Wednesday 14th, May 2025
canara news

ಲೂಯಿಸಾ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ನಿಧನ

Published On : 15 Nov 2018   |  Reported By : Rons Bantwal


ಮುಂಬಯಿ, ನ.15: ದೇಶವಿದೇಶಗಳಲ್ಲಿ ಗೌರವ ಪುರಸ್ಕೃತ ಕೊಂಕಣಿ ನಾಟಕಕಾರ, ನಿರ್ದೇಶಕ, ಹಾಸ್ಯನಟ, ಕಾಮಿಡಿಕಿಂಗ್ ಪ್ರಸಿದ್ಧ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ ಅವರ ಧರ್ಮಪತ್ನಿ ಕೊಡುಗೈದಾನಿ, ಕಲಾ ಪೆÇೀಷಕಿ ಲೂಯಿಸಾ ಫೆರ್ನಾಂಡಿಸ್ ಕಾಸ್ಸಿಯಾ (76.) ಅಲ್ಪ ಕಾಲದ ಅನಾರೋಗ್ಯದಿಂದ ಇಂದಿಲ್ಲಿ (ನ.15) ಗುರುವಾರ ಮುಂಜಾನೆ ಬೊರಿವಿಲಿ ಪಶ್ಚಿಮದ ಖಾಸಾಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಮಂಗಳೂರು ಕಾಸ್ಸಿಯಾ ಮೂಲತಃ ಲೂಯಿಸಾ ಅವರು ಕಳೆದ ಅನೇಕ ವರ್ಷಗಳಿಂದ ದುಬಾಯಿನಲ್ಲಿದ್ದು ಇತ್ತೀಚಿನ ವರ್ಷಗಳಿಂದ ಮುಂಬಯಿ ಬೊರಿವಿಲಿ ಪಶ್ಚಿಮದ ಐ.ಸಿ ಕಾಲೋನಿಯಲ್ಲಿ ನಿವೃತ್ತ ಜೀವನ ಸಾಗಿಸುತ್ತಿದ್ದರು. ಮೃತರು ಒಂದು ಗಂಡು, ಒಂದು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

ಕೆನಡಾದಲ್ಲಿನ ಸುಪುತ್ರನ ಆಗಮನದ ಬಳಿಕ ಮೃತರ ಅಂತ್ಯಕ್ರಿಯೆಯು ಬರುವ ಸೋಮವಾರ (ನ.19) ಸಂಜೆ 3.30 ಗಂಟೆಗೆ ಬೊರಿವಿಲಿ ಐ.ಸಿ ಕಾಲೋನಿ ಅಲ್ಲಿನ ಅವರ್ ಲೇಡಿ ಆಫ್ ಇಮ್ಯಾಕ್ಯುಲೆಟ್ ಕಾನ್ಸೆಪ್ಶನ್ ಚರ್ಚ್ ಇಲ್ಲಿ ನೆರವೇರಲಿದೆ ಎಂದು ಕುಟುಂಬ ಮೂಲವು ತಿಳಿಸಿದೆ.

ಸಂಪರ್ಕ: ಫ್ರಾನ್ಸಿಸ್ ಫೆರ್ನಾಂಡಿಸ್-09833070396 (ಮುಂಬಯಿ)

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here