ ನಿವಾಸಿಗಳಾದ ಸಿರಿಲ್ ಸಿಲ್ವೆಸ್ಟರ್ ಪಾಯ್ಸ್ ಮತ್ತು ನತಾಲಿಯಾ ಪಾಯ್ಸ್ ದಂಪತಿ ಸುಪುತ್ರರಾಗಿ1974, ಜೂನ್ 06 ರಂದು ಜನಿಸಿದರು. ಬಳಿಕ ಸೈಂಟ್ ಫಿಲೋಮೆನಾ ಕಾಲೇಜ್ ಪುತ್ತೂರು ಇಲ್ಲಿ ಪದವಿಪೂರ್ವ ಕಾಲೇಜು ಶಿಕ್ಷಣ ಪೂರೈಸಿ ಉದರ ಪೆÇೀಷಣೆಗೆ ಎಲ್ಲರಂತೆ ಮುಂಬಯಿಗೆ ಸ್ಥಾನಾಂತರ ಗೊಂಡರು. ಇಲ್ಲಿ 1995ರಲ್ಲಿ ಫಾದರ್ ಆ್ಯಗ್ನೆಲ್ಲೋ ಕಾಲೇಜ್‍ನಲ್ಲಿ ಬಿ.ಇ ಇಲೆಕ್ಟ್ರೀಕಲ್ ಇಂಜಿನಿಯರಿಂಗ್ ಡಿಗ್ರಿ ಮೂಲಕ ಪದವೀಧರರಾದರು.
1991-99 ಪರ್ಯಾಂತ್ ದುಬಾಯಿನಲ್ಲಿ ಉದ್ಯೋಗ ಮಾಡಿ ಮತ್ತೆ ಮುಂಬಯಿ ಸೇರಿದರು. ನಗರದ ವಿಟಿ (ಫೆÇೀರ್ಟ್) ಕ್ರಾಫ್‍ಡ್ ಮಾರ್ಕೆಟ್ ಅಲ್ಲಿನ ಸೀತಾರಾಮ್ ಬಿಲ್ಡಿಂಗ್‍ನಲ್ಲಿರುವ ಮೆಂಗ್ಳೂರ್ ಕ್ಯಾಥೋಲಿಕ್ ಅಸೋಸಿಯೇಶನ್ (ರಿ.) ಇದರ ಸಕ್ರೀಯ ಸದಸ್ಯರಾಗಿ, ಕಾರ್ಯದರ್ಶಿ ಆಗಿಯೂ ಸೇವಾ ನಿರತರು. ಅಂತೆಯೇ ಸೀತಾರಾಮ್ ಬಿಲ್ಡಿಂಗ್ ಸೊಸೈಟಿ ಇದರ ಕಾರ್ಯದರ್ಶಿ ಆಗಿಯೂ ಕಾರ್ಯನಿತರರಾಗಿದ್ದಾರೆ.
ಬೆಳ್ಮಾಣ್ ಮೂಲದ (ಪ್ರಸ್ತುತ ಕಲ್ಯಾಣ್-ಥಾಣೆ ನಿವಾಸಿ) ಜೆಸಿಂತಾ ಅವರನ್ನು ವರಿಸಿದ್ದು ಇಬ್ಬರು ಸುಪುತ್ರರೊಂದಿಗೆ ಮುಂಬಯಿ ವಡಲಾ ಇಲ್ಲಿ ಕೌಟುಂಬಿಕ ಬದುಕನ್ನು ಸಾಗಿಸುತ್ತಿದ್ದಾರೆ.