Wednesday 14th, May 2025
canara news

ಭರತನಾಟ್ಯಂ ಪ್ರವೀಣೆ ಕು| ನಮ್ರತಾ ಪ್ರಭಾಕರ್ ಸುವರ್ಣ

Published On : 22 Nov 2018   |  Reported By : Ronida Mumbai


ನ.23: ಚೆಂಬೂರುನ ಫೈನ್‍ಆಟ್ರ್ಸ್ ಸಭಾಗೃಹದಲ್ಲಿ ರಂಗಪ್ರವೇಶ

ಮುಂಬಯಿ, ನ.20: ಗುರು ಶ್ರೀ ಎ.ಟಿ ಗೋವಿಂದ್‍ರಾಜ್ ಪಿಳ್ಳೈ ಅವರಿಂದ 1945ರಲ್ಲಿ ಅಂದರೆ ಸ್ವಾತಂತ್ರ ್ಯ ಪೂರ್ವದಲ್ಲೇ ಮುಂಬಯಿನಲ್ಲಿ ಸ್ಥಾಪಿತ ಶ್ರೀ ರಾಜರಾಜೇಶ್ವರಿ ಭರತ ನಾಟ್ಯ ಕಲಾ ಮಂದಿರ್ ಮಾಟುಂಗಾ ಇದರ ಕಲಾ ವಿದ್ಯಾಥಿರ್üನಿ ಆಗಿ ತರಬೇತಿ ಪಡೆದು ಪರಿಣತ ಕಲಾವಿದೆಯಾಗಿರುವ ಭರತನಾಟ್ಯಂ ಪ್ರವೀಣೆ ಕು| ನಮ್ರತಾ ಪ್ರಭಾಕರ್ ಸುವರ್ಣ ಇದೇ ನ.23ನೇ ಶುಕ್ರವಾರ ಗುರು ನಾನಕ್ ಜಯಂತಿ ದಿನ ಸಂಜೆ 7.00 ಗಂಟೆಗೆ ಚೆಂಬೂರು ಅಲ್ಲಿನ ಫೈನ್ ಆಟ್ರ್ಸ್ ಕಲ್ಚರಲ್ ಸೆಂಟರ್‍ನ ಶಿವಸ್ವಾಮಿ ಆಡಿಟೋರಿಯಂನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಾಟ್ಯ ರಂಗಪ್ರವೇಶ (ಅರಂಗೇಟ್ರಮ್) ನಡೆಸಲಿದ್ದಾರೆ.

ಚೆಂಬೂರು ಇಲ್ಲಿನ ಸೈಂಟ್ ಗ್ರೆಗೋರಿಯಸ್ ಹೈಸ್ಕೂಲು ಮತ್ತು ಸ್ವಾಮಿ ವಿವೇಕಾನಂದ ಜೂನಿಯರ್ ಕಾಲೇಜು ಚೆಂಬೂರು ವಿದ್ಯಾಥಿರ್üನಿ ಆಗಿ, ವಿಜೆಟಿಐ ಮಾಟುಂಗಾ ಕಾಲೇಜ್‍ನಲ್ಲಿ ಇನ್‍ಫರ್ಮೇಶನ್ ಟೆಕ್ನಾಲಜಿ ವಿಷಯದಲ್ಲಿ ಬಿ.ಟೆಕ್ ಪದವೀಧರೆ ಆಗಿದ್ದಾರೆ. ತನ್ನ ಆರನೇ ವರ್ಷದಲ್ಲೇ ಶ್ರೀ ರಾಜರಾಜೇಶ್ವರಿ ಕಲಾ ಮಂದಿರ್‍ಗೆ ಸೇರ್ಪಡೆ ಗೊಂಡು ಸುಮಾರು ಹತ್ತು ವರ್ಷಗಳಿಂದ ಸತತ ಭರತ ನಾಟ್ಯ ಅಭ್ಯಾಸಗೈದು ಗುರು ಜಿ.ವಸಂತ್ ಕುಮಾರ್ ಅವರ ಗರಡಿಯಲ್ಲಿ ನಾಟ್ಯ ಕಲಾವಿದೆಯಾಗಿ ಪಳಗಿದ್ದಾರೆ.

ನೃತ್ಯ, ಕ್ರೀಡೆ ಮತ್ತು ಚಿತ್ರಕಲಾ ರಂಗದಲ್ಲಿ ಬಾಲ್ಯದಿಂದಲೇ ಆಸಕ್ತ ಈಕೆ ಕಲಾ ಮಂದಿರದ ನಿರ್ದೇಶಕ ಗುರು ಕೆ. ಕಲ್ಯಾಣಸುಂದರಂ, ಗುರು ಕೆ.ಮಿಥಿüಲಿ, ಗುರು ಜಿ.ವಸಂತ್ ಕುಮಾರ್, ಗುರು ಕೆ.ಹರಿಕೃಷ್ಣ ಅವರ ಆಶೀರ್ವಚನ ಮತ್ತು ಮಾರ್ಗದರ್ಶನಗಳೊಂದಿಗೆ ರಂಗಪ್ರವೇಶ ನಡೆಸಲಿದ್ದಾರೆ. ಅಂದು ವಿನಾಯಕ ಸ್ತುತಿ, ಕವುಥ್ವಸಂ, ಜಥಿüಸ್ವರಂ, ಮೀನಾಕ್ಷಿ ಮೇಮುಧಂ, ವರ್ಣಂ, ಆನಂದ ತಾಂಡವಂ ಆದಿನಾರ್, ಥಾಯೇ ಯಶೋದ, ಥಿüಲ್ಲನ, ತಿರುಪ್ಪವೈ, ಮಂಗಳಂ ಇತ್ಯಾದಿ ನೃತ್ಯಗಳನ್ನು ಪ್ರದರ್ಶಿಸಲಿದ್ದಾರೆ.

ಉಡುಪಿ ಜಿಲ್ಲೆಯ ಶಂಕರಪುರ ಇನ್ನಂಜೆ ನಿವಾಸಿ, ಭಾರತ್ ಕೋ.ಅಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ಇದರ ಉಪ ಪ್ರಧಾನ ಪ್ರಬಂಧಕರಾದ ಪ್ರಭಾಕರ್ ಜಿ.ಸುವರ್ಣ ಮತ್ತು ಭಾರತೀ ಪ್ರಭಾಕರ್ ಹಳೆಯಂಗಡಿ ದಂಪತಿ ಸುಪುತ್ರಿ ನಮ್ರತಾ ಸುವರ್ಣ ಆಗಿದ್ದಾರೆ. : ರೋನಿಡಾ ಮುಂಬಯಿ

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here