Wednesday 14th, May 2025
canara news

ಗೋಕುಲವಾಣಿ ದೀಪಾವಳಿ ವಿಶೇಷಾಂಕ ಕಥಾ ಸ್ಪರ್ಧೆಯ ಫಲಿತಾಂಶ

Published On : 11 Nov 2018   |  Reported By : Rons Bantwal


ವಿಜಯ ಹೂಗಾರ ಬೆಂಗಳೂರು ಅವರ `ನದಿಗಿಲ್ಲ ದಡದ ಹಂಗು' ಪ್ರಥಮ


ಮುಂಬಯಿ, ನ.11: ಬಿ.ಎಸ್.ಕೆ.ಬಿ ಎಸೋಸಿಯೇಶನ್ ಸಯಾನ್ ಮುಂಬಯಿ ಇದರ ಮುಖಪತ್ರಿಕೆ ಗೋಕುಲ ಮಾಸಿಕವು ಏರ್ಪಡಿಸಿದ್ದ 2118ನೇ ಸಾಲಿನ ದೀಪಾವಳಿ ವಿಶೇಷಾಂಕ ಕಥಾ ಸ್ಪರ್ಧೆಯ ಫಲಿತಾಂಶ ಪ್ರಕಟಿಸಿದೆ.

ಆಯ್ಕೆಯಂತೆ ಪ್ರಥಮ ಬಹುಮಾನವು ವಿಜಯ ಹೂಗಾರ ಬೆಂಗಳೂರು ಅವರ `ನದಿಗಿಲ್ಲ ದಡದ ಹಂಗು' ಇದಕ್ಕೆ ರೂಪಾಯಿ11,000/- ಪ್ರಾಪ್ತಿಯಾಗಿದೆ. ಅಂತೆಯೇ ದ್ವಿತೀಯ ಬಹುಮಾನವು ಶ್ರೀ ವಿದ್ಯಾ ಗುರುಪ್ರಸಾದ್ ಕಾರ್ಕಳ ಅವರ `ಆಳುಪರ ಕೊನೆಯ ಅರಸ' ಇದಕ್ಕೆ ರೂ.5,000/- ಮತ್ತು ತೃತೀಯ ಬಹುಮಾನವು ಡಾ| ಕೊಳ್ಚಪ್ಪೆ ಗೋವಿಂದ ಭಟ್ ಮುಂಬಯಿ ಅವರ `ಗುರುತು' ರೂ. 3,000/- ಪ್ರಾಪ್ತಿಯಾಗಿದೆ. ಮೆಚ್ಚುಗೆ ಪಡೆದ ಕಥೆಗಳು (ತಲಾ ರೂ. 1,000/-) ಬಿ.ಎಸ್ ಶ್ರೀಧರ್ ಬೆಂಗಳೂರು ಅವರ `ಗಣಪತಿ ಬಪ್ಪಾ' ಮತ್ತು ರವಿಶಂಕರ್ ಜಿ.ಕೆ ಪಾಣಾಜೆ ಪುತ್ತೂರು ಅವರ `ಕಳೆದುಕೊಂಡವರು' ಇವರಿಗೆ ಸಂದಿದೆ.

ವಿಜೇತರಿಗೆ ಪ್ರಮಾಣಪತ್ರ ಹಾಗೂ ಬಹುಮಾನದ ಮೊತ್ತವನ್ನು (ಚೆಕ್ ಮುಖೇನ) ತ್ವರಿತ ಅಂಚೆ (ಸ್ಪೀಡ್ ಪೆÇೀಸ್ಟ್) ಮೂಲಕ ಕಳುಹಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಸರ್ವರಿಗೂ ಗೋಕುಲವಾಣಿ ಸಂಪಾದಕೀಯ ಮಂಡಳಿ ಧನ್ಯವದಿಸುತ್ತಾ ವಿಜೇತರಿಗೆ ಅಭಿನಂದನೆಗಳನ್ನೂ ಹಾಗೂ ತೀರ್ಪುಗಾರರಾದ ಡಾ| ಮಮತಾ ರಾವ್ ಅವರಿಗೆ ಕೃತಜ್ಞತೆ ಸಲ್ಲಿಸಿದೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here