Wednesday 14th, May 2025
canara news

ನ.25: ಸೂರತ್‍ನಲ್ಲಿ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

Published On : 17 Nov 2018   |  Reported By : Ronida Mumbai


ಕರ್ನಾಟಕ ಸಮಾಜ ಸೂರತ್‍ನ ವಾರ್ಷಿಕೋತ್ಸವ-ಸಾಂಸ್ಕೃತಿಕ ವೈಭವ

ಮುಂಬಯಿ,ನ.17: ಕರ್ನಾಟಕ ಸಮಾಜ ಸೂರತ್ (ರಿ.) ಸಂಸ್ಥೆ ಇದೇ (ನ.25ನೇ) ಆದಿತ್ಯವಾರ ಮಧ್ಯಾಹ್ನ 1.00 ಗಂಟೆಯಿಂದ ಗುಜರಾತ್ ರಾಜ್ಯದ ಸೂರತ್ ನಗರದ ನಾನ್‍ಪುರಾ ಅಲ್ಲಿನ ಜೀವನ ಭಾರತಿ ಸಭಾಂಗಣದಲ್ಲಿ 2018ನೇ ವಾರ್ಷಿಕ ಕರ್ನಾಟಕ ರಾಜ್ಯೋತ್ಸವ ಆಚರಣೆಯೊಂದಿಗೆ ಯಕ್ಷಗಾನ ಪ್ರದರ್ಶಿಸಲಿದೆ.

  

           R V Shetty Surat                                 Radhakrishna Moolya

   

 ChandrahasaSaphaliga                        Manoj C.Pujari Surat 

ಸೂರತ್‍ನ ಸೂರತ್‍ನ ಹಿರಿಯ ಉದ್ಯಮಿ ವಸಂತ್ ಎನ್.ಶೆಟ್ಟಿ ಅಧ್ಯಕ್ಷತೆಯಲ್ಲಿ ಜರುಗುವ ಸಮಾರಂಭದಲ್ಲಿ ಎಲ್‍ಎನ್‍ಟಿ ಸೂರತ್ ಉದ್ಯಮದ ಪ್ರಧಾನ ಪ್ರಬಂಧಕ ಅನಿಲ್ ಬೋಂಟಡ್ಕ ಮುಖ್ಯ ಅತಿಥಿüಯಾಗಿ ಆಗಮಿಸಲಿದ್ದು ಮೌಂಟ್ ಕಾರ್ಮೆಲ್ ಕಾಥೋಲಿ ಚರ್ಚ್ ನಾನ್ಪುರ-ಸೂರತ್ ಇದರ ಸಹಾಯಕ ಧರ್ಮಗುರು ರೆ| ಫಾ| ಮಾರ್ಕ್ ರೋಬರ್ಟ್ ಡಿಸೋಜಾ ಸಮಾರಂಭ ಉದ್ಘಾಟಿಸುವರು ಎಂದು ಅಧ್ಯಕ್ಷ ಮನೋಜ್ ಸಿ.ಪೂಜಾರಿ ತಿಳಿಸಿದ್ದಾರೆ.

ಸಮಾರಂಭದಲ್ಲಿ ಕರ್ನಾಟಕ ಸಮಾಜದ ಗೌರವಾಧ್ಯಕ್ಷ ರಾಮಚಂದ್ರ ವಿ.ಶೆಟ್ಟಿ, ಉಪಾಧ್ಯಕ್ಷರುಗಳಾದ ದಿನೇಶ್ ಶೆಟ್ಟಿ, ರಮೇಶ್ ಭಂಡಾರಿ, ಉಮೇಶ್ ಸಫಲಿಗ, ಅಜಿತ್ ಎಸ್.ಶೆಟ್ಟಿ ಅಂಕ್ಲೇಶ್ವರ, ಪ್ರಭಾಕರ ಶೆಟ್ಟಿ ಕೋಸಂಬಾ, ವನಿತಾ ಜೆ.ಶೆಟ್ಟಿ, ಕೋಶಾಧಿಕಾರಿ ಚಂದ್ರಹಾಸ ಬಿ.ಸಫಲಿಗ, ಜೊತೆ ಕಾರ್ಯದರ್ಶಿ ಶಾಂತಿ ಡಿ.ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಶಾಂತ್ ಶೆಟ್ಟಿಗಾರ್ ಮತ್ತಿತರರು ಉಪಸ್ಥಿತರಿದ್ದು ಅತಿಥಿüಗಳನ್ನು ಸನ್ಮಾನಿಸುವರು ಹಾಗೂ ವಿಜೇತ ಸಂಘದ ಸದಸ್ಯರು ಮತ್ತು ಮಕ್ಕಳಿಗೆ ಬಹುಮಾನ ವಿತರಿಸುವರು.

ಸೂರತ್‍ನ ಕಲಾವಿದರು ವೈವಿಧ್ಯಮಯ ನೃತ್ಯಾವಳಿ, ಮನೋರಂಜನಾ ಕಾರ್ಯಕ್ರಮ ನೀಡಲಿದ್ದು ಶ್ರೀ ಗೀತಾಂಬಿಕಾ ಕೃಪಾ ಪೆÇೀಷಿತ ಯಕ್ಷಗಾನ ಮಂಡಳಿ ಅಸಲ್ಫಾ, ಘಾಟ್ಕೋಪರ್ ಇದರ ಕಲಾವಿದರು `ಶಬರಿಮಲೈ' ಯಕ್ಷಗಾನ ಪ್ರದರ್ಶಿಸುವರು ಎಂದು ಸಂಘಟನಾ ಕಾರ್ಯದರ್ಶಿ ಸಂತೋಷ್ ವಿ.ಶೆಟ್ಟಿ ತಿಳಿಸಿದ್ದಾರೆ.

ಆ ಪ್ರಯುಕ್ತ ನಾಡಿನ ಸಮಸ್ತ ತುಳುಕನ್ನಡಿಗ ಬಂಧುಗಳು, ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು, ಸದಸ್ಯರು, ಕನ್ನಡಾಭಿಮಾನಿಗಳು ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಗೌ| ಪ್ರ| ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಈ ಮೂಲಕ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. (ರೋನಿಡಾ ಮುಂಬಯಿ)

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here