Friday 26th, April 2024
canara news

ಎಂ.ಸಂಜೀವರು ನಿಸ್ವಾರ್ಥ ಹೋರಾಟಗಾರ : ಮಾಜಿ ಪ್ರಧಾನಿ ದೇವೇಗೌಡ

Published On : 20 Nov 2018   |  Reported By : Ronida Mumbai


ಸುಕಲಾಕ್ಷಿ ಸುವರ್ಣ ರಚಿತ `ಸಂಜೀವನ' ಕೃತಿ ಯುನಿಟಿ ಆಸ್ಪತ್ರೆಯಲ್ಲಿ ಬಿಡುಗಡೆ
(ಚಿತ್ರ / ವರದಿ : ರೊನಿಡಾ ಮುಂಬಯಿ)

ಮುಂಬಯಿ, ನ.19: ಇತ್ತೀಚಿನ ದಿನಗಳಲ್ಲಿ ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗ ಹೋರಾಟದ ಕಾವು ಮತ್ತು ಕೆಚ್ಚನ್ನು ಕಳೆದುಕೊಂಡು, ಜಾತ್ಯಾತೀತತೆ, ಸಮಾಜವಾದ, ಜನಪರ ಹೋರಾಟಗಳ ಲಕ್ಷಣಗಳನ್ನು ಕಳೆದುಕೊಂಡು ಮೂಲಭೂತವಾದಿಗಳ ರಣಾಂಗಣವಾಗಿರುವುದು ಅತ್ಯಂತ ಗಂಭೀರವಾದ ಸಂಗತಿ. ಸುಮಾರು ಐದು ದಶಕಗಳಿಂದ ಸಾರ್ವಜನಿಕ ಬದುಕಿನಲ್ಲಿ ಕೆಲಸ ಮಾಡಿಕೊಂಡು ಬಂದಿರುವ ನನಗೆ ಉಡುಪಿ ಮತ್ತು ಮಂಗಳೂರು ಪ್ರದೇಶಗಳ ಸ್ವರೂಪ ಬದಲಾಗುತ್ತಾ ಬಂದದ್ದನ್ನು ಅತ್ಯಂತ ನೋವಿನಿಂದ ಗಮನಿಸಿದ್ದೇನೆ. ಹೀಗೆ ಗಮನಿಸಿದಾಗಲೆಲ್ಲಾ ನನಗೆ ಥಟ್ಟನೆ ನೆನಪಿಗೆ ಬರುವುದು ನನ್ನೊಟ್ಟಿಗೆ ನನ್ನದೇ ವಯಸ್ಕರಾಗಿ, ನನ್ನ ಸಮಕಾಲೀನರಾಗಿ, ನನ್ನ ಪಕ್ಷದಲ್ಲಿ ನಿಷ್ಠರಾಗಿ ಜನಪರ ಹೋರಾಟಗಳ ಮುಂದಾಳಾಗಿ ಕೆಲಸ ಮಾಡಿ ಈಗ 85ರ ಇಳಿವಯಸ್ಸಿನಲ್ಲಿಯೂ ಕರಾವಳಿಯ ಹಿರಿಯ ಚಿಂತಕರಾಗಿ ನಮ್ಮ ಮಧ್ಯೆ ಇರುವ ಎಂ.ಸಂಜೀವ ಅವರು ಅವರ ಜೀವನ ಅನುಪಮವಾದುದು ಎಂದು ಭಾರತ ರಾಷ್ಟ್ರದ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ನೇತಾರ ಹೆಚ್.ಡಿ ದೇವೇಗೌಡ ತಿಳಿಸಿದರು.

ಮಂಗಳೂರು ನಗರದಲ್ಲಿನ ಯುನಿಟಿ ಆಸ್ಪತ್ರೆಯಲ್ಲಿ ವೃದ್ಧಾಪ್ಯದಿಂದ ದಾಖಲಾಗಿ ಶುಶೂಷೆ ಪಡೆಯುತ್ತಿರುವ ತಮ್ಮ ಪರಮಾತ್ಮ ಮಿತ್ರ ಎಂ.ಸಂಜೀವ ಅವರನ್ನು ಕಳೆದ ಶನಿವಾರ ಭೇಟಿ ನೀಡಿದ ಹೆಚ್.ಡಿ ದೇವೇಗೌಡ ಅವರು ಸಂಜೀವರ ತಂಗಿ ಸುಕಲಾಕ್ಷಿ ಸುವರ್ಣ ರಚಿತ ಎಂ.ಸಂಜೀವರ ಜೀವನ ಕಥನ `ಸಂಜೀವನ' ಜನನಾಯಕ ಎಂ.ಸಂಜೀವ ಜೀವನ ಕಥನ ಬಿಡುಗಡೆ ಗೊಳಿಸಿ ಸಂಜೀವರ ಬಗ್ಗೆ ಅಭಿಮಾನ ವ್ಯಕ್ತ ಪಡಿಸಿದರು.

ಎಂ.ಸಂಜೀವ ಅವರು ಮತ್ತು ನಾನು ಒಂದೇ ವಯಸ್ಸಿನವರು ಮತ್ತು ತಲೆಮಾರಿನವರು. ನಾನು ಮತ್ತು ಸಂಜೀವರು ಮೇ.1933ರಲ್ಲಿ ಹುಟ್ಟಿದ್ದು. ನಾನು ಸಂಜೀವರವರಿಗಿಂತ 10 ದಿನ ದೊಡ್ಡವನು ಅಷ್ಟೇ. ಅದೇನು ಯೋಗಾನು ಯೋಗವೋ ನಾವಿಬ್ಬರೂ ಸಮಾನ ವಯಸ್ಕರಾಗಿ, ಸಮಕಾಲೀನರಾಗಿ, ಸಮಾನ ಮನಸ್ಕರಾಗಿ, ಒಂದೇ ರೀತಿಯ ರಾಜಕಾರಣವನ್ನು ಆಯ್ಕೆ ಮಾಡಿಕೊಂಡದ್ದು ನಮ್ಮ ಸಂಬಂಧವನ್ನು ಬಹಳಷ್ಟು ಬೆಸೆದಿದೆ. 1952ರಿಂದ ನಾನು ಹಾಸನ ಜಿಲ್ಲೆಯನ್ನು ನನ್ನ ಕರ್ಮಭೂಮಿಯನ್ನಾಗಿ ಆರಿಸಿಕೊಂಡರೆ, ಸಂಜೀವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿ ಕೊಂಡವರು. 1972 ರಲ್ಲಿ ನಾನು ವಿರೋಧಪಕ್ಷದ ನಾಯಕನಾದಾ ಗ ಸಂಜೀವ ಅವರ ಆತ್ಮೀಯ ಒಡನಾಟವನ್ನು ಪಡೆದು ಕೊಂಡು ವಿರೋಧಪಕ್ಷದ ನಾಯಕನಾಗಿ ನಾನು ನಮ್ಮ ಪಕ್ಷದ ಸಂಘಟನೆಯ ಜೊತೆ ಕಾರ್ಯಕರ್ತರಿಗೆ ಧೈರ್ಯ ಮತ್ತು ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡುತ್ತಾ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರ ಬಹುದಾದ ಜನವಿರೋಧಿ ಕೃತ್ಯಗಳ ಮಾಹಿತಿ ಕಲೆ ಹಾಕಿಕೊಂಡು ಅದನ್ನು ವಿಧಾನಸಭೆಯಲ್ಲಿ ಸಶಕ್ತವಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದ್ದು ಆ ದಿನಗಳಲ್ಲಿ ನನಗೆ ಕರಾವಳಿ ಭಾಗದ ಜನರ ಸಮಸ್ಯೆಗಳನ್ನು ಮನವರಿಕೆ ಮಾಡಿ ಕೊಡುತ್ತಿದ್ದವರು ಗೆಳೆಯ ಸಂಜೀವ ಅವರು. ದಕ್ಷಿಣ ಕನ್ನಡ ಜಿಲ್ಲೆಯ ಬಾಡಿಗೆದಾರ ಸಂಘದ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷರಾಗಿ ಆಯ್ಕೆ ಸಾರ್ವಜನಿಕ ಬದುಕಿನ ಹೋರಾಟಗಾರರಾಗಿ ರೂಪುಗೊಂಡರು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಮತ್ತು ದೇವರಾಜು ಅರಸು ಅವರ ಒಡನಾಡಿ ಆಗಿದ್ದರು ಎಂದು ದೇವೇಗೌಡರು ಸಂಜೀವರ ಸ್ನೇಹತ್ವದ ನೆನಪುಗಳನ್ನು ಮೆಲುಕು ಹಾಕಿದರು.

ಈ ಸಂದರ್ಭದಲ್ಲಿ ಸಂಜೀವರ ಸಹೋದರ ಸಂತೋಷ್, ಕೃಪಾ ಭೋಜರಾಜ್ ಮುಂಬಯಿ, ಚಿತ್ರನಟ ಪ್ರಜ್ವಲ್, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಎಂ.ಬಿ ಸದಾಶಿವ, ಮಹಮ್ಮದ್ ಕುಂಞÂ್ಞ , ಯುನಿಟಿ ಆಸ್ಪತ್ರೆಯ ವೈ.ಮಹಮ್ಮದ್ ಕುಂಞÂ್ಞ , ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇ±ಕ ಡಾ| ಹಬೀಬ್ ರೆಹ್ಮಾನ್, ಡಾ| ಮಹಮ್ಮದ್ ಇಸ್ಮಾಯಿಲ್, ಮತ್ತು ಸಂಜೀವರ ಕುಟುಂಬಸ್ಥರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here