Thursday 15th, May 2025
canara news

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಹತ್ತನೇ ಮಹಾಸಭೆ

Published On : 05 Nov 2018   |  Reported By : Rons Bantwal


ಪೂರ್ವಜರಿಂದ ರೂಪಿತ ಗರೋಡಿಗಳು ನಂಬಿಕಾಸ್ಥವು : ನಿತ್ಯಾನಂದ ಕೋಟ್ಯಾನ್
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ನ.05: ಉಡುಪಿ ಜಿಲ್ಲೆಯ ಕಲ್ಯಾಣ್ಫುರದಲ್ಲಿ ಧಾರ್ಮಿಕ ಕೇಂದ್ರವಾಗಿ ಸೇವಾ ನಿರತ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಇದರ ಹತ್ತನೇ ಮಹಾಸಭೆಯು ಇಂದಿಲ್ಲಿ ಆದಿತ್ಯವಾರ ಪೂರ್ವಾಹ್ನ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದ ಸಮಾಲೋಚನಾ ಸಭಾಗೃಹದಲ್ಲಿ ಜರಗಿದ್ದು, ಗರೊಡಿ ಸೇವಾ ಟ್ರಸ್ಟ್‍ನ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆಯನ್ನಿತ್ತು ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿದರು.

ನಮ್ಮ ಪೂರ್ವಜರಿಂದ ರೂಪಿತ ಗರೋಡಿಗಳು ನಂಬಿಕಾಸ್ಥ ಪಾವಿತ್ರ ್ಯತೆಯ ಪೂಜಾ ಕೇಂದ್ರಗಳೇ ಸರಿ. ಇಂತಹ ಧಾರ್ಮಿಕ ಕೇಂದ್ರಗಳನ್ನು ಮುನ್ನಡೆಸುವ ಸಂಸ್ಥೆಗಳಾಗಲೀ, ಸೇವಾಕರ್ತರಾಗಲೀ, ಪಾರುಪತ್ಯಗಾರರು ನಂಬಿಕಸ್ಥ ಉಳ್ಳವರಾಗಬೇಕು. ನಾವು ಪೂಜಿಸಿವ ದೈವದೇವರುಗಳೇ ನಮ್ಮ ನಿಸಾರ್ಥಸೇವೆ, ವಿಶ್ವಾಸವನ್ನು ಕಂಡುಕೊಂಡು ನಮಗೆ ಸೂಕ್ತವಾದ ಫಲವನ್ನೇ ಪ್ರಾಪ್ತಿಸುವರು. ಆದ್ದರಿಂದ ನಮ್ಮೊಳಗೆ ಸೇವಾ ಪೈಪೆÇೀಟಿ, ಪರವಿರೋಧಗಳು, ದೋಷಾರೋಪಗಳು ಇಲ್ಲದೆ ಪ್ರಾಮಾಣಿಕವಾಗಿ ಸೇವಾನಿಷ್ಠರಾಗಿ ದುಡಿಸಿಕೊಂಡಾಗ ನಮ್ಮ ಉದ್ದೇಶಗಳು ತನ್ನೀಂತಾನೇ ಈಡೇರುವುದು ಎಂದು ನಿತ್ಯಾನಂದ ಕೋಟ್ಯಾನ್ ಮನವಿ ಮಾಡಿದರು.

ಸಭೆಯಲ್ಲಿ ಅಭ್ಯಾಗತರಾಗಿ ಬಿಲ್ಲವ ಒಕ್ಕೂಟ ತೋನ್ಸೆ ಇದರ ಗೌರವ ಕಾರ್ಯದರ್ಶಿ ಸರ್ವೋತ್ತಮ ಬಿ.ಪೂಜಾರಿ ಹಾಗೂ ಟ್ರಸ್ಟ್‍ನ ಮಾಜಿ ಗೌರವಾಧ್ಯಕ್ಷ ಶಂಕರ ಸಿ.ಸುವರ್ಣ, ಉಪಾಧ್ಯಕ್ಷರುಗಳಾದ ವಿಶ್ವನಾಥ್ ತೋನ್ಸೆ ಮತ್ತು ಸಿ.ಕೆ ಪೂಜಾರಿ, ಕಾರ್ಯಕಾರಿ ಸಮಿತಿ ಸದÀಸ್ಯರುಗಳಾದ ಅಶೋಕ್ ಎಂ.ಕೋಟ್ಯಾನ್ ಥಾಣೆ (ಮಾಜಿ ಅಧ್ಯಕ್ಷ), ರೂಪ್‍ಕುಮಾರ್ ಕಲ್ಯಾಣ್ಪುರ್, ಸದಾನಂದಬಿ.ಪೂಜಾರಿ, ವಿಜಯ ಪಾಲನ್ ಮತ್ತಿತರರು ಹಾಜರಿದ್ದರು.

ನಮ್ಮ ಸಂಸ್ಥೆಯ ಈ ಹಿಂದೆ ಇದ್ದ ಹೆಸರನ್ನು ಬದಲಾಯಿಸಿಕೊಂಡು ಸರಕಾರಿ ದಾಖಲೆಯಲ್ಲೂ ಅಧಿಕೃತವಾಗಿ ನೋಂದಾಯಿಸಿ ಕೊಳ್ಳಲಾಗಿದ್ದು, ಇನ್ನುಮುಂದೆ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ (ರಿ.) ಆಗಿ ಸೇವೆಯಲ್ಲಿ ತೊಡಗಿಸಿ ಕೊಳ್ಳಲಾಗುವುದು. ನೂತನ ನಾಮಾನುಸಾರ ಮುನ್ನಡೆಯುವ ಸೇವಾ ಟ್ರಸ್ಟ್‍ಗೆ ಸಲಹೆಗಾರರಾಗಿ ಶಂಕರ ಸುವರ್ಣ, ವಿ.ಸಿ ಪೂಜಾರಿ (ಆರ್‍ಬಿಐ), ಲಜಾರ್ ಮುತ್ತಪ್ಪ ಕೋಟ್ಯಾನ್, ಗೋಪಾಲ್ ಪಾಲನ್ ಕಲ್ಯಾಣ್ಪುರ್ ಮತ್ತು ಲಕ್ಷ್ಮೀ ಡಿ.ಅಂಚನ್ ಇವರನ್ನು ನೇಮಿಸಲಾಯಿತು.
ಹೆಚ್ಚುವರಿ ಸದಸ್ಯರನ್ನು ಸೇರಿಸಿಕೊಳ್ಳುವ ನಿಮಿತ್ತ ಸದಸ್ಯತ್ವ ಅಭಿಯಾನಕ್ಕಾಗಿ ಸದಸ್ಯತ್ವ ನಮೂನೆಪತ್ರ ವಿತರಿಸಲಾಯಿತು ಎಂದೂ ನಿತ್ಯಾನಂದ ಕೋಟ್ಯಾನ್ ತಿಳಿಸಿದರು.

ಬ್ರಹ್ಮ ಬೈದರ್ಕಳ ಮತ್ತು ಕೋಟಿ-ಚೆನ್ನಯರಿಗೆ ಪ್ರಾರ್ಥನೆಗೈದು ಮಹಾಸಭೆ ಆರಂಭಿಸಲ್ಪಟ್ಟಿತು. ಇತ್ತೀಚಿಗೆ ನಿಧನ ಹೊಂದಿದ ಬಿಲ್ಲವ ಧುರೀಣರಾದ ಸೂರು ಸಿ.ಕರ್ಕೇರ ಹಾಗೂ ತೋನ್ಸೆ ಗರಡಿಯ ಗುರ್ಕಾರ ಸುಂದರ ಪೂಜಾರಿ ಅವರಿಗೆ ಆದಿಯಲ್ಲಿ ಮೌನಪ್ರಾರ್ಥನೆಯೊಂದಿಗೆ ಶ್ರದ್ಧಾಂಜಲಿ ಕೋರಲಾಯಿತು. ಗೌರವ ಕೋಶಾಧಿಕಾರಿ ರವಿರಾಜ್ ಕಲ್ಯಾಣ್ಫುರ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ತೋನ್ಸೆ ಸಂಜೀವ ಪೂಜಾರಿ ಸ್ವಾಗತಿಸಿ ಗತ ವಾರ್ಷಿಕ ಮಹಾಸಭೆ ವರದಿ ಮಂಡಿಸಿ ಸಭಾ ಕಲಾಪ ನಡೆಸಿ ಕೃತಜ್ಞತೆ ಸಮರ್ಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here