Wednesday 14th, May 2025
canara news

ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ ಅಮೃತಮಹೋತ್ಸವ ಪೂರ್ವಭಾವಿ ಸಭೆ

Published On : 23 Oct 2018   |  Reported By : Rons Bantwal


ಭಗವಂತನ ಕೃಪೆವಿನಃ ಏನೂ ಸಾಧ್ಯವಾಗದು : ಹರೀಶ್ ಜಿ.ಅವಿೂನ್ 

ಚಿತ್ರ / ವರದಿ: ರೋನ್ಸ್ ಬಂಟ್ವಾಳ್)

ಮುಂಬಯಿ, ಅ.23: ಮುಂಬಯಿ ಫೆÇೀರ್ಟ್ ಪ್ರದೇಶದ ಮೋದಿ ಸ್ಟ್ರೀಟ್‍ನಲ್ಲಿ ಕಳೆದ ಸುಮಾರು ಏಳುವರೆ ದಶಕಗಳಿಂದ ಸೇವಾ ನಿರತ ತುಳು ಕನ್ನಡಿಗರ ಸಂಸ್ಥಾಪನೆಯ ವೆಸ್ಟರ್ನ್ ಇಂಡಿಯಾ ಶ್ರೀ ಶನಿಮಹಾತ್ಮ ಸೇವಾ ಸಮಿತಿ (ರಿ.) ಅಮೃತಮಹೋತ್ಸವ ಸಂಭ್ರಮ ಪೂರ್ವಭಾವಿಸಭೆ ಇಂದಿಲ್ಲಿ ಭಾನುವಾರ ರಾತ್ರಿ ಅಂಧೇರಿ ಪೂರ್ವದ ಮಿಲಿಟರಿ ರಸ್ತೆಯಲ್ಲಿನ ಕೀಸ್ ಹೊಟೇಲ್ಸ್ ನೆಸ್ಟರ್ ಸಭಾಗೃಹದಲ್ಲಿ ನಡೆಸಲ್ಪಟ್ಟಿತು.

ಗೌರವಾಧ್ಯಕ್ಷ ಹರೀಶ್ ಜಿ.ಅವಿೂನ್ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಅಮೃತಮಹೋತ್ಸವ ಪೂರ್ವಭಾವೀ ಸಭೆಗೆ ಶ್ರೀ ಶನೀಶ್ವರ ದೇವಾಲಯ ನೆರೂಲ್ (ನವಿಮುಂಬಯಿ) ಇದರ ವ್ಯವಸ್ಥಾಪಕ ಟ್ರಸ್ಟಿ ಧರ್ಮದರ್ಶಿ ರಮೇಶ್ ಎಂ. ಪೂಜಾರಿ ದೀಪ ಪ್ರಜ್ವಲಿಸಿ ಚಾಲನೆಯನ್ನಿತ್ತರು. ಸಭೆಯಲ್ಲಿ ಮುಖ್ಯ ಅತಿಥಿüಯಾಗಿ ಭಾರತ್ ಬ್ಯಾಂಕ್‍ನ ನಿರ್ದೇಶಕ ಎಲ್.ವಿ ಅವಿೂನ್, ಗೌರವ ಅತಿಥಿüಗಳಾಗಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ, ನಿಕಟಪೂರ್ವ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉದ್ಯಮಿ ಗಿಲ್ಬರ್ಟ್ ಡಿಸೋಜಾ ಉಪಸ್ಥಿತರಿದ್ದರು.

ಶುದ್ಧತೆ ಮತ್ತು ಪಾವಿತ್ರ ್ಯತೆಯಿಂದ ಪರಿಪೂರ್ಣತಾ ಬದುಕು ಸಾಧ್ಯ. ಇವುಗಳಿಗೆಲ್ಲಾ ದೈವ,ದೇವರುಗಳ ಅನುಗ್ರಹವೂ ಅಷ್ಟೇ ಮುಖ್ಯವಾಗಿದೆ. ಭಗವಂತನ ಕೃಪೆವಿನಃ ಏನೂ ಸಾಧ್ಯವಾಗದು. ಎಲ್ಲವನ್ನೂ ಶ್ರೀದೇವರು ತನ್ನ ಸೃಷ್ಠಿಯಲ್ಲಿ ನಿರ್ಮಿಸಿರುತ್ತಾರೆ. ಒಬ್ಬೊಬ್ಬರಿಗೆ ಒಂದೊಂದು ಜವಾಬ್ದಾರಿ ವಹಿಸಿ ಅವರಿಂದ ಶ್ರೀದೇವರು ಸೇವೆ ಮಾಡಿಸಿ ಕೊಳ್ಳುವರು. ಅಂತೆಯೇ ಈ ಸೇವಾ ಸಮಿತಿಯಲ್ಲಿ ಕಳೆದ ಎರಡು ದಶಕಗಳಿಂದ ಗೌರವಾಧ್ಯಕ್ಷನಾಗಿ ಸೇವಾ ನಿರತನಾಗಿರುವೆ. ಶ್ರೀ ಶನೈಶ್ವರನ ಅನುಗ್ರಹದೊಂದಿಗೆ ಮಹಾನಗರದ ಜನತೆ ನನಗೆ ಇಷ್ಟೊಂದು ದೊಡ್ಡ ಜವಾಬ್ದಾರಿ ಪ್ರಾಪ್ತಿಸಿದ್ದಾರೆ. ಇದಕ್ಕೆ ಬದ್ಧನಾಗಿ ಶ್ರಮಿಸಿರುವೆ. ಸೇವಾ ಸಮಿತಿ ಅಮೃತಮಹೋತ್ಸವ ಮತ್ತು ಸ್ವಂತದ ದೇವಸ್ಥಾನ ನಿರ್ಮಿಸುವ ಸಂಕಲ್ಪ ಹೊಂದಿದ್ದು ತಮ್ಮೆಲ್ಲರ ಸಹಯೋಗದೊಂದಿಗೆ ನೆರವೇರಲಿ ಎಂಬ ಆಶಯ ಇಟ್ಟು ಕೊಂಡಿದ್ದೇನೆ ಎಂದು ಸೇವಾ ಸಮಿತಿ ಗೌರವಾಧ್ಯಕ್ಷ ಹರೀಶ್ ಜಿ.ಅವಿೂನ್ ತಿಳಿಸಿದರು.

ಅತಿಥಿüಗಳೂ ಸಂದರ್ಭೋಚಿತವಾಗಿ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ವಿ.ಕೆ ಪೂಜಾರಿ, ಶಿವರಾಮ ಕೋಟ್ಯಾನ್ ಘಾಟ್ಕೋಪರ್, ಜಯಂತಿ ವಿ.ಉಳ್ಳಾಲ್, ರವೀಂದ್ರ ಕೋಟ್ಯಾನ್, ಲಕ್ಷಿ ್ಮೀ ಎನ್.ಕೋಟ್ಯಾನ್ ಅಂಧೇರಿ, ಶ್ರೀನಿವಾಸ ಸಾಫಲ್ಯ, ಜೆ.ಎಂ ಕೋಟ್ಯಾನ್, ಚೇತನ್ ಶೆಟ್ಟಿ (ನಮ ಜವನೆರ್), ಬೋಳ ರವಿ ಪೂಜಾರಿ, ಟಿ. ಎಂ ಕೋಟ್ಯಾನ್, ನವೀನ್ ಪೂಜಾರಿ, ರವಿ ಸುವರ್ಣ ಡೊಂಬಿವಿಲಿ, ಪ್ರಕಾಶ್ ಮೂಡಬಿದ್ರೆ, ಚಿತ್ರಾಪು ಕೆ.ಎಂ ಕೋಟ್ಯಾನ್, ಶಂಕರ್ ಪೂಜಾರಿ, ಕೋರಿಯೋಗ್ರಾಫರ್ ಸನ್ನಿಧ್ ಪೂಜಾರಿ, ಎಸ್.ಎನ್ ಗಾಲ, ಚೇತನ್ ಶೆಟ್ಟಿ, ಪ್ರಭಾಕರ್ ಬೆಳುವಾಯಿ ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದು ತಮ್ಮ ಸಲಹೆಗಳನ್ನಿತ್ತು ಸೇವಾ ಸಮಿತಿಯ ಅಮೃತಮಹೋತ್ಸವ ಸಡಗರದ ಯಶಸ್ಸಿಗೆ ಶುಭಕೋರಿದರು.

ಕು| ಸಾಧ್ವಿ ಶೆಟ್ಟಿ ಅವರ ನೃತ್ಯದೊಂದಿಗೆ ಸಭೆ ಆದಿಗೊಂಡಿತು. ಭುವಾಜಿ ಜಗದೀಶ್ ನಿಟ್ಟೆ ಪ್ರಾರ್ಥನೆಯನ್ನಾಡಿದರು. ಸೇವಾ ಸಮಿತಿ ಅಧ್ಯಕ್ಷ ಜೆ.ಜೆ ಕೋಟ್ಯಾನ್ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿದರು. ಸೇವಾ ಸಮಿತಿ ಕಾರ್ಯದರ್ಶಿ ವಿಶ್ವನಾಥ್ ಭಂಡಾರಿ, ಕೋಶಾಧಿಕಾರಿ ಶರತ್ ಪೂಜಾರಿ, ಮತ್ತಿತರ ಪದಾಧಿಕಾರಿಗಳು, ಹರೀಶ್ ಶಾಂತಿ ಅಂಧೇರಿ ಅತಿಥಿüಗಳಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ವಸಂತ್ ಎನ್.ಸುವರ್ಣ ಅತಿಥಿüಗಳ ನ್ನು ಪರಿಚಯಿಸಿ ಸಭೆ ನಿರ್ವಾಹಿಸಿ ವಂದನಾರ್ಪಣೆಗೈದರು.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here