Wednesday 14th, May 2025
canara news

ವಿಶ್ವ ತುಳು ಸಮ್ಮೇಳನದ ಮಾಧ್ಯಮಗೋಷ್ಠಿಗೆ ಡಾ.ಸದಾನಂದ ಪೆರ್ಲ

Published On : 19 Nov 2018   |  Reported By : Rons Bantwal


ಮಂಗಳೂರು: ವಿಶ್ವ ತುಳು ಸಮ್ಮೇಳನವು ನವೆಂಬರ್ 23 ಮತ್ತು 24 ರಂದು ದುಬಾಯಿಯ ಐಸ್‍ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಅಲ್‍ನಾಸರ್ ಲೀಸರ್‍ಲ್ಯಾಂಡ್‍ನಲ್ಲಿ ನಡೆಯಲಿದ್ದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಭಾಗವಹಿಸಲಿದ್ದಾರೆ.

ಕೊಲ್ಲಿ ರಾಷ್ಟ್ರದ ತುಳುವರ ಸಂಘ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಅಖಿಲ ಭಾರತ ತುಳು ಒಕ್ಕೂಟದವರ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಸಮ್ಮೇಳನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದು ವಿವಿಧ ಕ್ಷೇತ್ರಗಳ ಗಣ್ಯರು ಪಾಲ್ಗೊಳ್ಳಲಿರುವರು. ಕಬಿಕೂಟ, ತುಳು ಚಲನಚಿತ್ರ ಹಾಗೂ ರಂಗಭೂಮಿ, ಜಾನಪದ ಆಚರಣೆ ಗೋಷ್ಠಿ, ಮಾಧ್ಯಮ ಗೋಷ್ಠಿ, ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.

ಮಾಧ್ಯಮ ಗೋಷ್ಠಿಯು ನವೆಂಬರ್ 24 ರಂದು ನಡೆಯಲಿದ್ದು ವಾಲ್ಟರ್ ಡಿ’ಸೋಜ ನಂದಳಿಕೆ ಅಧ್ಯಕ್ಷತೆ ವಹಿಸಲಿರುವರು. ಆಕಾಶವಾಣಿಯ ಡಾ.ಸದಾನಂದ ಪೆರ್ಲ, ಬಿ.ಕೆ.ಗಣೇಶ್ ರೈ, ಬಾಳಜಗನ್ನಾಥ ಶೆಟ್ಟಿ, ದಿನೇಶ್ ಅಮೀನ್ ಮಟ್ಟು ಮತ್ತು ಡಾ.ಉಮ್ಮರ್ ಉಪನ್ಯಾಸ ನೀಡಲಿರುವರು. “ತುಳು ಭಾಷೆ ಮತ್ತು ಸಂಸ್ಕøತಿ ಬೆಳವಣಿಗೆಗೆ ಧ್ವನಿ ಮಾಧ್ಯಮದ ಕೊಡುಗೆ” ಕುರಿತಾಗಿ ಡಾ.ಪೆರ್ಲ ಉಪನ್ಯಾಸ ನೀಡಲಿದ್ದಾರೆ. ರಾಷ್ಟ್ರೀಯ ಮತ್ತು ರಾಜ್ಯ ಮಟ್ಟಗಳ ವಿಚಾರಸಂಕಿರಣದಲ್ಲಿ ಪಾಲ್ಗೊಂಡು ಪ್ರಬಂಧ ಮಂಡಿಸಿದ್ದ ಇವರು ಕರ್ನಾಟಕ ಸರಕಾರದ ‘ಅಭಿವೃದ್ಧಿ ಪತ್ರಿಕೋದ್ಯಮ’ ಪ್ರಶಸ್ತಿ ಪುರಸ್ಕøತರು. ಕಾಸರಗೋಡು ಕನ್ನಡ ಹೋರಾಟದ ಕುರಿತಾಗಿ ಸಮಗ್ರ ಅಧ್ಯಯನ ನಡೆಸಿ ಮಹಾಪ್ರಬಂಧ ಮಂಡಿಸಿದ್ದು, ಮೂಡಬಿದ್ರೆಯ ಆಳ್ವಾಸ್ ನುಡಿಸಿರಿ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ ಅನುಭವಿ. ಮಂಗಳೂರು ಆಕಾಶವಾಣಿ ಕೇಂದ್ರದಲ್ಲಿ ತುಳು ವಿಭಾಗದ ಕಾರ್ಯಕ್ರಮ ನಿರ್ವಾಹಕರಾಗಿ ವಿನೂತನ ಕಾರ್ಯಕ್ರಮಗಳನ್ನು ರೂಪಿಸಿ ತುಳು ಭಾಷೆಯ ಸಮೃದ್ಧಿಗೆ ನೆರವಾಗಿದ್ದಾರೆ. ‘ಗಾಂಪಣ್ಣನ ತಿರ್ಗಾಟ’,ಸ್ವರಮಂಟಮೆ’, ‘ಸಿರಿದೊಂಪ’, ‘ಪದರಂಗೀತ’, ‘ಚಾವಡಿ ಮದಿಪು’ ಮುಂತಾದವುಗಳ ಮೂಲಕ ನಾಡಿನ ಸಾಂಸ್ಕøತಿಕ ಸಿರಿವಂತಿಕೆಯನ್ನು ಪಸರಿಸುವ ಕಾರ್ಯನಿರತರಾಗಿದ್ದಾರೆ.




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here