Sunday 18th, August 2019
canara news

ಪ್ರವಸೋದ್ಯಮ ವ್ಯವಹಾರದಿಂದ ಭವ್ಯ ಬದುಕು ರೂಪಿಸಲು ಸಾಧ್ಯ

Published On : 07 Nov 2018   |  Reported By : Rons Bantwal


ಐಐಟಿಸಿ ಸಂಸ್ಥೆಯಿಂದ `ಟ್ರಾವೆಲ್ ಎಂಡ್ ಟೂರಿಸಂ' ಮಾಹಿತಿ ಕಾರ್ಯಗಾರ
(ಚಿತ್ರ / ವರದಿ : ರೊನ್ಸ್ ಬಂಟ್ವಾಳ್)

ಮುಂಬಯಿ, ನ.07: ಆಧುನಿಕ ಯುಗದ ಜನತೆ ದೇಶಕ್ಕೆ ಪ್ರವಾಸ ಮಾಡಲು ಬಾರೀ ಕಾಳಜಿವುಳ್ಳವರಾಗಿದ್ದು ಪ್ರವಾಸ ಪ್ರಿಯರಾಗಿದ್ದಾರೆ. ಪ್ರವಾಸೋದ್ಯಮವು ಕೇವಲ ವೈಯಕ್ತಿಕ ಪ್ರಯಾಣಕ್ಕೆ ಮಾತ್ರವಲ್ಲ, ಶೈಕ್ಷಣಿಕ, ಸ್ಥಳೀಯ ಹಣಕಾಸು ಗಳಿಕೆಗೂ ಮಹತ್ವದ ಉದ್ಯಮವಾಗಿದೆ. ಸದ್ಯ ಪ್ರವಾಸೋದ್ಯಮ ಕ್ಷೇತ್ರ ಆದಾಯದ ಅದ್ಭುತ ಮೂಲ ಎಂದೇ ಪರಿಗಣಿಸ ಬಹುದು. ಪ್ರವಾಸೋದ್ಯಮ ವ್ಯವಹಾರದಿಂದ ಭವ್ಯ ಬದುಕು ರೂಪಿಸಲು ಸಾಧ್ಯ. ಏಕೆಂದರೆ ಪ್ರವಾಸಿಗರ ವಿನಃ ವ್ಯಪಾರ ವಹಿವಾಟುಗಳೇ ಇಲ್ಲ. ಇಂತಹ ಅಭಿರುಚಿವುಳ್ಳ ಪ್ರವಾಸೋದ್ಯಮದ ಬಗ್ಗೆ ಸೂಕ್ತ ಅರಿವು ಸಾಧಕರ ಸಲಹೆಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅನುಭವಕ್ಕೆ ಇಂತಹ `ಟ್ರಾವೆಲ್ ಎಂಡ್ ಟೂರಿಸಂ' ಮಾಹಿತಿ ಕಾರ್ಯಗಾರಗಳು ಅಗತ್ಯವಾಗಿದೆ ಎಂದು ಇಟೆಲಿ ರಾಷ್ಟ್ರದ ಉಪ ಕೊನ್ಸುಲ್ ಜನರಲ್ ಜಿಯೊವನ್ನಿ ಸಂಟಿನಿ ತಿಳಿಸಿದರು.

ಇಂದಿಲ್ಲಿ ಸೋಮವಾರ ಪೂರ್ವಾಹ್ನ ಉಪನಗರ ಅಂಧೇರಿ ಪೂರ್ವದ ಸಹಾರ್‍ನಲ್ಲಿನ ಹೊಟೇಲ್ ಲೀಲಾ ಕೆಂಪೆನ್‍ಸ್ಕಿಯ ಬಾಲ್‍ರೂಮ್ ಸಭಾಗೃಹದಲ್ಲಿ ವೃತ್ತಿಪರ ಶಿಕ್ಷಣ ಕ್ಷೇತ್ರದ ತುಳು-ಕನ್ನಡಿಗರ ರಾಷ್ಟ್ರದ ಪ್ರಸಿದ್ಧ ಸಂಸ್ಥೆ ಇಂಟರ್‍ನೇಶನಲ್ ಇನ್‍ಸ್ಟಿಟ್ಯೂಟ್ ಟ್ರೈನಿಂಗ್ ಸೆಂಟರ್ (ಐಐಟಿಸಿ) ಸಂಸ್ಥೆಯು ತನ್ನ ಟ್ರಾವೆಲ್ ಎಂಡ್ ಟೂರಿಸಂ ಹಾಗೂ ಐಎಟಿಎ (ಐಯಾಟ) ವಿದ್ಯಾಥಿರ್üಗಳಿಗಾಗಿ ಇಟೆಲಿಯನ್ ಟೂರಿಸ್ಟ್ ಬೋರ್ಡ್ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರಯಾಣ ಮತ್ತು ಪ್ರವಾಸೋದ್ಯಮ (ಟ್ರಾವೆಲ್ ಎಂಡ್ ಟೂರಿಸಂ) ವಿಚಾರಿತ ಕಾರ್ಯಗಾರ ನಡೆಸಿ ಜಿಯೊವನ್ನಿ ವಿದ್ಯಾಥಿರ್üಗಳನ್ನು ಉದ್ದೇಶಿಸಿ ಮಾತನಾಡಿದರು.

ವೃತ್ತಿಪರ ಶಿಕ್ಷಣ ರಂಗದಲ್ಲಿ ಸುಮಾರು ನಿರಂತರ ಐದು ದಶಕದ ಅನುಭವಿ, ಗ್ಲೋಬಲ್ ಕರಿಯರ್ಸ್ ಐಐಟಿಸಿ ಸಂಸ್ಥೆಯ ಸಂಸ್ಥಾಪಕ ಎಸ್.ಕೆ ಉರ್ವಾಲ್ ಅವರ ದೂರದೃಷ್ಠಿತ್ವದ ಸಂಸ್ಥೆ ಐಐಟಿಸಿ ಆಗಿದೆ. ಅವರ ಧ್ಯೇಯೋದ್ದೇಶದಂತೆ ಸಂಸ್ಥೆ ವಾರ್ಷಿಕವಾಗಿ ನೂರಾರು ಮಕ್ಕಳಿಗೆ ಪ್ರವಾಸೋದ್ಯಮದ ಶಿಕ್ಷಣ ನೀಡುತ್ತಿದೆ. ಯುವ ಜನತೆಗೆ ಉದ್ಯೋಗ ಪ್ರವಾಸೋದ್ಯಮವು ಇಷ್ಟವಾದ ಕ್ಷೇತ್ರವೇ ಸರಿ. ಇದು ನಿಖರ ಮತ್ತು ಸ್ಪಷ್ಟವಾದ ಪ್ರಯೋಜನಗಳನ್ನು ಒಳಗೊಂಡಿದೆ. ಹೆಚ್ಚುವರಿ ಗಳಿಕೆಯೊಂದಿಗೆ ವ್ಯವಹಾರವನ್ನು ಆದಾಯಕ್ಕೆ ತಂದು ಕೊಡುವುದರಲ್ಲೂ ಪ್ರವಾಸೋದ್ಯಮ ಸುಲಭದ ಮತ್ತು ಅನುಕೂಲಕರ ಉದ್ಯಮವಾಗಿದೆ. ಇವೆಲ್ಲಕ್ಕೂ ಪ್ರವಾಸೋದ್ಯಮದ ಮೂಲ ಜ್ಞಾನದ ತಿಳುವಳಿಕೆ ಅಗತ್ಯವಾಗಿದೆ. ಈ ಬಗ್ಗೆ ನಮ್ಮ ವಿದ್ಯಾಥಿರ್üಗಳು ಆಳವಾಗಿ ಅಧ್ಯಾಯನ ಮಾಡುವಂತೆ ಇಂತಹ ಕಾರ್ಯಗಾರವನ್ನು ಆಯೋಜಿಸಲಾಗುತ್ತಿದೆ

ಇಟೆಲಿಯನ್ ರಾಜ್ಯಇಎನ್‍ಐಟಿ ಪ್ರತಿನಿಧಿ ಸಲ್ವತೊರ್ ಲನ್ನೀಲ್ಲೋ, ಕು| ಬೆಲಾ ಶ್ಹಾ, ಕೊಸ್ಟಾ ಅಲ್ಲಿನ ಸೇಲ್ಸ್ ಪ್ರಬಂಧಕಿ ಕಾರ್ಪ್ ಎಂಡ್ ಟ್ರೇಡ್ ಕು| ವಸುಧರಾ ಗುಪ್ತ, ಎಂಎಸ್‍ಸಿ ಕ್ರೋಸಿಯರ್‍ನ ಪ್ರಧಾನ ವ್ಯವಸ್ಥಾಪಕ ಮಾ| ಕುನಾಲ್ ಸಂಪತ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿದ್ದು ಭಾರತೀಯ, ಇಟೆಲಿಯನ್ ಮತ್ತು ಜಗತ್ತಿನ ವಿವಿಧ ರಾಷ್ಟ್ರಗಳ ಪ್ರವಾಸೋದ್ಯಮ ಮತ್ತು ಉದ್ಯೋಗವಕಾಶಗಳು ಬಗ್ಗೆ ಮಾಹಿತಿಯನ್ನಿತ್ತರು.

ಕಾಂiÀರ್iಕ್ರಮದಲ್ಲಿ ಐಐಟಿಸಿ ನಿರ್ದೇಶಕರಾದ ಸಂದೇಶ್ ಉರ್ವಾಲ್, ಪಾಲ್ಗುಣಿ ಮಿರಾಣಿ, ರವಿ ಸುವರ್ಣ ಘಾಟ್ಕೋಪರ್ ಮತ್ತು ಮುರಳೀಧರ್ ಭಟ್ ಡೊಂಬಿವಿಲಿ ಮುಂತಾದವರು ಉಪಸ್ಥಿತರಿದ್ದು, ಐಐಟಿಸಿ ನಿರ್ದೇಶಕ ವಿಕ್ರಾಂತ್ ಉರ್ವಾಲ್ ಸ್ವಾಗತಿಸಿ ಸಂಪನ್ಮೂಲ ವ್ಯಕ್ತಿಗಳಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ಸಲ್ವತೊರ್ ಲನ್ನಿಯಿಲ್ಲೋ ಪ್ರಸ್ತಾವನೆಗೈದರು. ಫ್ಯಾಶನ್ ರಂಗದ ಹಿರಿಯ ಪ್ರಾಚಾರ್ಯ ಪೆÇ್ರ| ಸೈರಸ್ ಗೋಂಡ ಕಾರ್ಯಕ್ರಮ ನಿರೂಪಿದರು. ಪಾಲ್ಗುಣಿ ಮಿರಾಣಿ ಕೃತಜ್ಞತೆ ಸಮರ್ಪಿಸಿದರು.
More News

ನಾಡೋಜ ಹಂಪನಾ ವ್ಯಕ್ತಿ, ಕೃತಿ: ಅನುಸಂಧಾನ ವಿಚಾರ ಸಂಕಿರಣ
ನಾಡೋಜ ಹಂಪನಾ ವ್ಯಕ್ತಿ, ಕೃತಿ: ಅನುಸಂಧಾನ ವಿಚಾರ ಸಂಕಿರಣ
ಭಾರತ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
ಭಾರತ್ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ರಾಷ್ಟ್ರದ 73ನೇ ಸ್ವಾತಂತ್ರ್ಯೋತ್ಸವ ಸಂಭ್ರಮ
ತುಳು ಸಂಘ (ರಿ.) ಬರೋಡ ಚಿಣ್ಣರು ಸಂಭ್ರಮಿಸಿದ ಸ್ವಾತಂತ್ರ್ಯೋತ್ಸವ
ತುಳು ಸಂಘ (ರಿ.) ಬರೋಡ ಚಿಣ್ಣರು ಸಂಭ್ರಮಿಸಿದ ಸ್ವಾತಂತ್ರ್ಯೋತ್ಸವ

Comment Here