Thursday 15th, May 2025
canara news

ಶ್ರೀ ರಜಕ ಸಂಘ ಮುಂಬಯಿಯ ವತಿಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆ

Published On : 04 Nov 2018   |  Reported By : Rons Bantwal


ಧಾರ್ಮಿಕ ಕಾರ್ಯಕ್ರಮಗಳಿಂದ ಹಿಂದೂ ಧರ್ಮವನ್ನು ಉಳಿಸಿದಂತಾಗುತ್ತದೆ : ಪೇಜಾವರ ಸ್ವಾಮೀಜಿ

ಮುಂಬಯಿ,: ಶ್ರೀ ರಜಕ ಸಂಘ ಮುಂಬಯಿಯ ವತಿಯಿಂದ ವರ್ಷಂಪ್ರತಿ ಜರುಗುವಂತೆ ಈ ಬಾರಿಯೂ ಅಕ್ಟೋಬರ್ 28 ರ ರವಿವಾರ ಸಂಜೆ ಸಾಂತಾಕ್ರೂಜ್ ಪೂರ್ವದ ಪ್ರಭಾತ್ ಕಾಲೊನಿಯಲ್ಲಿರುವ ಶ್ರೀ ಪೇಜಾವರ ಮಠದ ಸಭಾಗೃಹದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಜರುಗಿಸಲಾಯಿತು. ಗಂಟೆ 4-30ಕ್ಕೆ ಸರಿಯಾಗಿ ಶ್ರೀ ರಜಕ ಸಂಘ ಮುಂಬಯಿಯ ಅಧ್ಯಕ್ಷರಾದ ಶ್ರೀ ಡಿ ಸಿ ಸಾಲಿಯಾನರು, ಉಪಾಧ್ಯಕ್ಷ ಸಿ ಎ ವಿಜಯ ಕುಂದರ್, ರಜಕ ಸಂಘದ ಎಲ್ಲಾ ಪ್ರಾದೇಶಿಕ ವಲಯದ ಕೋ. ಆರ್ಡಿನೇಟರ್ ಶ್ರೀ ಸತೀಶ್ ಸಾಲಿಯಾನ್, ಕಾರ್ಯದರ್ಶಿ ಸುಮಿತ್ರ ಪಲಿಮಾರ್, ಜೊತೆ ಕಾರ್ಯದರ್ಶಿ ಕಿರಣ್ ಕುಂದರ್, ಕೋಶಾಧಿಕಾರಿಗಳಾದ ಸುಭಾಷ್ ಸಾಲಿಯಾನ್, ಜಯ ಕುಂದರ್, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಭಾಸ್ಕರ್ ಕುಂದರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಸುಮಿತಾ ಸಾಲಿಯಾನ್, ಪ್ರಕಾಶ್ ಗುಜರನ್, ಪ್ರಭಾಕರ್ ಸಾಲಿಯಾನ್, ಡಿ ಆರ್ ಸಾಲಿಯಾನ್, ಸಂಜೀವ ಸಾಲಿಯಾನ್, ಶಶಿಧರ್ ಸಾಲಿಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರವೀಣ ಕುಂದರ್, ಯವರಜಕದ ಅಧ್ಯಕ್ಷ ಮನೀಷ್ ಕುಂದರ್, ಪ್ರಾದೇಶಿಕ ವಲಯ ಡೊಂಬಿವಲಿಯ ಉಪಾಧ್ಯಕ್ಷ ಬಾಲಕೃಷ್ಣ ಸಾಲಿಯಾನ್, ನವಿಮುಂಬಯಿಯ ಗೌರವಾಧ್ಯಕ್ಷ ನಾರಾಯಣ್ ಕುಂದರ್, ಅಧ್ಯಕ್ಷ ಜಯ ಮಡಿವಾಳ, ವಸಾಯಿಯ ಅಧ್ಯಕ್ಷ ಪಾಂಡು ಮಡಿವಾಳ, ಸೆಂಟ್ರಲ್ ನ ಅಧ್ಯಕ್ಷ ಸುರೇಶ್ ಮಡಿವಾಳ್, ವೆಸ್ಟರ್ನ್ ನ ಉಪಾಧ್ಯಕ್ಷ ದಯಾನಂದ್ ಸಾಲಿಯಾನ್ ಹಾಗೂ ಮಾಜಿ ಅಧ್ಯಕ್ಷರು ಮತ್ತು ಹಿರಿಯ ಸದಸ್ಯರಾದ ಶ್ರೀ ಪಿ ಎಮ್ ಸಾಲಿಯಾನ್, ರಮೇಶ್ ಪಲಿಮಾರ್, ಶ್ರೀಮತಿ ಸುಮಿತ್ರ ಗುಜರನ್, ರಾಮಚಂದ್ರ ಬಿ ಕುಂದರ್ ಮತ್ತು ಭುಜಂಗ ಗುಜರನ್ ಇವರೆಲ್ಲರ ಉಪಸ್ಥಿತಿಯಲ್ಲಿ, ವಸಾಯಿ ಮಹಿಳಾ ವಿಭಾಗದ ಚಂದ್ರಾವತಿ ಕುಂದರ್, ಶಕುಂತಳ ಸಾಲಿಯಾನ್, ಕವಿತ ಕುಂದರ್, ಆಶಾ ಮಡಿವಾಳ ಇವರ ಪ್ರಾರ್ಥನೆಯೊಂದಿಗೆ ದೀಪ ಪ್ರಜ್ವಲನ ಮಾಡಿದ ನಂತರ ರಜಕ ಸಂಘದ ಎಲ್ಲಾ ಪ್ರಾದೇಶಿಕ ವಲಯದ ಮಹಿಳೆಯರಿಂದ ನಿರಂತರವಾಗಿ ಗಂಟೆ 6-30ರವರೆಗೆ ಭಜನಾ ಕಾರ್ಯಕ್ರಮವು ನಡೆಯಿತು. ತದನಂತರ ಶ್ರೀ ಪವನ ಭಟ್ ಇವರ ನೇತೃತ್ವದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ಜರುಗಿಸಲಾಯಿತು.

ಈ ಸಂದರ್ಭದಲ್ಲಿ ಅಲ್ಲಿಗೆ ಆಗಮಿಸಿದ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಪೂಜೆಯಲ್ಲಿ ಪಾಲ್ಗೊಂಡಿದ್ದ ರಜಕ ಬಾಂಧವರೆಲ್ಲರಿಗೂ ಫಲ ಮತ್ತು ಮಂತ್ರಾಕ್ಷತೆಯನ್ನು ನೀಡಿ ಆಶೀರ್ವಚನ ಮಾಡಿ ಸಂಘ ಸಂಸ್ಥೆಗಳು ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುವುದರಿಂದ ಹಿಂದೂಧರ್ಮವನ್ನು ಉಳಿಸಿದಂತಾಗುತ್ತದೆ ಅಲ್ಲದೆ ರಜಕ ಸಮಾಜದವರು ದೇವರಿಗೆ ತುಂಬಾ ಹತ್ತಿರದವರು, ದೇವಸ್ಥಾನಗಳಲ್ಲಿ ಯಾವ ಕಾರ್ಯಕ್ರಮಗಳು ನಡೆಯ ಬೇಕಾದರೂ ಈ ರಜಕ ಸಮಾಜದವರು ಮೊದಲು ಇರಬೇಕು ಎಂದರು. ಈ ಸಾಮೂಹಿಕ ಪೂಜಾಕಾರ್ಯಕ್ರಮದಲ್ಲಿ ರಜಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸ್ವಾಮೀಜಿಯವರಿಂದ ಆಶೀರ್ವಾದವನ್ನು ಪಡೆದುಕೊಂಡರು. ಸಾಮೂಹಿಕ ಪೂಜೆಯಲ್ಲಿ ಸದಸ್ಯರು ನೂರಕ್ಕೂ ಹೆಚ್ಚು ಸಂಖ್ಯೆಯಲ್ಲಿ ಪೂಜೆಯನ್ನು ನೀಡಿ ಪ್ರಸಾದವನ್ನು ಸ್ವೀಕರಿಸಿದ ನಂತರ ಎಲ್ಲರೂ ಮಹಾಪ್ರಸಾದವನ್ನು ಸ್ವೀಕರಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here