Saturday 20th, April 2024
canara news

ರಾಯನ್ ಇಂಟರ್‍ನೇಶನಲ್ ಗ್ರೂಫ್‍ನಿಂದ 158ನೇ ರಾಯನ್ ಮಿನಿಥಾನ್

Published On : 22 Oct 2018   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.21: ರಾಯನ್ ಇಂಟರ್‍ನೇಶನಲ್ ಗ್ರೂಪ್ ಆಫ್ ಇನ್‍ಸ್ಟಿಟ್ಯೂಟ್ಸ್‍ನ ಇಂದಿಲ್ಲಿ ಭಾನುವಾರ ವಾರ್ಷಿಕ 158ನೇ ರಾಯನ್ ಮಿನಿಥಾನ್ ಆಯೋಜಿಸಿದ್ದು, ಸಂಸ್ಥೆಯ ಬೊರಿವಲಿ ಪಶ್ಚಿಮದಲ್ಲಿನ ಸೈಂಟ್ ಲಾರೇನ್'ಸ್ ಶಾಲಾಂಗಣದಲ್ಲಿ ಬೆಳಿಗ್ಗೆ `ರಾಯನ್ ಮಿನಿಥಾನ್-2018' ಉದ್ಘಾಟಿಸಲ್ಪಟ್ಟಿದ್ದು, ರಾಯನ್ ಇಂಟರ್‍ನೇಶನಲ್ ಸಮೂಹ ಸಂಸ್ಥೆಯ ಸಿಇಒ ರಾಯನ್ ಎ.ಪಿಂಟೋ ಮತ್ತು ಮತ್ತಿತರ ಗಣ್ಯರು ಉಪಸ್ಥಿತಿಯಲ್ಲಿ ಅವರು ಹಸಿರು ನಿಶಾನೆ ತೋರಿಸಿ ಮಿನಿಥಾನ್‍ಗೆ ಚಾಲನೆಯನ್ನಿತ್ತರು.

3 ವಿಂಗಡನೆಯ ಓಟ ಸ್ಪರ್ಧೆಯಲ್ಲಿ 3 ವಿಭಾಗಗಳಾಗಿ ವಿಂಗಡಿಸಲಾಗಿ ನಡೆಸಲಾದ ಮಿನಿಥಾನ್‍ನಲ್ಲಿ ರಾಷ್ಟ್ರದಾದ್ಯಂತದ ಸುಮಾರು 41 ಶಾಲೆಗಳ ಸುಮಾರು 11,706 ವಿದ್ಯಾಥಿರ್sಗಳು ಪಾಲ್ಗೊಂಡಿದ್ದರು. ಬೊರಿವಲಿ ಪ್ರದೇಶದ ಸುಮಾರು 4 ಕಿ.ಮೀ ಮಾರ್ಗದಲ್ಲಿ ಸ್ಥಾನೀಯ ನೂರಾರು ಕ್ರೀಡಾಭಿಮಾನಿಗಳ ಪೆÇ್ರೀತ್ಸಾಹದ ನಡುವೆ ಪಾಲಕರು ಮತ್ತು ವಿದ್ಯಾಥಿರ್sಗಳು ಆಸಕ್ತಿಯಿಂದ ಪಾಲ್ಗೊಂಡು ಮಿನಿಥಾನ್‍ಗೆ ಮೆರುಗು ನೀಡಿದರು.

ರಾಯನ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದ ರಾಷ್ಟ್ರದಾದ್ಯಂತದ ಶಾಲಾ ವಿದ್ಯಾಥಿರ್sಗಳಲ್ಲಿನ158ನೇ ಓಟ ಇದಾಗಿದ್ದು, ಸಂಸ್ಥೆಯ ಕಾರ್ಯಾಧ್ಯಕ್ಷ ಆಗಸ್ಟಿನ್ ಎಫ್. ಪಿಂಟೋ ಅವರ ಸಮರ್ಥ ನಾಯಕತ್ವದಲ್ಲಿ 1998ರಲ್ಲಿ ಆರಂಭಗೊಂಡು ರಾಷ್ಟ್ರದ ವಿವಿಧ ಮಹಾನಗರಗಳಲ್ಲಿ ವಾರ್ಷಿಕವಾಗಿ ಮಿನಿಥಾನ್ ಓಟ ಆಯೋಜಿಸಲಾಗುತ್ತದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಿಗಾಗಿ ಯುವ ವಿದ್ಯಾಥಿರ್sಗಳನ್ನು ಸನ್ನದ್ಧಗೊಳಿಸುವುದಕ್ಕಾಗಿ ಮತ್ತು ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಅಭಿವೃದ್ಧಿ ಗೊಳಿಸಲು ಇಂತಹ ಓಟವನ್ನು ನಡೆಸಲಾಗುತ್ತದೆ. ಆ ಮೂಲಕ ರಾಷ್ಟ್ರದ ಭವಿಷ್ಯತ್ತಿನ ಭವ್ಯ ಪ್ರಜೆಗಳಾದ ವಿದ್ಯಾಥಿರ್sಗಳಲ್ಲಿನ ಪ್ರತಿಭೆಗಳಿಗೆ ಅವಕಾಶ, ಪ್ರತಿಭಾನ್ವೇಷನೆ ನಡೆಸಲು ಇಂತಹ ಮಿನಿಥಾನ್‍ಗಳು ಪೂರಕವಾಗಿವೆ. ವಾರ್ಷಿಕವಾಗಿ ಆಯೋಜಿಸುವ ವಿವಿದೆಡೆಯ ಮಿನಿಥಾನ್‍ನಲ್ಲಿ ಸುಮಾರು 1,00,000 ವಿದ್ಯಾಥಿರ್sಗಳು ಭಾಗವಹಿಸುತ್ತಿದ್ದಾರೆ. ಸ್ಪರ್ಧೆಯಲ್ಲಿ ವಿಜೇತ ಎಲ್ಲಾ ವಿದ್ಯಾಥಿರ್sಗಳಿಗೆ ಮೇಡಂ ಗ್ರೇಸ್ ಪಿಂಟೋ ಶುಭಾರೈಸಿದರು.

ವಿವಿಧ ತಂಡಗಳ ವಿದ್ಯಾಥಿರ್sಗಳ ಮನೋರಂಜನಾ ಕಾರ್ಯಕ್ರಮದೊಂದಿಗೆ ಬೆಳಿಗ್ಗೆ 9.00 ಗಂಟೆ ಸುಮಾರಿಗೆ ನಡೆಸಲ್ಪಟ್ಟ ಪಾರಿತೋಷಕ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತೀಯೋರ್ವರಿಗೂ ವಿದ್ಯಾಥಿರ್üಗಳಿಗೂ ಸೇರಿದಂತೆ ವಿಜೇತರಿಗೆ ಪ್ರಶಸ್ತಿ, ನಗದು, ಸ್ಮರಣಿಕೆ, ಪ್ರಮಾಣ ಪತ್ರವನ್ನಿತ್ತು ಅತಿಥಿsಗಳು ಮತ್ತು ಕ್ರೀಡಾ ಸಂಘಟಕರು ಗೌರವಿಸಿದರು.

ಸ್ಪರ್ಧೆಯಲ್ಲಿ ಅಂಡರ್-12, ಅಂಡರ್-14 ಅಂಡರ್-16 ಬಾಲಕ ಮತ್ತು ಬಾಲಕಿಯರ ಸ್ಪರ್ಧೆಯಲ್ಲಿ ಸೈಂಟ್ ಎಲೋಸಿಸ್ ಹೈಸ್ಕೂಲ್ ನಾಲಾಸೋಫಾರ ಎಲ್ಲಾ ಸ್ಪರ್ಧೆಯಲ್ಲಿ (ಓವರ್ ಆಲ್) ಚಾಂಪಿಯನ್ ಶಿಪ್ ತನ್ನದಾಗಿಸಿತು. ಸೈಂಟ್ ಝೇವಿಯರ್ಸ್ ಅಂಧೇರಿ ಪ್ರಥಮ ಸ್ಥಾನಗಳಿಸಿದರು. ಸೈಂಟ್ ಝೇವಿಯರ್ಸ್ ಹೈಸ್ಕೂಲ್ ಗೋರೆಗಾಂವ್ ಹಾಗೂ ಸೈಂಟ್ ಜೋಸೆಫ್ ಹೈಸ್ಕೂಲ್ ಪನ್ವೇಲ್ ದ್ವಿತೀಯ ಸ್ಥಾನಗಳಿಸಿದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here