Wednesday 14th, May 2025
canara news

ಕೆನರಾ ಪಿಂಟೋ ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕ ಸುನೀಲ್ ಪಾಯ್ಸ್ ಎಐಟಿಸಿ ಕರ್ನಾಟಕ ರಾಜ್ಯಧ್ಯಕ್ಷರಾಗಿ ಅಧಿಕಾರ ಸ್ವೀಕಾರ

Published On : 17 Oct 2018   |  Reported By : Rons Bantwal


ಮುಂಬಯಿ, ಅ.17: ಆಲ್ ಇಂಡಿಯಾ ಟ್ರಾನ್ಸ್‍ಪೆÇೀರ್ಟ್ ಕಾಂಗ್ರೇಸ್ (ಇಂಟಕ್) ಕರ್ನಾಟಕ ರಾಜ್ಯಧ್ಯಕ್ಷರಾಗಿ ಸುನೀಲ್ ಪಾಯ್ಸ್ ಪುತ್ತೂರು ಅಧಿಕಾರ ವಹಿಸಿಕೊಂಡರು.

ಇಂದಿಲ್ಲಿ ಸೋಮವಾರ ಸಂಜೆ ನವಿಮುಂಬಯಿ ಸಿಬಿಡಿ ಬೇಲಾಪುರ ಇಲ್ಲಿನ ಹೊಟೇಲ್ ಮಹೇಶ್ ಸಭಾಗೃಹದಲ್ಲಿ ನಡೆಸಲ್ಪಟ್ಟ ಪದಾಗ್ರಹಣ ಕಾರ್ಯಕ್ರಮದಲ್ಲಿ ಎಐಟಿಸಿ ರಾಷ್ಟ್ರೀಯ ಅಧ್ಯಕ್ಷ ಯಾಸೀನ್ ಸಯ್ಯದ್ ಥಂಬೂಲಿ ಅವರು ಸುನೀಲ್ ಪಾಯ್ಸ್ ಅವರಿಗೆ ಅಧಿಕೃತವಾಗಿ ನಿಯುಕ್ತಿ ಪತ್ರ ಪ್ರದಾನಿಸಿ ಅಧಿಕಾರ ಹಸ್ತಾಂತರಿಸಿ ಶುಭಾರೈಸಿದರು.

ಈ ಸಂದರ್ಭದಲ್ಲಿ ಎಐಟಿಸಿ ರಾಷ್ಟ್ರೀಯ ಕಾರ್ಯಾಧ್ಯಕ್ಷ ಗಣೇಶ್ ಬೊರವಕೆ, ಎಐಟಿಸಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಉಲೆ, ಕೋಶಾಧಿಕಾರಿ ಅನ್ಸಾರ್ ಶೇಖ್, ಬೇಲಾಪುರ ವಿಧಾನಸಭಾ ಅನಿಕೇತ್ ದೇಶ್‍ಮುಖ್ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು, ಎಐಟಿಸಿ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಅಜಯ್ ಜೈನ್ ಅವರಿಗೂ ಆಯ್ಕೆಪತ್ರ ಹಸ್ತಾಂತರಿಸಿ ಅಭಿನಂದಿಸಿದರು.

ಮಹೇಶ್ ಶೆಟ್ಟಿ ಬೋಳ, ಸಕಿತ್‍ಕುಮಾರ್ ಜೈನ್, ಡೆನಿಸ್ ಪಾಯ್ಸ್, ಸತೀಶ್ ಅಜಿಲ, ಸುನೀಲ್ ಸೆರಾವೋ, ಸುರೇಂದ್ರ ಕೋಟ್ಯಾನ್ ಕೊಳಕೆ ಇರ್ವತ್ತೂರು, ವಿವೇಕ್ ಡಿಕುನ್ಹಾ ಸೇರಿದಂತೆ ಹಲವು ನಾಯಕರು, ವಿವಿಧ ಸರಕುಸಾಗಣಿಕಾ ವಾಹನಗಳ ಮಾಲೀಕರು, ನೌಕರರು ಉಪಸ್ಥಿತರಿದ್ದರು. ನವಿಮುಂಬಯಿ ಯುವ ಕಾಂಗ್ರೇಸ್ ಧುರೀಣ ನಿಶಾಂತ್ ಭಗತ್ ಸ್ವಾಗತಿಸಿದರು. ದಿನೇಶ್ ಜೋಶಿ ಕಾರ್ಯಕ್ರಮ ನಿರೂಪಿಸಿದರು. ಅಜಯ್ ಜೈನ್ ವಂದಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕಲ್ಲಾಜೆ ಮೂಲದ ಸುನೀಲ್ ಪಾಯ್ಸ್ ಇದೀಗ ರಾಷ್ಟ್ರದ ಆಥಿರ್üಕ ರಾಜಧಾನಿ ಮುಂಬಯಿನಲ್ಲಿದ್ದು ನಿತ್ಯಾಧರ್ ಎಲೆಕ್ಟ್ರಿಕಲ್ ಮತ್ತು ಕೆನರಾ ಪಿಂಟೋ ಟ್ರಾವೆಲ್ಸ್ ಸಂಸ್ಥೆಗಳ ಮಾಲೀಕರಾಗಿದ್ದು, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕರಾಗಿಯೂ ಸೇವಾ ನಿರತರಾಗಿದ್ದಾರೆ. ಓರ್ವ ಯಶಸ್ವಿ ಯುವ ಉದ್ಯಮಿ ಆಗಿರುವ ಪಾಯ್ಸ್ ತೆರೆಮರೆಯ ಕೊಡುಗೈದಾನಿಯೂ ಆಗಿ ಸಮಾಜ ಸೇವೆಯಲ್ಲಿ ತೊಡಗಿಸಿರುವರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here