Wednesday 14th, May 2025
canara news

ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ

Published On : 16 Nov 2018   |  Reported By : Rons Bantwal


ಮುಂಬಯಿ, ನ.14: ಉಡುಪಿ ಜಿಲ್ಲೆಯ ಕಲ್ಯಾಣ್ಫುರದ ಪಡುತೋನ್ಸೆಯಲ್ಲಿ ಅನಾದಿ ಕಾಲದಿಂದ ಬಿಲ್ಲವರ ಕುಲದೇವರಾದ ಕೋಟಿ ಚೆನ್ನಯ ಮತ್ತು ಪಂಚಧೂಮಾವತೀ ದೈವವನ್ನು ಪೂಜಿಸಿಕೊಂಡು ಬರುತ್ತಿರುವ ಕ್ಷೇತ್ರ ತೋನ್ಸೆ ಗರೋಡಿ ಎಂದೇ ಪ್ರಸಿದ್ಧಿಯಲ್ಲಿದ್ದು, ಅನೇಕ ದಶಕಗಳಿಂದ ಧಾರ್ಮಿಕ ಕೇಂದ್ರವಾಗಿ ಸೇವಾ ನಿರತವಾಗಿದೆ. ಇದರ ಸರ್ವೋನ್ನತಿಗಾಗಿ ತವರೂರ ಮುಂಬಯಿವಾಸಿ ಭಕ್ತರು ಒಗ್ಗೂಡಿ ತೋನ್ಸೆ ಶ್ರೀ ಬ್ರಹ್ಮ ಬೈದರ್ಕಳ ಪಂಚ ಧೂಮವತೀ ಗರೊಡಿ ಸೇವಾ ಟ್ರಸ್ಟ್ ಮುಂಬಯಿ ಸ್ಥಾಪಿಸಿ ಇದೀಗ ದಶಮಾನದ ಅಂಚಿನಲ್ಲಿದೆ.

   

Vishwanath Tnonse.                  Vithal Poojary.

ಕಳೆದ ಸುಮಾರು ಹತ್ತು ವರ್ಷಗಳಿಂದ ಊರಿನ ಸಮಿತಿಯೊಂದಿಗೆ ನಿಕಟವಾಗಿ ಮುಂಬಯಿ ಸಮಿತಿ ಶ್ರದ್ಧಾ ಭಕ್ತಿಯಿಂದ ಕಾರ್ಯನಿರತವಾಗಿದ್ದು ಊರಿನ ಸಮಿತಿಗೆ ವಿವಿಧ ರೀತಿಯಲ್ಲಿ ಪೂರಕ ಶಕ್ತಿಯಾಗಿ ಉತ್ತಮ ರೀತಿಯಲ್ಲಿ ಸೇವೆಗೈಯುತ್ತಿದೆ. ಮಹಾನಗರದಲ್ಲಿ ತೋನ್ಸೆ ಗರೋಡಿಯ ಬಹಳಷ್ಟು ಭಕ್ತರು, ಹಿತೈಷಿಗಳು ನೆಲೆಯಾಗಿದ್ದು ಆ ನಿಮಿತ್ತ ಮುಂಬಯಿ ಸಮಿತಿ ತನ್ನ ದಶಸಂಭ್ರಮ ಆಚರಿಸಲು ಸರ್ವ ಸಿದ್ದತೆ ನಡೆಸಿದೆ. ತೋನ್ಸೆ ಗರೋಡಿಯ ಸಂಭಂಧಿಗಳೆಲ್ಲರನ್ನೂ ಸದಸ್ಯರನ್ನಾಗಿಸಿ ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವೆಗೈಯಲು ಅನುಕೂಲ ಆಗುವಂತೆ ಮುಂಬಯಿ ಸಮಿತಿ ಸನ್ನದ್ಧಗೊಂಡು ಸದಸ್ಯತ್ವ ಅಭಿಯಾನ ಆರಂಭಗೊಳಿಸಿದೆ.

ಸಮಿತಿಯು ಮುಂಬಯಿನಲ್ಲಿ ದಶಮಾನೋತ್ಸವ ಆಚರಿಸಲು ನಿರ್ಧಾರಿಸಿದ್ದು, ಪ್ರಾರಂಭದಿಂದಲೂ ಗರೋಡಿ ಇತಿಹಾಸ ತಿಳಿದು, ದುಡಿಸಿ ಕೊಂಡಿರುವ ಹಿರಿಯ ಸದಸ್ಯರಾದ ವಿಶ್ವನಾಥ ತೋನ್ಸೆ ಅವರನ್ನು ದಶಮಾನೋತ್ಸ ವ ಸಮಿತಿ ಅಧ್ಯಕ್ಷರನ್ನಾಗಿ ಮತ್ತು ವಿಠಲ ಎಸ್.ಪೂಜಾರಿ ಅವರನ್ನು ಕಾರ್ಯದರ್ಶಿ ಆಗಿ ಆಯ್ಕೆ ಮಾಡಲಾಗಿದೆ. ಇವರ ಮುಂದಾಳತ್ವದಲ್ಲಿ ಇದೇ ಡಿಸೆಂಬರ್ ತಿಂಗಳ ಕೊನೆಯಲ್ಲಿ ದಶಮಾನೋತ್ಸವ ಆಯೋಜಿಸಲಾಗಿದೆ. ಇವರು ಭಕ್ತಾದಿಗಳನ್ನು ಸಂಪರ್ಕಿಸಿ ಅವರೊಂದಿಗೆ ಸ್ಪಂದಿಸಿ ಸಮಿತಿಯ ಸದಸ್ಯರಾಗಿ ಅಥವಾ ದಾನಿಗಳಾಗಿ ಸೇರಿಕೊಂಡು ದಶಸಂಭ್ರಮಕ್ಕೆ ಭರದಸಿದ್ಧತೆ ನಡೆಸುವ ಆಶಯ ಪದಾಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

ಗರೊಡಿ ಸೇವಾ ಸಮಿತಿ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್, ಉಪಾಧ್ಯಕ್ಷರುಗಳಾಗಿ ಡಿ.ಬಿ ಅಮೀನ್, ಸಿ.ಕೆ ಪೂಜಾರಿ, ವಿಶ್ವನಾಥ್ ತೋನ್ಸೆ, ಗೌರವ ಪ್ರಧಾನ ಕಾರ್ಯದರ್ಶಿ ತೋನ್ಸೆ ಸಂಜೀವ ಪೂಜಾರಿ, ಗೌರವ ಕೋಶಾಧಿಕಾರಿ ಆಗಿ ರವಿರಾಜ್ ಕಲ್ಯಾಣ್ಫುರ್, ಜೊತೆ ಕಾರ್ಯದರ್ಶಿ ಕರುಣಾಕರ್ ಬಿ.ಪೂಜಾರಿ, ಜೊತೆ ಕೋಶಾಧಿಕಾರಿ ವಿಜಯ್ ವಿ.ಸನಿಲ್, ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಅಶೋಕ್ ಎಂ.ಕೋಟ್ಯಾನ್, ವಿಠಲ್ ಎಸ್.ಪೂಜಾರಿ, ಸೋಮ ಸುವರ್ಣ, ಆನಂದ ಜತ್ತನ್, ಸದಾನಂದ ಬಿ.ಪೂಜಾರಿ, ವಿಜಯ್ ಪಾಲನ್, ಕೃಷ್ಣ ಪಾಲನ್, ಸುರೇಶ್ ಅಂಚನ್, ರೂಪ್‍ಕುಮಾರ್ ಕಲ್ಯಾಣ್ಫುರ್, ಸೇವಾ ಟ್ರಸ್ಟ್‍ನ ಸಲಹಾಗಾರರಾದ ಶಂಕರ ಸುವರ್ಣ, ವಿ.ಸಿ ಪೂಜಾರಿ (ಆರ್‍ಬಿಐ), ಲಜಾರ್ ಮುತ್ತಪ್ಪ ಕೋಟ್ಯಾನ್, ಗೋಪಾಲ್ ಪಾಲನ್ ಕಲ್ಯಾಣ್ಪುರ್, ಲಕ್ಷ್ಮೀ ಡಿ.ಅಂಚನ್ ಸೇವಾ ನಿರತರಾಗಿದ್ದಾರೆ.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here