Wednesday 14th, May 2025
canara news

ಸ್ವಯಂವರ ಸಭಾಗೃಹದಲ್ಲಿ ಇಪ್ಪತ್ತನ್ನೇ ವಾರ್ಷಿಕ ಶ್ರೀ ಶಾರದಾ ಪೂಜಾ ಉತ್ಸವ ಆಚರಿಸಿದ ಜಿ.ಎಸ್.ಬಿ ಮಂಡಲ ಡೊಂಬಿವಲಿ

Published On : 27 Oct 2018   |  Reported By : Rons Bantwal


ಮುಂಬಯಿ, ಅ.27: ಜಿ.ಎಸ್.ಬಿ ಮಂಡಲ ಡೊಂಬಿವಲಿ ತನ್ನ 20ನೇ ವಾರ್ಷಿಕ ಶ್ರೀ ಶಾರದಾ ಪೂಜಾ ಮಹೋತ್ಸವವನ್ನು ಕಳೆದ ನವರಾತ್ರಿಗಳಲ್ಲಿ ಡೊಂಬಿವಲಿ ಪೂರ್ವದ ಸ್ವಯಂವರ ಸಭಾಗೃಹದಲ್ಲಿ ಅದ್ದೂರಿಯಾಗಿ ಸಂಭ್ರಮಿಸಿತು. ಸೋಮವಾರ (ಅ.15)ದಿಂದ ಗುರುವಾರ (ಅ.18) ವರೆಗೆ ವಾರ್ಷಿಕ ಶ್ರೀ ಶಾರದಾ ಪೂಜಾ ಮಹೋತ್ಸವ ವಿಜೃಂಭಣೆಯಿಂದ ನಡೆಸಿತು.

ಸೋಮವಾರ ಮೂಲಾ ನಕ್ಷತ್ರ ದಂದು ಬೆಳಗ್ಗೆ ಸಾಮೂಹಿಕ ಪ್ರಾರ್ಥನೆ ಆ ನಂತರ ಪ್ರಾಣ ಪ್ರತಿಷ್ಠೆ ನಡೆಸಿತು. ಪ್ರತಿದಿನ ಬೆಳಗ್ಗೆ ಚಂಡಿಕಾ ಹವನ, ಪಂಚದುರ್ಗಾ ಹವನ ಮತ್ತು ಲಕ್ಷ್ಮೀ ನಾರಾಯಣ ಹವನ, ಮಧ್ಯಹ್ನ ಪೂಜೆ, ಅನ್ನ ಸಂತರ್ಪಣೆ ಸಂಜೆ ವೇಳೆಗೆ ದುರ್ಗಾ ನಮಸ್ಕಾರ ರಾತ್ರಿ ಪೂಜೆ ಮತ್ತು ಭಜಕರಿಂದ ಭಜನೆ ನಡೆಯಿತು. ಮಂಗಳವಾರ ಮಹಿಳೆಯರಿಂದ ದೇವಿಗೆ ಸಹಸ್ರ ಕುಂಕುಮಾರ್ಕನೆ ನಡೆಯಿತು. ದುರ್ಗಷ್ಟಮಿ ದಿನ ದೇವಿಯ ವಿಶ್ವರೂಪ ದರ್ಶನ ಹಾಗೂ ದೀಪರಾಧನೆ ಸೇವೆ ನಡೆಯಿತು. ಗುರುವಾರ ದೇವಿಗೆ ಮಂಗಳೂರಿನ ಮಲ್ಲಿಗೆಜಲ್ಲಿ ಬಿಟ್ಟು (ಸೋನ್ ಫೂಲ್) ನಿಂದ ಅಲಂಕಾರ ಮಾಡಲಾಯಿತು. ದೇವಿಗೆ ಸರಸ್ವತಿ, ಲಕ್ಷಿ ್ಮದೇವಿ, ಲಲಿತಾ ದೇವಿ, ದುರ್ಗಾದೇವಿ ವಿವಿಧ ರೂಪದಲ್ಲಿ ಅಲಂಕಾರ ನಡೆಸಲಾಯಿತು.

ಗುರುವಾರ ಸಂಜೆ ಅಲಂಕೃತ ವಾಹನದಲ್ಲಿ ಪುರಮೆರವಣಿಗೆಯೊಂದಿಗೆ ಜಲಸ್ಥಂಬನೆ ಮಾಡಲಾಯಿತು. ಈ ಸಂದರ್ಭದಲ್ಲಿ ಡೊಂಬಿವಲಿ ಅಲ್ಲದೆ ಥಾಣೆ, ಮಂಬಯಿಯಿಂದ ಸಹಸ್ರಾರು ಭಕ್ತರು ಆಗಮಿಸಿ ಶ್ರೀದೇವಿ ಮಾತೆಯ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಪ್ರತಿವರ್ಷದಂತೆ ಈ ವರ್ಷವೂ ಮಂಗಳೂರುನ ಕಲಾವಿದ ದೇವಿಮೂರ್ತಿಯನ್ನು ಕೋಟೇಶ್ವರದ ಅವೆ ಮಣ್ಣಿನಿಂದ ತಯಾರಿಸಿ ಬರಮಾಡಿಕೊಳ್ಳಲಾಯಿತು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here