Wednesday 14th, May 2025
canara news

ನ.04:ಬ್ರಹ್ಮಶ್ರೀ ಬೈದರ್ಕಳ ಗರಡಿ ತೋನ್ಸೆ ಮುಂಬಯಿ ಸಮಿತಿ ಮಹಾಸಭೆ

Published On : 01 Nov 2018   |  Reported By : Rons Bantwal


ಮುಂಬಯಿ, ಅ.30: ಬ್ರಹ್ಮಶ್ರೀ ಬೈದರ್ಕಳ ಪಂಚ ಧೂಮವತಿ ಗರಡಿ ತೋನ್ಸೆ (ಉಡುಪಿ) ಮುಂಬಯಿ ಸಮಿತಿಯ ಹತ್ತನೇ ಮಹಾಸಭೆಯು ನ.04ರ ಆದಿತ್ಯವಾರ ಬೆಳಿಗ್ಗೆ 10.30 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಸಮಾಲೋಚನಾ ಸಭಾಗೃಹದಲ್ಲಿ ಸಮಿತಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರಗಲಿದೆ.

ಕಳೆದ ಹತ್ತು ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕವಾಗಿ ಉತ್ತಮ ಸೇವೆ ಸಲ್ಲಿಸಿದ ಮುಂಬಯಿ ಸಮಿತಿಯು ಅಂದಿನ ಸಚಿವ ಪ್ರಮೋದ್ ಮಧ್ವರಾಜ್, ಸಾಮಾಜಿಕ ಧುರೀಣ ಜನಾರ್ದನ್ ತೋನ್ಸೆ ಅವರನ್ನು ಮುಂ¨ಯಿಗೆ ಆಹ್ವಾನಿಸಿ ಸನ್ಮಾನಿಸಿದೆ. ಉಡುಪಿ ಜಿಲ್ಲೆಯ ಅನೇಕ ರಾಜಾಕೀಯ ಮತ್ತು ಸಾಮಾಜಿಕ ನಾಯಕರಲ್ಲಿ ಜಿಲಾಭಿವೃದ್ಧಿ ಬಗ್ಗೆ ಚರ್ಚಿಸಿ ಸಲಹೆಗಳನ್ನಿತ್ತಿದೆ. ಗರೋಡಿಯ ಅಭಿವೃದ್ಧಿ, ದೈವದೇವರ ಬೆಲೆಬಾಳುವ, ಪಾವಿತ್ರ ್ಯತಾ ವಸ್ತುಗಳನ್ನಿಡುವ ಭದ್ರಕೋಣೆ ನಿರ್ಮಿಸಿದ್ದೇವೆ. ಅದಲ್ಲದೆ ಶೈಕ್ಷಣಿಕ ಪುರಸ್ಕಾರ, ಆರೋಗ್ಯ ಶಿಬಿರ ಇತ್ಯಾದಿಗಳನ್ನು ನಡೆಸಿ ಸಮಾಜಮುಖಿ ಸೇವೆಯಲ್ಲಿ ತೊಡಗಿಸಿದ ಹೆಗ್ಗಳಿಗೆ ಈ ಸಮಿತಿಗಿದೆ ಎಂದು ನಿತ್ಯಾನಂದ ಕೋಟ್ಯಾನ್ ತಿಳಿಸಿದ್ದಾರೆ.

ತೋನ್ಸೆ ಪರಿವಾರದ ಸರ್ವ ಸದಸ್ಯರು ಹಾಜರಿದ್ದು, ತಮ್ಮ ಸಲಹೆ, ಸೂಚನೆÀಗಳನ್ನಿತ್ತು ಮಹಾಸಭೆ ಯಶಸ್ವಿಯಾಗಿ ನಡೆಸಿ ಕೊಡಬೇಕೆಂದು ಬ್ರಹ್ಮ ಬೈದರ್ಕಳ ಗರಡಿ ತೋನ್ಸೆ ಗರೋಡಿ ಮುಂಬಯಿ ಸಮಿತಿಯ ಕಾರ್ಯದರ್ಶಿ ತೋನ್ಸೆ ಸಂಜೀವ ಪೂಜಾರಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ದೂರವಾಣಿ 28594730 ಸಂಖ್ಯೆಗೆ ಸಂಪರ್ಕಿಸಲು ಕೋರಲಾಗಿದೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here