Wednesday 14th, May 2025
canara news

`ಬಾಯೋ' ಆರ್‍ಎಸ್‍ಬಿ ಕೊಂಕಣಿಯ ಪ್ರಪ್ರಥಮ ಚಲನಚಿತ್ರಕ್ಕೆ ಮುಹೂರ್ತ

Published On : 31 Oct 2018   |  Reported By : Ronida Mumbai


ಸಂಸ್ಕಾರ-ಸಂಸ್ಕøತಿ ಮೌಲ್ಯಗಳಗಳ ಪ್ರವರ್ಧಮಾನಕ್ಕೆ ಸಿನೆಮಾಗಳು ಪೂರಕವಾಗಬೇಕು-ಗೌಡಪಾದಾಚಾರ್ಯಕೈವಲ್ಯಶ್ರೀ
(ಚಿತ್ರ / ವರದಿ : ರೊನಿಡಾ ಮುಂಬಯಿ)


ಮುಂಬಯಿ (ಶಿರ್ವ), ಅ.29: ಪ್ರತೀಯೊಬ್ಬರಲ್ಲೂ ವಿಶೇಷವಾದಕಲಾತ್ಮಕ ಶಕ್ತಿ ಇದೆ. ಒಳ್ಳೆಯ ಅವಕಾಶಗಳು ಸಿಕ್ಕಿದಾಗ ಬೆಳಕಿಗೆ ಬರುತ್ತವೆ. ರಾಜಾಪುರ ಸಾರಸ್ವತ ಸಮಾಜಇತ್ತೀಚಿನ ದಿನಗಳಲ್ಲಿ ಸಮಾಜದಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಶೃದ್ಧಾಭಕ್ತಿ ನಿಷ್ಠೆಯಿಂದ ಕೆಲಸ ಮಾಡುತ್ತಿದೆ. ಚಲನಚಿತ್ರ ಮಾಧ್ಯಮ ದಿಂದ ಸಮಾಜಕ್ಕೆ ಒಳ್ಳೆಯ ಸಂದೇಶದೊಂದಿಗೆ ಪರಿವರ್ತನೆತರುವಂತಾಗಬೇಕು. ಚಲನಚಿತ್ರಗಳು ಸಂಸ್ಕಾರ, ಸಂಸ್ಕøತಿ, ಮೌಲ್ಯಗಳ ಪ್ರವರ್ಧಮಾನಕ್ಕೆ ಪೂರವಾಗಬೇಕು ಎಂದು ಶ್ರೀಸಂಸ್ಥಾನ ಗೌಡಪಾದಾಚಾರ್ಯಕೈವಲ್ಯ ಮಠಾಧೀಶ ಶ್ರೀಮದ್ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ ನುಡಿದರು.

ಶ್ರೀಗಳು ಕಳೆದ ರವಿವಾರ ಮಣಿಪಾಲ ಆರ್‍ಎಸ್‍ಬಿ ಸಬಾಭವನದಲ್ಲಿ ತೀರ್ಥಹಳ್ಳಿ ರೆಂಜದಕಟ್ಟೆ ನಾಗೇಂದ್ರ ಕಾಮತ್ ಮುಂದಾಳತ್ವದಲ್ಲಿ ಕಾಮತ್‍ಕ್ರಿಯೆಶನ್ಸ್ ಬೆಂಗಳೂರು ಮೂಲಕ ಆರ್‍ಎಸ್‍ಬಿ ಕೊಂಕಣಿಯಲ್ಲಿ ನಿರ್ಮಾಣ ಗೊಳ್ಳಲಿರುವ ಪ್ರಪ್ರಥಮ ಚಲನಚಿತ್ರ `ಬಾಯೋ' ಚಿತ್ರೀಕರಣ ಕಾರ್ಯಕ್ರಮ ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಕ್ಯಾಮರಾ ಚಾಲನೆಯೊಂದಿಗೆ ಮುಹೂರ್ತ ನೆರವೇರಿಸಿ ಆಶೀರ್ವಚನ ನೀಡಿದರು.

ಮಂಗಳೂರು ಮಹಾನಗರ ಪಾಲಿಕೆ ಜಂಟಿ ಆಯುಕ್ತ ಹಾಗೂ ಶ್ರೀಕೈವಲ್ಯಮಠದ ವಿಶ್ವಸ್ಥರಾದ ಎಂ. ಗೋಕುಲ್‍ದಾಸ್ ನಾಯಕ್ ಸಮಾರಂಭದ ಅಧ್ಯಕ್ಷತೆ ವಹಿಸಿ ಕ್ಲಾಪ್ ಮಾಡಿದರು.

ಮಾನವಜನ್ಮಶ್ರೇಷ್ಠವಾಗಿದ್ದು, ನಿತ್ಯೋಪಾಸನೆ, ಅರಾಧನೆ, ಶ್ರೀಗುರುದೇವ ಸ್ಮರಣೆಯೊಂದಿಗೆ ಮಾಡುವ ಎಲ್ಲಾ ಸತ್ಕಾರ್ಯಗಳಿಗೆ ಭಗವಂತನ ಪೂರ್ಣಾನುಗ್ರಹವಿದ್ದು,ಸ್ವಾರ್ಥರಹಿತ ಸೇವೆಯೇ ಶ್ರೇಷ್ಠ ಕಾರ್ಯಎಂದರು. ಈ ಚಲನಚಿತ್ರದ ಸ್ಫೂರ್ತಿಯಿಂದ ಭವಿಷ್ಯದಲ್ಲಿ ಹಲವಾರು ಚಿತ್ರಗಳು, ನೂರಾರು ಉದೋನ್ಮುಖ ಕಲಾವಿದರು ಮೂಡಿಬರಲಿ ಎಂದು ಶಿವಾನಂದ ಸ್ವಾಮೀ ಹರಸಿದರು.

ಮುಖ್ಯ ಅತಿಥಿüಗಳಾಗಿ ಭಾಗವಹಿಸಿದ ಮಂಗಳೂರು ವಿಶ್ವಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಮಾತನಾಡಿ, ಕೊಂಕಣಿಯಲ್ಲಿಆರ್‍ಎಸ್‍ಬಿ, ಜಿಎಸ್‍ಬಿ ಎಂಬ ಭೇದವಿಲ್ಲ. ಸಾರಸ್ವತರಾದ ನಾವೆಲ್ಲಒಂದೇ ಮೂಲದಿಂದ ಬಂದವರು. ನಮ್ಮ ಬೆಳವಣಿಗೆ ಜೊತೆಗೆ ಸಮಸ್ತರಅಭಿವೃದ್ಧಿಯೇ ನಮ್ಮಕಾಯಕಎಂದರು.

ಮಂಗಳೂರು ಕ್ಯಾಂಪೆÇ್ಕೀ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಮಾತನಾಡಿ, ಆರ್‍ಎಸ್‍ಬಿ ಸಮಾಜಅತ್ಯಂತ ವೇಗದಿಂದ ಪ್ರಗತಿಯತ್ತ ಸಾಗುತ್ತಿದ್ದು, ಭವಿಷ್ಯದಲ್ಲಿ `ಡಿಜಿಟಲ್ ಸಾರಸ್ವತ್' ಆಗಿ ಮೂಡಿ ಬರುವಂತಾಗಬೇಕು ಎಂದರು.
`ಸಾರಸ್ವತರತ್ನ' ಗೌರವ ಪ್ರಶಸ್ತಿ ಪ್ರದಾನ:
ಈ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಡಾ| ಜನಾರ್ದನ ಪ್ರಭು ಪೆರ್ಣಂಕಿಲ, ಉಡುಪಿ (ವೈದ್ಯಕೀಯ ಹಾಗೂ ಸಮಾಜಸೇವೆ). ಬಿ.ಪುಂಡಲೀಕ ಮರಾಠೆ ಶಿರ್ವ ಬಂಟಕಲ್ಲು (ಮಾಧ್ಯಮ/ಸಾಮಾಜಿಕ/ ಶಿಕ್ಷಣ/ಸಾಹಿತ್ಯ), ನಟರಾಜ್‍ಕಾಮತ್ (ಉದ್ಯಮ ಹಾಗೂ ಶಿಕ್ಷಣ), ಸುಬ್ರಹ್ಮಣ್ಯ ಕುಲೇದು ಉಡುಪಿ (ಸ್ಮರಣಶಕ್ತಿ, ಬಹುಭಾಷಾ ಸಂವಹನ ಕಲಾ ರಾಷ್ಟ್ರೀಯ ತರಬೇತುದಾರ (ಬೆಂಗಳೂರು), ರಾಜೇಶ್‍ಕುಂಭಕೋಡು ಸುಳ್ಯ ಪುತ್ತೂರು (ಚೆನ್ನೈ) ( ಅಂತಾರಾಷ್ಟೀಯ ಖ್ಯಾತಿಯ ಕರ್ನಾಟಿಕ್ ವಯೋಲಿನ್ ಸಂಗೀತ ಗುರುಗಳು) ರಾಘವೇಂದ್ರ ನಾಯಕ್ ಶಿರ್ವ ಎಲ್ಲೊಂಟು (ಪ್ರಗತಿಪರ ಕೃಷಿಕ/ರಾಜ್ಯ ಮಟ್ಟದ ಕೃಷಿ ಕ್ಷೇತ್ರದ ತರಬೇತುದಾರ) ಶ್ರೀಮತಿ ಶಶಿಕಲಾ ಎಂ. ಪ್ರಭು ಚೇರ್ಕಾಡಿ ಕರ್ಜೆ (ಯಕ್ಷಕಲಾವಿದೆ), ದಿವಾಕರ ನಾಯಕ್ ಸುಳ್ಯ ಪುತ್ತೂರು (ಶಿಕ್ಷಣ ಕ್ಷೇತ್ರ/ರಾಜ್ಯಪ್ರಶಸ್ತಿ ವಿಜೇತರು), ಕೆ.ಎಲ್ ವಾಮನ ನಾಯಕ್ ತಾಳೆಮಕ್ಕಿ ಕೊಪ್ಪ (ಖ್ಯಾತ ನಾಟಿವೈದ್ಯರು) ಇವರಿಗೆ ಕಾಮತ್ ಕ್ರಿಯೇಶನ್ಸ್ ವತಿಯಿಂದ ಕೊಡ ಮಾಡಿದ `ಸಾರಸ್ವತರತ್ನ' ಪ್ರಶಸ್ತಿ ಗೌರವಯನ್ನು ಫಲಮಂತ್ರಾಕ್ಷತೆಯೊಂದಿಗೆ ಶ್ರೀಗಳು ಪ್ರದಾನಿಸಿ ಗೌರವಿಸಿದರು.

ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಎಳ್ಳಾರೆ ಸದಾಶಿವ ಪ್ರಭು ಶುಭ ಹಾರೈಸಿದರು. ಬಿ.ಅನಂತರಾಮ ಭಟ್ ಸ್ವಾಗತಿಸಿದರು. ಅರುಣ್‍ಎನ್.ಕಾಮತ್, ಕಿರಣ್‍ಎನ್.ಕಾಮತ್ ಸಹಕರಿಸಿದ್ದು, ಪುಂಡಲೀಕ ಮರಾಠೆ, ಉಷಾ ನಾಯಕ್ ಜೋಡುರಸ್ತೆ ಕಾರ್ಯಕ್ರಮ ನಿರೂಪಿಸಿದರು. ಸುಮತಿ ಪ್ರಭು ಧನ್ಯವಾದವಿತ್ತರು.

ಆದಿಯಲ್ಲಿ ಶ್ರೀಗಳವರನ್ನು ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತಗೈದು ಬರಮಾಡಿ ಕೊಳ್ಳಲಾಯಿತು. ನಾಗರಾಜ್‍ಕಾಮತ್, ಸುಮತಿ ಎನ್.ಕಾಮತ್ ದಂಪತಿಗಳು ಶ್ರೀಗಳವರ ಪಾದಪೂಜೆ ನೆರವೇರಿಸಿದರು.ಬೆಂಗಳೂರಿನ ಪ್ರಸಿದ್ಧ ಸಂವಹನ ತರಬೇತುದಾರ "ಲೀಡರ್‍ಆಫ್ ಲೀಡರ್ಸ್" ಪ್ರಶಸ್ತಿ ವಿಜೇತ ಐದು ಭಾಷೆಗಳಲ್ಲಿ ನಿರರ್ಗಳವಾಗಿ ತರಬೇತಿ ಸಾಮಥ್ರ್ಯ ಹೊಂದಿರುವ ರಾಷ್ಟ್ರೀಯ ತರಬೇತುದಾರ ಸುಬ್ರಹ್ಮಣ್ಯ ಕುಲೇದು "ಮೆದುಳಿನ ಅದ್ಭುತ ಶಕ್ತಿ" ವಿಶೇಷ ಉಪನ್ಯಾಸ ಪ್ರಾತಿಕ್ಷಿಕೆ ನಡೆಸಿದರು.

 

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here