Wednesday 14th, May 2025
canara news

ದೀಪಾವಳಿ ಹೊಸತನದ ಬೆಳಕು ಮೂಡಿಸಲಿ : ರಾಕೇಶ್ ಕುಮಾರ್ ಕಮ್ಮಾಜೆ ಅಭಿಮತ

Published On : 10 Nov 2018   |  Reported By : Gurudatt Somayaji


"ದೀಪಾವಳಿಯು ಸದಾ ಹೊಸ ಚಿಂತನೆ, ಕ್ರಿಯಾಶೀಲತೆ ಮತ್ತು ಪರಸ್ಪರ ಸಂಬಂಧಗಳ ಗಟ್ಟಿಗೊಳ್ಳುವಿಕೆಗೆ ವೇದಿಕೆಯಾಗಬೇಕು. ದೀಪಾವಳಿ ಬಂತೆಂದರೆ ಬೆಳಕಿನ ಬಾಗಿಲು ತೆರೆದಂತೆ. ಬೆಳಕು ಕತ್ತಲೆಯನ್ನು ಹೊಡೆದೋಡಿಸುವಂತೆ ದೀಪಾವಳಿ ಹಬ್ಬದ ಮಧುರ ಕ್ಷಣಗಳು ಎಲ್ಲರ ಬದುಕಿನಲ್ಲಿ ದುಃಖಗಳನ್ನು ನಿವಾರಿಸಿ ಸಂತಸ ತರಲಿ . ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಮಾಡುವ ಹೊಸ ಹುರುಪು ಮೂಡಲಿ, ಜ್ಞಾನದ ಬೆಳಕಿನ ಉತ್ಸವವಾಗಿ ಈ ಹಬ್ಬದ ಆಚರಣೆಯಾಗಲಿ " ಎಂದು ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್ ಕುಮಾರ್ ಕಮ್ಮಾಜೆ ತಿಳಿಸಿದರು.

ಅವರು ಕುಂಜಾರುಗಿರಿ ಪಾಜಕದ ಆನಂದತೀರ್ಥ ವಿದ್ಯಾಲಯದಲ್ಲಿ ದೀಪಾವಳಿ ಪ್ರಯುಕ್ತ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮ "ಹಾಸ್ಯ ಹಬ್ಬ " ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಾಂಶುಪಾಲೆ ಗೀತಾ ಎಸ್. ಕೋಟ್ಯಾನ್ , ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಹಾಸ್ಟೆಲ್ ಮೇಲ್ವಿಚಾರಕರು ಭಾಗವಹಿಸಿದ್ದರು. ಆಡಳಿತಾಧಿಕಾರಿ ಹಾಗೂ ಕಾರ್ಯಕ್ರಮ ಸಂಯೋಜಕ ಗುರುದತ್ ಸೋಮಯಾಜಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು.

ತದನಂತರ ಆನಂದತೀರ್ಥ ಹಾಸ್ಟೆಲ್ ವಿದ್ಯಾರ್ಥಿಗಳಿಂದ ಕಾರ್ಯಕ್ರಮ ವೈವಿಧ್ಯ ಜರುಗಿತು .




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here