Wednesday 14th, May 2025
canara news

ಮುಂಬಯಿ ವಿದ್ಯಾನಗರಿಯಲ್ಲಿ ಎಸ್.ಕೆ ಹಳೆಯಂಗಡಿ ಅವರ `ಓ ಮನಸೇ ತಲ್ಲಣಿಸದಿರು' ಕೃತಿ ಬಿಡುಗಡೆ

Published On : 29 Oct 2018   |  Reported By : Rons Bantwal


ಎಸ್ಕೆ ಗುಜರಾತ್‍ನ ತುಳುಕನ್ನಡಿಗರ ರಾಯಭಾರಿ ಇದ್ದಂತೆ : ದಯಾನಂದ ಬೋಂಟ್ರಾ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಅ.29: ಗುಜರಾತ್‍ನಲ್ಲಿ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅಂದರೆ ತುಳುಕನ್ನಡಿಗರ ಭೀಷ್ಮಪಿತಾ ಮಹಾ ಪ್ರಸಿದ್ಧರು. ಯಾವುದೇ ತುಳು-ಕನ್ನಡ ಕಾರ್ಯಕ್ರಮಕ್ಕೆ ಅವರ ಸಂಚಲನೆಯೇ ಪ್ರಧಾನವಾದುದು. ಎಲ್ಲರಿಗೂ ಪ್ರೇರಕರಾದ ಅವರು ಓರ್ವ ಜಾತ್ಯಾತೀತ ಹಿರಿಯ ಚೇತನರಾಗಿದ್ದಾರೆ. ಆದುದರಿಂದ ಗುಜರಾತ್‍ನಲ್ಲಿ ಎಸ್ಕೆ ತುಳುಕನ್ನಡಿಗರ ರಾಯಭಾರಿ ಎಂದೇ ಜನಜನಿತರಾಗಿದ್ದಾರೆ. ಅವರ ಸಾಹಿತಿಕ ಕೆಲಸಗಳು ಇನ್ನೂ ಸ್ಪೂರ್ತಿದಾಯಕ ವಾಗಿ ಮುನ್ನಡೆಯಲಿ ಎಂದು ಬರೋಡದಲ್ಲಿನ ಹಿರಿಯ ಉದ್ಯಮಿ, ಗುಜರಾತ್ ಬಿಲ್ಲವ ಸಂಘದ ಗೌರವಾಧ್ಯಕ್ಷ ದಯಾನಂದ ಬೋಂಟ್ರಾ ನುಡಿದರು.

ಮುಂಬಯಿ ವಿವಿ ಕನ್ನಡ ವಿಭಾಗವು ನಾಡೋಜ ಪೆÇ್ರ| ಬರಗೂರು ರಾಮಚಂದ್ರಪ್ಪ ಪ್ರತಿಷ್ಠಾನ ಬೆಂಗಳೂರು ಇದರ ಸಹಯೋಗದೊಂದಿಗೆ ಇಂದಿಲ್ಲಿ ಶನಿವಾರ ಸಾಂತಾಕ್ರೂಜ್ ಪೂರ್ವದಲ್ಲಿನ ವಿದ್ಯಾನಗರಿಯ ಜೆ.ಪಿ ನಾಯಕ್ ಭವನದಲ್ಲಿ ಆಯೋಜಿಸಿದ್ದ ಅಭಿಜಿತ್ ಪ್ರಕಾಶನ್ ಮುಂಬಯಿ ಪ್ರಕಾಶಿತ, ಬರೋಡಾ ಅಲ್ಲಿನ ಹಿರಿಯ ಸಾಹಿತಿ ಎಸ್ಕೆ ಹಳೆಯಂಗಡಿ ಅವರ `ಓ ಮನಸೇ ತಲ್ಲಣಿಸದಿರು' ಕೃತಿ ಬಿಡುಗಡೆ ಗೊಳಿಸಿ ಬೋಂಟ್ರಾ ಮಾತನಾಡಿದರು.

ಪ್ರಸಿದ್ಧ ಸಿನಿಮಾ ನಿರ್ದೇಶಕ, ಪ್ರಸಿದ್ಧ ಸಾಹಿತಿ ನಾಡೋಜ ಪೆÇ್ರ| ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿ ಉದ್ಘಾಟಿಸಿದರು. ಅತಿಥಿü ಅಭ್ಯಾಗತರುಗಳಾಗಿ ಬೆಂಗಳೂರುನ ಪ್ರಾಧ್ಯಾಪಕ ಡಾ| ಮನೋನ್ಮನಿ ಉದಯ, ಕರ್ನಾಟಕ ಸಂಘ ಮುಂಬಯಿ ಕಾರ್ಯದರ್ಶಿ ಡಾ| ಭರತ್‍ಕುಮಾರ್ ಪೆÇಲಿಪು, ತುಮಕೂರು ಸಿದ್ದಗಂಗಾ ವಿದ್ಯಾಲಯದ ಪ್ರಾಚಾರ್ಯ ನಿರಂಜನ್ ಸಿ.ಎಸ್, ಕವಿ-ಲೇಖಕ ಗೋಪಾಲ ತ್ರಾಸಿ ಉಪಸ್ಥಿತರಿದ್ದರು.

ತಾಯ್ನಾಡಿನಿಂದ ಬಹಳ ದೂರದ ಗುಜರಾತ್‍ನಲ್ಲಿದ್ದರೂ ಮಾತೃ ಭಾಷೆ, ಸಾಹಿತ್ಯವನ್ನು ಒಪ್ಪಿ ಅಪ್ಪಿಕೊಂಡು ಮುನ್ನಡೆದಿದ್ದೇವೆ. ನಾವು ಗುಜರಾತ್‍ನಲ್ಲಿದ್ದರೂ ಮುಂಬಯಿ ಕನ್ನಡಿಗರೇ ನಮ್ಮ ಬಂಧುಗಳು ಮತ್ತು ಪೆÇ್ರೀತ್ಸಕರು. ಇವರನ್ನೇ ನಾವು ಹೊಂದಿದ್ದೇವೆ. ಡಾ| ಜಿ.ಎನ್ ಉಪಾಧ್ಯರ ಪ್ರೇರಣೆ ಮತ್ತು ಡಾ| ಅಲೆವೂರು ಅವರ ಸಹಯೋಗದಿ ಂದ ಕೃತಿಗಳು ಪ್ರಕಾಶಮಾನವಾಗಲು ಸಾಧ್ಯವಾಯಿತು ಎಂದು ಕೃತಿಕಾರ ಎಸ್ಕೆ ಹಳೆಯಂಗಡಿ ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ| ಗೀತಾ ವಸಂತ ಅವರು `ಕನ್ನಡ ಪ್ರಜ್ಞೆ ನಿನ್ನೆ ಇಂದು ನಾಳೆ' ವಿಚಾರವಾಗಿ ಉಪನ್ಯಾಸವನ್ನಿತ್ತು ಪ್ರಜ್ಞೆ ಎನ್ನುವುದು ನದಿಯಂತೆ ನಿರಂತರವಾದುದು. ಕನ್ನಡ ಪ್ರಜ್ಞೆ ಎಂದರೆ ಸಾಂಘಿಕವಾದ ಬುದ್ಧಿಪೂರ್ವತೆವುಳ್ಳದ್ದು. ಎಲ್ಲವನ್ನೂ ಸ್ವೀಕರಿಸುವ ಗುಣ ಕನ್ನಡಕ್ಕಿದೆ. ಧರ್ಮ ಮತ್ತು ಪ್ರಭುತ್ವದ ನೆಲೆಯಲ್ಲೂ ಕನ್ನಡ ಪ್ರಜ್ಞೆಯನ್ನು ನಾವು ಕಾಣ ಬಹುದು. ರೂಪದ ದೃಷ್ಠಿಯಿಂದ ಮಾತ್ರವಲ್ಲ ಗುಣದ ದೃಷ್ಠಿಯಿಂದಲೂ ಕನ್ನಡ ಬಹಳ ಎತ್ತರದ ಸ್ಥಾನವನ್ನು ಅಲಂಕರಿಸಿದೆ. ಸ್ಥಗಿತವಾದ ಚೌಕಟ್ಟನ್ನು ಮೀರಿದಾಗ ಅರಿವಿನ ಮರ್ಮವನ್ನು ತಲುಪಲು ಸಾಧ್ಯ. ಕನ್ನಡ ಪ್ರಜ್ಞೆಯನ್ನು ಕಟ್ಟುವ ವೈಭವೀಕರಿಸುವ ಕಾಲವೂ ಒಂದಿತ್ತು. ಕನ್ನಡ ಅಂದರೆ ಅದು ಭಾವನಾತ್ಮಕವಾದಂತಹ ಭಾಷಾ ಬೆಳವಣಿಗೆ ಮಾತ್ರವಲ್ಲ. ಸಾಮೂಹಿಕ ಮನೋಭಾವವನ್ನು ಬೆಳಿಸಿಕೊಂಡಾಗ ಸಾಮೂಹಿಕ ಪ್ರಜ್ಞೆ ಮೂಡುತ್ತದೆ ಎಂದರು.

ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ್ ಅಲೆವೂರು ಕೃತಿಪರಿಚಯಿಸಿ ಮನಸ್ಸಿನ ಕುರಿತು ಇಡೀ ಕೃತಿ ಮಾತನಾಡುತ್ತ ಧ್ವನಿ ಆಗಿ ಮೂಡಿದೆ. ನಾನು ಎನ್ನುವ ಅಹಂ ಕೆಟ್ಟವಾಗಿಸಿ ಮನಸ್ಸು ಅನ್ನುವುದೇ ಮಹತ್ವದು ಎಂದು ಸಾರಿದೆ. ಪರಮಾತ್ಮನಲ್ಲಿ ಮನಸ್ಸನ್ನು ಅರ್ಪಿಸುತ್ತಾ ಆತ್ಮವಿಶ್ವಾಸವಾಗಿ ಮನಸ್ಸನ್ನು ಬೆಳೆಸಬೇಕು ಎಂದು ಈಕೃತಿ ಸಾರುತ್ತಿದೆ ಎಂದರು.

ಪುಸ್ತಕಕ್ಕೆ ಎಂದಿಗೂ ಸಾವು ಎನ್ನುವುದೇ ಇಲ್ಲ. ಡಿಜಿಟಲ್ ಯುಗದಲ್ಲಿ ಎಷ್ಟೋ ಆಧುನಿಕತೆವುಳ್ಳ ಮಾಧ್ಯಮಗಳು ರಾರಾಜಿಸಿದರೂ ಅವು ಬರೇ ಆರಂಭಿಕ ಹಿನ್ನಡೆಯಷ್ಟೇ. ಇಂತಹ ತಂತ್ರಜ್ಞಾನಗಳು ಬರೇ ಬಳಕೆಗಷ್ಟೇ ಮೀಸಲು. ಆದರೇ ಕೃತಿ, ಪುಸ್ತಕಗಳು ಮೂಲಧಾರಿತ ಶಕ್ತಿಯುಳ್ಳವು. ಅದರಲ್ಲೂ ಕನ್ನಡದ ಒಟ್ಟು ಸಂಸ್ಕೃತಿಗೆ ದೀರ್ಘಕಾಲದ ಇತಿಹಾಸವಿದೆ. ಆದರೆ ತಂತ್ರಜ್ಞಾನ ಮಾಧ್ಯಮಗಳ ಬಳಕೆಯ ವಿವೇಕ ಅಗತ್ಯವಾಗಿದೆ.ಕನ್ನಡ ಎನ್ನುವುದು ಭಾಷೆಯೂ ಹೌದು ಬಹುಭಾಷಿಕವೂ ಮತ್ತು ಜೀವನವೂ ಹೌದು. ನಮ್ಮ ರಾಷ್ಟ್ರದಲ್ಲಿ ಸಾವಿರಾರು ಭಾಷೆಗಳಿದ್ದು ಅನೇಕವು ನಾಶವಾಗಿವೆ. ಆದರೆ ಕನ್ನಡ ಭಾಷೆಗೆ ಯಾವೊತ್ತೂ ಆ ಅಪಾಯವಿಲ್ಲ. ಶಿಕ್ಷಣ, ಆಡಳಿತದಲ್ಲಿ ಕನ್ನಡ ಇಲ್ಲದೇ ಹೋದಲ್ಲಿ ಕನ್ನಡಕ್ಕೆ ಆತಂಕವಿದೆ ಆದರೂ ಅಂತ್ಯವಂತೂ ಇಲ್ಲ. ಧರ್ಮ ಶಾಸ್ತ್ರವೂ ಆಗಬಾರದು ಶಸ್ತ್ರವೂ ಆಗಬಾರದು. ಅಪವ್ಯಾಖ್ಯಾನ ಮತ್ತು ವಿಭಜಿತ ಓದು ನಮ್ಮನ್ನು ಮತ್ತು ಕೃತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಧ್ಯಕ್ಷೀಯ ಭಾಷಣದಲ್ಲಿ ಪೆÇ್ರ| ರಾಮಚಂದ್ರಪ್ಪ ನುಡಿದರು.

ಯಾವುದೇ ಕ್ಷೇತ್ರದಲ್ಲೂ ಪ್ರಬುದ್ಧತೆಯೊಂದಿಗೆ ಮುನ್ನಡೆದಾಗ ಸಾಧನೆ ಸಿದ್ಧಿಸುವುದು. ನಾನು ಬಾಲ್ಯದಲ್ಲೇ ನಾಟಕ ಕ್ಷೇತ್ರ ಅರಿಸಿದೆ. ಆ ಮೂಲಕ ರಂಗಭೂಮಿಯನ್ನು ಮನ್ನಿಸಿ ಸುಮಾರು 367 ನಾಟಕಗಳಲ್ಲಿ ಅಭಿನಯಿಸಿದೆ. ಬರೆಯುವುದು ನನ್ನ ಕೆಲಸವಲ್ಲ ಅಂದಮೇಲೆ ಸಾಹಿತ್ಯ, ಬರವಣಿಗೆಯತ್ತ ಆಸಕ್ತಿ ತೋರಿಲ್ಲ. ಯಾವುದನ್ನೂ ಗುರುತಿಸುವ ಕಣ್ಣುಬೇಕು ಮತ್ತು ಆಯುವ ಮನಸ್ಸು ಅಗತ್ಯ. ಯಾವೊತ್ತೂ ರಂಗಭೂಮಿಯ ಪರದೆಹಿಂದೆ ಕಲಾವಿದನ ಮನಸ್ಸು ಅರಳುತ್ತದೆ ಮುಂದುಗಡೆ ವ್ಯಕ್ತಿತ್ವ ಮರೆಯುತ್ತದೆ. ಅಂದು ಕಲೆಗಾಗಿ ಬದುಕು ಇತ್ತು ಆದರೆ ಇದು ಇಂದು ಬದುಕಿಗಾಗಿ ಕಲೆಯಾಗಿ ಮಾರ್ಪಟ್ಟಿದೆ. ಆ ಮಧ್ಯೆಯೂ ನನ್ನಂತಹ ಕಲಾವಿದನನ್ನು ಗುರುತಿಸಿದ್ದು ರಂಗಭೂಮಿ ಧನ್ಯವಾಯಿತು. ಈ ಗೌರವ ಡಾ| ಜಿ.ಎನ್ ಉಪಾಧ್ಯ ಅವರಿಗೆ ಅರ್ಪಿಸುತ್ತೇನೆ ಎಂದು ಮೋಹನ್ ಮಾರ್ನಾಡ್ ನುಡಿದರು.

ವಿಶ್ವ ವಿದ್ಯಾಲಯಗಳು ಸರ್ವಧರ್ಮದ ದೇವಾಲಯಗಳಿದ್ದಂತೆ. ಇಂತಹ ಪಾವಿತ್ರ್ಯತಾ ಪೀಠದಲ್ಲಿ ನನ್ನ ಗೌರವಾರ್ಪಣೆ ಇದು ನನ್ನ ಸೌಭಾಗ್ಯವೇ ಸರಿ. ಇದು ಯಕ್ಷಕಲಾ ಮಾತೆಗೆ ಮತ್ತು ಮಹಾನಗರದ ಸಮಗರ ಕಲಾಪೆÇೀಷಕರು ಮತ್ತು ಕಲಾಭಿಮಾನಿಗಳಿಗೆ ಸಂದ ಗೌರವ. ಬಾಲಯದಲ್ಲಿ ಅಂತಃಕರಣ ಪ್ರೇರಣೆಯಿಂದ ಕಲಿತ ಕಲಾರಾಧನೆಯಿಂದ ಇಂದು ಸಾವಿರಾರು ಆಸಕ್ತ ಕಲಾವಿದರಿಗೆ ಯಕ್ಷಗಾನ ಕಲಿಸಿ ಪೆÇೀಷಿಸಲು ಸಾಧ್ಯವಾಗಿದೆ. ಕಲೆಯನ್ನು ಆರಾಧಿಸಿದವರಿಗೆ ಕಲೆಯೇ ಫಲ ನೀಡುತ್ತದೆ. ಆದುದರಿಂದ ನಾನು ಯಕ್ಷಗುರು ಎಂದೆಣಿಸುವ ಕರೆಸಿಕೊಳ್ಳಲು ಕಾರಣಕರ್ತನಾದೆ. ಜೊತೆಗೆ ಈ ಗೌರವವೇ ಗೌರವ ಸಾಕ್ಷಿ ಎಂದು ಅಜೆಕಾರು ಬಾಲಕೃಷ್ಣ ತಿಳಿಸಿದರು.

ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಡಾ| ಜಿ.ಎನ್ ಉಪಾಧ್ಯ ಪ್ರಸ್ತಾವನೆಗೈದು ಇದೊಂದು ಬಣ್ಣಬಣ್ಣದ ವರ್ಣಮಯ ಕಾರ್ಯಕ್ರಮ. ಹಚ್ಚಿಕೊಂಡ ಬಣ್ಣವಲ್ಲ ಹಾಕಿಕೊಂಡ ಬಣ್ಣ ಎಂದರು.

ಪೆÇ್ರ| ರಾಮಚಂದ್ರಪ್ಪ ಅವರು ದಯಾನಂದ ಬೋಂಟ್ರಾ ಮತ್ತು ಎಸ್ಕೆ ಹಳೆಯಂಗಡಿ ಅವರಿಗೆ ಶಾಲು ಹೊದಿಸಿ ಗ್ರಂಥಗೌರವ ನೀಡಿ ಅಭಿವಂದಿಸಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್.ಶೆಟ್ಟಿ ಸುಖಾಗಮನ ಬಯಸಿ ಅತಿಥಿüಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಸಿದರು. ದಿನಕರ್ ಚಂದನ್ ಧನ್ಯವದಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here