Friday 19th, April 2024
canara news

ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ

Published On : 21 Oct 2018   |  Reported By : Rons Bantwal


ಮುಂಬಯಿ, ಅ.21: ಗೋರೆಗಾಂವ್ ಪಶ್ಚಿಮದಲ್ಲಿನ ಮೋತಿಲಾಲ್ ನಗರದ ತುಳು-ಕನ್ನಡಿಗರ ಶ್ರೀ ಶಾಂತ ದುರ್ಗಾ ಚಾರಿಟೇಬಲ್ ಟ್ರಸ್ಟ್ ಸಂಚಾಲಕತ್ವದ ಶ್ರೀ ಶಾಂತ ದುರ್ಗಾ ದೇವಿ ಮಂದಿರದಲ್ಲಿ 2018ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ ಸಂಭ್ರಮ ಸಡಗರದಿಂದ ನಡೆಸಲ್ಪಟ್ಟಿತು. ಸಾತ್‍ರಸ್ತಾ ಹಾಗೂ ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಅಮ್ಮನವರ ಆರಾಧಕರಾಗಿದ್ದು ದೈವಕ್ಯ ಶ್ರೀ ನಿರಂಜನ ಸ್ವಾಮಿಜೀ ಅವರ ಅನುಗ್ರಹ ಮತ್ತು ದೇವಸ್ಥಾನದ ಧರ್ಮಾಧಿಕಾರಿ ಶ್ರೀ ಶ್ಯಾಮನಂದ ಸ್ವಾಮೀಜಿ ಮುಂದಾಳುತ್ವದಲ್ಲಿ ಶರನ್ನವರಾತ್ರಿ ವಿಧಿವತ್ತಾಗಿ ಆಚರಿಸಲ್ಪಟ್ಟಿತು.

ದಸರಾ ಹಬ್ಬದ ನವದಿನಗಳಲ್ಲಿ ಮಹಾಗಣಪತಿ ಹೋಮ, ಪಂಚಾಮೃತ ಅಭಿಷೇಕ, ನವಕ ಕಲಶ ಅಭಿಷೇಕ, ಘಟಸ್ಥಾಪನೆ, ಅಶ್ಲೇಷ ಬಲಿ ಪೂಜೆ, ಹೋಮ ಮತ್ತು ತೀರ್ಥಪ್ರಸಾದ, ಶ್ರೀ ಶನೀಶ್ವರ ಕಲ್ಪಕತಾ ಪೂಜೆ, ಸತ್ಯನಾರಾಯಣ ಮಹಾ ಪೂಜೆ, ಶ್ರೀ ರಂಗಪೂಜೆ, ದೀಪೆÇೀತ್ಸವ, ದುರ್ಗಾಷ್ಟಮಿ, ದುರ್ಗಾಹೋಮ, ಕಲಶಾಭಿಷೇಕ ಮತ್ತು ಗುರುವಾರ ವಿಜಯ ದಶಮಿ ದಿನ ಬೆಳಿಗ್ಗೆ ಘಟ ವಿಸರ್ಜನೆ, ಶ್ರೀದೇವಿಗೆ ಅಭಿಷೇಕ, ಮಹಾ ಮಂಗಳಾರತಿ ಭಜನೆ, ದೇವಿ ಅವೇಶ (ದರ್ಶನ) ಪೂಜೆ, ಪ್ರವಿೂಳಾ ಪೂಜಾರಿ ತಂಡ ಹಾಗೂ ಸದ್ಗುರು ಭಜನಾ ಮಂಡಳಿ ಮೀರಾರೋಡ್ ಇವರಿಂದ ಭಜನೆ, ಕಾರ್ತಿಕ್ ಪಿಳ್ಳೈ, ಸ್ವಾಮಿ ಪಿಳ್ಳೈ ವಿಷ್ಣು ವಿಶ್ವನಾಥ ರಾಣೆ ಹಾಗೂ ವಿಹಾ ವಿಷ್ಣು ರಾಣೆ ಸೇವಾರ್ಥ ಅನ್ನಸಂತರ್ಪಣೆ ಇತ್ಯಾದಿಗಳೊಂದಿಗೆ ವಾರ್ಷಿಕ ಶರನ್ನವರಾತ್ರಿ ಸಂಭ್ರಮ ಸಡಗರದೊಂದಿಗೆ ಆಚರಿಸಲ್ಪಟ್ಟಿದ್ದು, ಮಂದಿರದ ಪ್ರಧಾನ ಅರ್ಚಕ ಕೃಷ್ಣರಾಜ್ ತಂತ್ರಿ ತನ್ನ ಪೌರೋಹಿತ್ಯದಲ್ಲಿ ವಿವಿಧ ಪೂಜಾಧಿಗಳನ್ನು ನೆರವೇರಿಸಿ ತೀರ್ಥಪ್ರಸಾದ ವಿತರಿಸಿ ನೆರೆದ ಸದ್ಭಕ್ತರಿಗೆ ಅನುಗ್ರಹಿಸಿದರು. ಮಂದಿರದ ಧರ್ಮಾಧಿಕಾರಿ ಶ್ಯಾಮನಂದ ಸ್ವಾಮೀಜಿ ಗಣ್ಯರಿಗೆ ಸನ್ಮಾನಿಸಿ ಸತ್ಕರಿಸಿದರು.

ಮಂದಿರದ ವಿಶ್ವಸ್ಥ ಸದಸ್ಯರುಗಳಾದ ಉದಯ ಎಸ್.ಸಾಲಿಯಾನ್ ಮತ್ತು ಸೂರಜ್ ಎಸ್.ಸಾಲಿಯಾನ್ ಮುಂದಾಳುತ್ವದಲ್ಲಿ ಜರುಗಿದ ವಾರ್ಷಿಕ ಶರನ್ನವರಾತ್ರಿ ಉತ್ಸವದಲ್ಲಿ ಸ್ಥಾನೀಯ ನಗರ ಸೇವಕರುಗಳಾದ ಸಂದೀಪ್ ದೀಪಕ್ ಠಾಕೂರ್, ಶ್ರೀಕಲಾ ಪಿಳ್ಳೈ ಮತ್ತಿತರ ಗಣ್ಯರನೇಕರು ಅತಿಥಿüಗಳಾಗಿ ಆಗಮಿಸಿದ್ದರು. ನಾಡಿನ ಭಕ್ತಮಹಾಶಯರನೇಕರು ಉತ್ಸವದಲ್ಲಿ ಪಾಲ್ಗೊಂಡು ವಿವಿಧ ಸೇವೆಗಳನ್ನು ನೆರವೇರಿಸಿ ಶ್ರೀ ಶಾಂತ ದುರ್ಗಾದೇವಿ ಕೃಪೆಗೆ ಪಾತ್ರರಾದರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here