ಪುರುಷರ ಮುಕ್ತ-60 ಕೆ.ಜಿ ವಿಭಾಗ ಹಾಗೂ ದ.ಕ ಜಿಲ್ಲಾ ಹೈಸ್ಕೂಲು-ಪಿಯುಸಿ ವಿಭಾಗಕ್ಕೆ ಸ್ಪರ್ಧೆ
ಮುಂಬಯಿ, ಅ.17: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ತನ್ನ 35ನೇ ವಾರ್ಷಿಕ ಸ್ವಸ್ತಿಕ್ ಪೆÇ್ರ ಕಬಡ್ಡಿ ಉತ್ಸವವನ್ನು ಇದೇ ಬರುವ ನ.24ನೇ ಶನಿವಾರ ಮತ್ತು 25ನೇ ಆದಿತ್ಯವಾರ ಬಂಟ್ವಾಳ ತಾಲೂಕು ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯಲಿದೆ. 12. ನವೆಂಬರ್.2016ರ ಶನಿವಾರ ಮತ್ತು 13ನೇ ಆದಿತ್ಯವಾರ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ಆಯೋಜಿಸಿದೆ ಎಂದು ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ತಿಳಿಸಿದ್ದಾರೆ.
ದ.ಕ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಸಹಭಾಗಿತ್ವ ಹಾಗೂ ಮುಂಬಯಿ ಉದ್ಯಮಿ ಶ್ರೀ ಸುಂದರರಾಜ್ ಹೆಗ್ಡೆ ಅವರ ಸಾರಥ್ಯದೊಂದಿಗೆ ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದಲ್ಲಿ ಹೊನಲು ಬೆಳಕಿನಲ್ಲಿ ಅಟಲ್‍ಜೀ ಪ್ರಶಸ್ತಿ ಸ್ವಸ್ತಿಕ್ ಪೆÇ್ರ ಕಬಡ್ಡಿ-2018 ಉತ್ಸವ ಹಮ್ಮಿಕೊಳ್ಳಲಾಗಿದೆ. ಈ ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ಮುಕ್ತ ವಿಭಾಗ ಹಾಗೂ 60 ಕೆ.ಜಿ ವಿಭಾಗದ ಸ್ಪರ್ಧೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹೈಸ್ಕೂಲು ಹಾಗೂ ಪಿಯುಸಿ ವಿಭಾಗದ ಬಾಲಕ-ಬಾಲಕಿಯರಿಗಾಗಿ ಪೆÇ್ರ ಕಬಡ್ಡಿ ನಡೆಸಲಾಗುವುದು.
ಮುಕ್ತ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ರೂಪಾಯಿ 35,000/- ನಗದು ಮತ್ತು ಪ್ರಶಸ್ತಿ, ದ್ವಿತೀಯ: 25,000/-ನಗದು-ಟ್ರೋಫಿ, ತೃತೀಯ:15,000/- ನಗದು-ಟ್ರೋಫಿ ಹಾಗೂ ಚತುರ್ಥ:10,000/-ನಗದು-ಟ್ರೋಫಿ. ಅಂತೆಯೇ 60 ಕೆ.ಜಿ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ ರೂಪಾಯಿ 30,000/- ನಗದು ಮತ್ತು ಪ್ರಶಸ್ತಿ, ದ್ವಿತೀಯ:20,000/-ನಗದು-ಟ್ರೋಫಿ, ತೃತೀಯ:10,000/-ನಗದು-ಟ್ರೋಫಿ, ಚತುರ್ಥ:10,000/-ನಗದು-ಟ್ರೋಫಿ ನೀಡಿ ಗೌರವಿಸಲಾಗುವುದು. ಪುರುಷರ ಮುಕ್ತ ವಿಬಾಗದಲ್ಲಿ ಕರ್ನಾಟಕ ರಾಜ್ಯದ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ತಾಂತ್ರಿಕ ಸಮಿತಿ ಸಂಚಾಲಕರಾಗಿ ಫ್ರಾನ್ಸಿಸ್ಸ್ ವಿ.ವಿ., ಪಂದ್ಯಾಟದ ಸಂಚಾಲಕರಾಗಿ ರಾಜೇಶ್ ಪುಲಿಮಜಲು, ಸಹ ಸಂಚಾಲಕರಾಗಿ ಅಬ್ದುಲ್ ಹಮೀದ್ ಮಲ್ಪೆ ಹಾಗೂ ಚಂದ್ರಶೇಖರ (ಕರ್ಣ) ಸಹಕರಿಸಲಿದ್ದಾರೆ.
ಆಸಕ್ತ ತಂಡಗಳು ರಾಜೇಶ್ ಪುಲಿಮಜಲು-9901098038, ಅಬ್ದುಲ್ ಹಮೀದ್- 9449330658, ಫ್ರಾನ್ಸಿಸ್ಸ್ ವಿ.ವಿ-9449332283 ಅವರನ್ನು ಸಂಪರ್ಕಿಸಿ ತಮ್ಮ ತಂಡಗಳ ಹೆಸರುಗಳನ್ನು ನ. 18ರ ಒಳಗಾಗಿ ನೋಂದಾಯಿಸುವಂತೆ ಅಧ್ಯಕ್ಷ ಪ್ರಶಾಂತ್ ಎಂ.ಪುಂಜಾಲಕಟ್ಟೆ, ಗೌರವಾಧ್ಯಕ್ಷ ಅಬ್ದುಲ್ ಪಿ. ಮಂಜಲಪಲ್ಕೆ ಹಾಗೂ ಕಾರ್ಯದರ್ಶಿ ಜಯರಾಜ್ ಅತ್ತಾಜೆ ತಿಳಿಸಿದ್ದಾರೆ.
ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವಿವಿಧ ಸಾಮಾಜಿಕ, ಆರೋಗ್ಯ, ಸಾಂಸ್ಕøತಿಕ, ಕ್ರೀಡಾ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಗೈಯುತ್ತಿದ್ದು ಸಾಧನೆಯ ಹಾದಿಯಲ್ಲಿ 33ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಸಮಾಜಮುಖಿ ಕಾರ್ಯಗಳೊಂದಿಗೆ ಮಾದರಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. 35 ವರ್ಷಗಳಿಂದ ನಿರಂತರ ಕಬಡ್ಡಿ ಪಂದ್ಯಾಟ ಆಯೋಜಿಸಿ ಸ್ವದೇಶಿ ಕ್ರೀಡೆ ಕಬಡ್ಡಿಯತ್ತ ಯುವಕರನ್ನು ಆಕರ್ಷಿಸಿದೆ. ವಿವಿಧ ಸಾಧಕರನ್ನು ಗುರುತಿಸಿ ಸ್ವಸ್ತಿಕ್ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡುವ ಉತ್ತಮ ಕಾರ್ಯ ಮಾಡುತ್ತಿದೆ. ಸಾಮಾಜಿಕ ಕಾರ್ಯಗಳಿಗಾಗಿ ದ.ಕ.ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಅತ್ಯುತ್ತಮ ಯುವಕ ಸಂಘವೆಂಬ ಪ್ರಶಸ್ತಿ ಗಳಿಸಿದೆ. ತುಂಗಪ್ಪ ಬಂಗೇರ 1983ರಲ್ಲಿ ಸಮಾನ ಮನಸ್ಕ ಯುವಕರೊಂದಿಗೆ ಸ್ವಸ್ತಿಕ್ ಕ್ರಿಕೆಟ್ ತಂಡವನ್ನು ಕಟ್ಟಿಕೊಂಡು ಆ ಮೂಲಕ ಕ್ಲಬ್‍ನ್ನು ಸ್ಥಾಪಿಸಿದರು. ನಿರಂತರ 34 ವರ್ಷಗಳಿಂದ ಕಬಡ್ಡಿ ಪಂದ್ಯಾಟ ಆಯೋಜಿಸಿ ಕ್ಲಬ್‍ನ ಹೆಗ್ಗಳಿಕೆ ಹಾಗೂ ದಾಖಲೆಗೆ ಪಾತ್ರರಾಗಿದ್ದಾರೆ. ನೂರಾರು ಜನಪರ ಕಾರ್ಯಕ್ರಮಗಳ ಸಂಘಟನೆಯೊಂದಿಗೆ, ಹಲವಾರು ವಿನೂತನ ಯೋಜನೆಗಳ ಅನುಷ್ಠಾನದೊಂದಿಗೆ, ಸಮಾಜಮುಖಿ ಚಿಂತನೆಗಳೊಂದಿಗೆ ನಿರಂತರ ಜನರೊಂದಿಗಿದ್ದು, ಜನರ ಒಡನಾಡಿಯಾಗಿ, ಸಾಮಾಜಿಕ ಪ್ರಗತಿಯಲ್ಲಿ ವಿಶಿಷ್ಠ ಕೊಡುಗೆ ನೀಡುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಮಾದರಿ ಸಂಘಟನೆಯಾಗಿ ಜನಮೆಚ್ಚುಗೆಗೆ ಪಾತ್ರವಾಗಿದೆ. ನಿರಂತರ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟ ನಡೆಸುವ ಮೂಲಕ ಕ್ರೀಡಾ ಕ್ಷೇತ್ರದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಈ ಸಂಘಟನೆ ಹಲವಾರು ಆರೋಗ್ಯ ಶಿಬಿರಗಳು, ಮಾಹಿತಿ ಕಾರ್ಯಾಗಾರಗಳು, ತರಬೇತಿ ಕಮ್ಮಟಗಳು, ಬಡವರಿಗೆ ಮನೆಯ ವ್ಯವಸ್ಥೆ, ಮದುವೆಗೆ ನೆರವು, ಆಥಿರ್üಕ ದುರ್ಬಲರಿಗೆ ಸಹಾಯಧನ, ಅರ್ಹ ಬಡ ಮಕ್ಕಳಿಗೆ ಸಮವಸ್ತ್ರ ವಿತರಣೆ, ಜಿಲ್ಲಾ ಮಟ್ಟದ ಯುವಜನ ಮೇಳ, ಜಿಲ್ಲಾ ಮಟ್ಟದ ಆರೋಗ್ಯ ಮೇಳ, ಜಿಲ್ಲಾ ಮಟ್ಟದ ನಾಟಕೋತ್ಸವ, ಜಿಲ್ಲಾ ಕ್ರೀಡೋತ್ಸವ ಇತ್ಯಾದಿ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಕ್ರಿಯಾಶೀಲವಾಗಿ, ರಚನಾತ್ಮಕವಾಗಿ ಮುನ್ನಡೆಯುತ್ತಿದೆ. ಎಂಟು ವರ್ಷಗಳ ಹಿಂದೆ ರಜತ ಮಹೋತ್ಸವ ವನ್ನು ಸ್ವಸ್ತಿ ಸಿರಿ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಹಾಗೂ ಸಾಮೂಹಿಕ ವಿವಾಹದೊಂದಿಗೆ ಅದ್ದೂರಿಯಾಗಿ ಆಚರಿಸಿ ನಾಡಿನ ಗಮನ ಸೆಳೆದ ಈ ಸಂಸ್ಥೆ ನಿರಂತರವಾಗಿ ವೈಭವಯುತವಾಗಿ ಮುಂದುವರಿಸುತ್ತಾ ನಾಡಿನ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ ಎಂದು ಸ್ಥಾಪಕಾಧ್ಯಕ್ಷ ತುಂಗಪ್ಪ ಬಂಗೇರ ತಿಳಿಸಿದ್ದಾರೆ.