Thursday 17th, January 2019
canara news

`ಸೌರಭ ರತ್ನ' ರಾಜ್ಯ ಪ್ರಶಸ್ತಿಗೆ ಭಾಜನರಾದ ಮುಂಬಯಿ ಕನ್ನಡದ ಅಧ್ಯಕ್ಷ ಗುರುರಾಜ ಎಸ್.ನಾಯಕ್

Published On : 07 Nov 2018   |  Reported By : Rons Bantwal


ಮುಂಬಯಿ, ನ.07: ಮಹಾನಗರದ ಮಾಟುಂಗ ಪೂರ್ವದ ಮುಂಬಯಿ ಕನ್ನಡ ಸಂಘ ಇದರ ಅಧ್ಯಕ್ಷ ಗುರರಾಜ ಎಸ್.ನಾಯಕ್ ಅವರಿಗೆ ಮಂಗಳೂರು ಅಲ್ಲಿನ ಕಥಾ ಬಿಂದು ಸಾಂಸ್ಕøತಿಕ ವೇದಿಕೆ ಕೊಡುವ `ಸೌರಭ ರತ್ನ' ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಶ್ರೀ ನಾಯಕರು ಮುಂಬಯಿಯ ಜನಪ್ರಿಯ ಸಮಾಜ ಸೇವಕರಾಗಿ ಜನಮನ್ನಣೆ ಪಡೆದಿರುತ್ತಾರೆ. ಮುಂಬಯಿ ಕನ್ನಡ ಸಂಘದಲ್ಲಿ ಕಳೆದ 43 ವರ್ಷಗಳಿಂದ ವಿವಿಧ ಪದಾಧಿಕಾರಿಯಾಗಿ ಈಗ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಗಣನೀಯ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಸ್ತುತ್ತ ಮುಂಬಯಿ ಕನ್ನಡ ಸಂಘದಲ್ಲಿ ಮಾತ್ರವಲ್ಲದೆ ಇನ್ನೂ ಅನೇಕ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಡೊಂಬಿವಲಿ ಅಲ್ಲಿನ ಶಿವರಂಜನಿ ಸಂಗೀತ ಸಭಾದ ಅಧ್ಯಕ್ಷರಾಗಿ, ಡೊಂಬಿವಲಿಯ ಮಲ್ಲಾರಿ ಕೃಪಾ ಕೊಪರೇಟಿವ್ ಹೌಸಿಂಗ್ ಸೊಸಾಯ್ಟಿಯ ಅಸೋಶಿಯೇಶನ್‍ನ ಗೌರವ ಕೋಶಾಧಿಕಾರಿ ಆಗಿ, ಮೈಸೂರು ಸಂಗೀತ ವಿದ್ಯಾಲಯ ಡೊಂಬಿವಲಿ ಇದರ ಸಲಹಾ ಸಮಿತಿ ಸದಸ್ಯರಾಗಿ ಶ್ರೀ ಸುಕ್ರಕೇಂದ್ರ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಪ್ರಭಾದೇವಿ ಮುಂಬಯಿ ಇದರ ನಿದೇರ್ಶಕರಾಗಿ ಸೇವೆ ನಿರತರಾಗಿದ್ದಾ ರೆ. ಇವರಿಗೆ ಈಗಗಲೇ ಬೆಂಗಳೂರಿನ ಜ್ಞಾನ ಮಂದಾರ ಅಕಾಡೆಮಿಯಿಂದ `ಸುವರ್ಣ ಕನ್ನಡಿಗ ರಜ್ಯಪ್ರಶಸ್ತಿ' ಕಾಸರಗೋಡು ಅಲ್ಲಿನ ಕರಾವಳಿ ಸಾಂಸ್ಕøತಿಕ ಪ್ರತಿಷ್ಟಾನದಿಂದ `ಸುವರ್ಣ ಕನ್ನಡಿಗ ಪ್ರಶಸ್ತಿ' ಮೈಸೂರಿನ ಗ್ರಾಮಾಂತರ ಬುದ್ದಿ ಜೀವಿಗಳ ಬಳಗದಿಂದ ಸುವರ್ಣ ಕರ್ನಾಟಕ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ಕನ್ನಡ ಸಂಘ ಸಂಸ್ಥೆಗಳಿಂದ, ಜಿಎಸ್.ಬಿ ಸಮಾಜದ ಸಂಸ್ಥೆಗಳಿಂದ ಸನ್ಮಾನಗಳೂ ಪ್ರಾಪ್ತಿಯಾಗಿರುತ್ತದೆ.

`ಸೌರಭ ರತ್ನ' ಪ್ರಶಸ್ತಿ ಸಮಾರಂಭವು ಇದೇ ನ.15ರ ಗುರುವಾರ ಸಂಜೆ 5.00 ಗಂಟೆಗೆ ಮಂಗಳಾದೇವಿ ದೇವಸ್ಥಾನದ ಕಲಾಮಂದಿರ ಮಂಗಳೂರು ಇಲ್ಲಿ ಉಪಸ್ಥಿತ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಗುವುದು ಎಂದು ಕಥಾ ಬಿಂದು ಸಾಂಸ್ಕøತಿಕ ವೇದಿಕೆ ವಕ್ತಾರರು ತಿಳಿಸಿದ್ದಾರೆ.

 
More News

ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ
ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ
ವಿಳಂಬಗೊಂಡ ರಾಜ್ಯ ಎನ್ಆರ್ಐ ಸಮಿತಿಯ ಉಪಾಧ್ಯಕ್ಷರ ನೇಮಕ; ಸಮಗ್ರ ಅನಿವಾಸಿ ಸಮುದಾಯಕ್ಕಾದ ಮಹಾ ಅನ್ಯಾಯ
ವಿಳಂಬಗೊಂಡ ರಾಜ್ಯ ಎನ್ಆರ್ಐ ಸಮಿತಿಯ ಉಪಾಧ್ಯಕ್ಷರ ನೇಮಕ; ಸಮಗ್ರ ಅನಿವಾಸಿ ಸಮುದಾಯಕ್ಕಾದ ಮಹಾ ಅನ್ಯಾಯ
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಂಧೇರಿ ಸ್ಥಳೀಯ ಕಚೇರಿಯ ಪಂಚದಶಿ ಉತ್ಸ್ಸವ
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಂಧೇರಿ ಸ್ಥಳೀಯ ಕಚೇರಿಯ ಪಂಚದಶಿ ಉತ್ಸ್ಸವ

Comment Here