Wednesday 14th, May 2025
canara news

ಮೂಡುಬಿದಿರೆ ವಲಯ ಕ್ರೈಸ್ತ ಉದ್ಯಮಿಗಳ ಸಂಘಟನೆ `ಸಾಧನಾ'ಸೇವಾರ್ಪಣೆ

Published On : 19 Nov 2018   |  Reported By : Rons Bantwal


ಸಕಾರಾತ್ಮಕ ಚಿಂತನೆಗಳಿಂದ ಉದ್ಯಮದ ಯಶಸ್ಸು ಸಾಧ್ಯ-ವಾಲ್ಟರ್ ನಂದಳಿಕೆ

ಮುಂಬಯಿ (ಮೂಡುಬಿದಿರೆ), ನ.19: ಮೂಡುಬಿದಿರೆ ವಲಯದ ಕಥೋಲಿಕ್ ಸಭಾ ಕಳೆದ ವರ್ಷ ಆಚರಿಸಿದ್ದ ರಜತ ಸಂಭ್ರಮದ ಸವಿನೆನಪಿಗಾಗಿ ಮೂಡುಬಿದಿರೆ ವಲಯದ ಉದ್ಯಮಿಗಳ ಸಂಘಟನೆ ಆಗಿಸಿ ಆಸ್ತಿತ್ವಕ್ಕೆ ತರಲಾಗಿದ್ದ `ಸಾಧನಾ' ಸಂಘಟನೆಯನ್ನು ಕಳೆದ ರವಿವಾರ ಇಲ್ಲಿನ ಕೋರ್ಪುಸ್ ಕ್ರೀಸ್ತಿ ಚರ್ಚ್ ಸಭಾಂಗಣದಲ್ಲಿ ಮಂಗಳೂರು ಪ್ರದೇಶ ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ರೋಲ್ಫಿ ಡಿಕೋಸ್ತಾ ಉದ್ಘಾಟಿಸಿದರು.

ದಾಯ್ಜಿವಲ್ರ್ಡ್ ಮಾಧ್ಯಮ ಸಮೂಹದ ಸ್ಥಾಪಕ ವಾಲ್ಟರ್ ನಂದಳಿಕೆ ದಿಕ್ಸೂಚಿ ಭಾಷಣಕಾರರಾಗಿದ್ದು ಮಾತನಾಡಿ `ಉದ್ಯಮದಲ್ಲಿ ಹಿನ್ನಡೆಗಳೇನಿದ್ದರೂ ಅಲ್ಪಕಾಲಿಕ. ಸಕಾರಾತ್ಮಕ ಚಿಂತನೆ, ಅತ್ಯುತ್ತಮ ಆಲೋಚನೆಗಳು, ಸವಾಲುಗಳನ್ನು ಎದುರಿಸುವ ಛಲ ಉದ್ಯಮದಲ್ಲಿ ಯಶಸ್ಸಿನ ಮೆಟ್ಟಿಲುಗಳಾಗುತ್ತವೆ. ಸಾಧನಾ ಸಂಘಟನೆಯ ಮೂಲಕ ಹೆಚ್ಚು ಹೆಚ್ಚು ಯುವಕರು ಉದ್ಯಮ ರಂಗದಲ್ಲಿ ಯಶಸ್ವಿಯಾಗುವಂತಾಗಲಿ' ಎಂದರು.

ಮುಖ್ಯ ಅತಿಥಿüಯಾಗಿದ್ದ ಎಂಸಿಸಿ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಅನಿಲ್ ಲೋಬೊ ಫೆರ್ಮಾಯ್ ಮಾತನಾಡಿ `ಉದ್ಯಮಿಗಳು ಒಗ್ಗಟ್ಟಿನಿಂದ ಇದ್ದು ಪರಸ್ಪರ ಸಹಕರಿಸುತ್ತಿದ್ದರೆ ಯಶಸ್ಸು ಸಾಧ್ಯ. ಸಾಧನಾ ಸಂಘಟನೆಯ ಮೂಲಕ ಸರಕಾರ ಉದ್ಯಮಗಳಿಗೆ ನೀಡುವ ಸವಲತ್ತುಗಳ ಬಗ್ಗೆ ಮಾಹಿತಿ, ಹಾಗೂ ಹೊಸದಾಗಿ ಉದ್ಯಮರಂಗವನ್ನು ಪ್ರವೇಶಿಸುವವರಿಗೆ ಮಾರ್ಗದರ್ಶನ ಲಭಿಸುವಂತಾಗಲಿ' ಎಂದು ಶುಭಾರೈಸಿದರು.

ಸಾಧನಾ ಅಧ್ಯಕ್ಷÀ ಉದ್ಯಮಿ ರಾಜೇಶ್ ಮೆಂಡಿಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಥೋಲಿಕ್ ಸಭಾ ಮೂಡುಬಿದಿರೆ ವಲಯಾಧ್ಯಕ್ಷ ಹ್ಯಾರಿ ರೆಗೋ ಪ್ರಾಸ್ತಾವಿಕವಾಗಿ ಮಾತನಾಡಿ ಕಥೋಲಿಕ್ ಸಭಾ ವತಿಯಿಂದ ಸಾಧನಾ ಸಂಘಟನೆಗೆ 25,000 ರೂಪಾಯಿಗಳ ಚೆಕ್ ಹಸ್ತಾಂತರಿಸಿದರು.


ಮೆಲ್ವಿನ್ ಡಿಕೋಸ್ತಾ, ಜೆರಾಲ್ಡ್ ಡಿಕೋಸ್ತಾ, ಜೋಯ್ಲಸ್ ಡಿಸೋಜಾ ಅತಿಥಿüಗಳನ್ನು ಪರಿಚಯಿಸಿದರು. ಅವಿಲ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಾಧನಾ ಕಾರ್ಯದರ್ಶಿ ರೊನಾಲ್ಡ್ ಸೆರಾವೋ ವಂದಿಸಿದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here