Wednesday 14th, May 2025
canara news

ಗೋರೆಗಾಂವ್‍ನಲ್ಲಿ ನೇರವೇರಿದ ಪರಿಸರ ಸ್ನೇಹಿ ಆಡಳಿತ ಮತ್ತು ವ್ಯವಹಾರ ಕಾರ್ಯಗಾರ

Published On : 02 Dec 2018   |  Reported By : Rons Bantwal


ಹಸಿರು ಜೀವನ ಮಾನವ ಬದುಕಿನ ಸುಂದರೀಕರಣ : ಬಿಷಪ್ ಆಲ್ವಿನ್ ಡಿಸಿಲ್ವಾ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಡಿ.01: ಮುಂಬಯಿ ಧರ್ಮಪ್ರಾಂತ್ಯದ ಪರಿಸರ ಕಾರ್ಯಸ್ಥಾನ (ಆರ್ಚ್‍ಡೈಯೊಸೆಸ್ ಆಫೀಸ್ ಫಾರ್ ಎನ್‍ವ್ಹಿರಾನ್‍ಮೆಂಟ್) ಮತ್ತು ಕ್ರೈಸ್ತ ವ್ಯವಹಾರ ವೇದಿಕೆ) (ದಿ ಕ್ರಿಶ್ಚಿಯನ್ ಬಿಝಿನೆಸ್ ಪೆÇೀರಮ್ ಮುಂಬಯಿ ಸಂಯೋಜನೆಯಲ್ಲಿ ಪರಿಸರ ಸ್ನೇಹಿ ಆಡಳಿತ ಪ್ರಾಂತ ಮತ್ತು ವ್ಯವಹಾರ (ಗ್ರೀನಿಂಗ್ ಆಫ್ ದಿ ಆರ್ಚ್‍ಡೈಯೊಸೆಸ್ ಆ್ಯಂಡ್ ಬಿಝಿನೆಸ್) ಕಾರ್ಯಗಾರ ಇಂದಿಲ್ಲಿ ಶನಿವಾರ ಪೂರ್ವಾಹ್ನ ಗೋರೆಗಾಂವ್ ಪೂರ್ವದಲ್ಲಿರುವ ಸೈಂಟ್ ಪಾಯಸ್ ಕಾಂಪ್ಲೆಕ್ಸ್‍ನಲ್ಲಿರುವ ಸರ್ವೋದಯ ಸಭಾಗೃಹದಲ್ಲಿ ನೇರವೇರಿಸಿತು.

ಮುಂಬಯಿ ಧರ್ಮಪ್ರಾಂತ್ಯದ ಸಹಾಯಕ ಬಿಷಪ್ ಆಲ್ವಿನ್ ಡಿಸಿಲ್ವಾ ಕಾರ್ಯಕ್ರಮ ಉದ್ಘಾಟಿಸಿ ಮುಂಬಯಿಯಲ್ಲಿನ ಉದ್ಯಮಿಗಳನ್ನು ಜೊತೆಗೂಡಿಸಿ ಅವರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಉದ್ಯಮ ಹಾಗೂ ಧರ್ಮಪ್ರಾಂತ್ಯ ಮತ್ತು ಇದರ ವಿವಿಧ ಕ್ಷೇತ್ರÀಗಳನ್ನು ಜೀವಾಳ ಆಗಿರಿಸುತ್ತಾ ಪರಿಸರದ ಬಗ್ಗೆ ಕಾಳಜಿಯನ್ನು ವಹಿಸುವುದೇ ಕಾರ್ಯಕ್ರಮದ ಪ್ರಧಾನ ಉದ್ದೇಶವಾಗಿದೆ. ಪಾರಂಪರಿಕತೆ, ಬದ್ಧತೆ, ಉತ್ಕೃಷ್ಟತೆ ಮತ್ತು ವಿಶ್ವಾಸದ ಉತ್ಸಾಹದಲ್ಲಿ ಪರಸ್ಪರರ ಬೆಳವಣಿಗೆ ಒಗ್ಗೂಡಿಸುವ ಜೊತೆಗೆ ಸಂಪನ್ಮೂಲಗಳನ್ನು ಪೆÇೀಷಿಸುವ ಮೂಲಕ ಮತ್ತು ಅದರ ಸಮುದಾಯಕ್ಕೆ ಸಂಪತ್ತನ್ನು ಸೃಷ್ಟಿಸಲು ಕನಸಿನೊಂದಿಗೆ ಕ್ರಿಶ್ಚಿಯನ್ ಉದ್ಯಮಿಗಳು ಮತ್ತು ವೃತ್ತಿಪರರ ಸಾಂಘಿಕತೆ ಅವಶ್ಯವಾಗಿದೆ. ನೈತಿಕ, ಸಹಾನುಭೂತಿಯ ಮತ್ತು ಬದ್ಧದೃಷ್ಟಿ ಹೊಂದಿರುವ ಸಮಾಜ ಮತ್ತು ಮಾನವೀಯತೆ ರೂಪಿಸಲು ಉದ್ಯಮಿಗಳುಮುಂದಾಗಬೇಕು. ಹಸಿರುತನ ಉದ್ಯಮದಒಂದು ಭಾಗವಾಗಿದೆ. ಆದುದರಿಂದ ಉದ್ಯಮಸ್ಥಾನ ಪರಿಸರದಾದ್ಯಂತ ಪರಿಸರ ಸ್ನೇಹಿ ವಾತಾವರಣದ ನಿರ್ಮಾಣ ಅಗತ್ಯವಾಗಿಸಬೇಕು. ಅವಾಗಲೇ ಹಸಿರು ಜೀವನ ಮಾನವ ಬದುಕಿನ ಸುಂದರೀಕರಣ ಗೊಳಿಸಬಲ್ಲದು ಎಂದರು.

ಪರಿಸರ ಪ್ರೇಮಿ, ಸಂಘಟಕ ರೆ| ಫಾ| ಜೋಸೆಫ್ (ಜ್ಯೋ) ಗೋನ್ಸಾಲ್ವಿಸ್, ಗ್ರೀನ್ ಲೈನ್ (ಎನ್‍ಜಿಒ) ನಿರ್ದೇಶಕ ರೆ| ಫಾ| ಸಾಮೋ ಸಿಲ್ವಾ ಸಂಪನ್ಮೂಲ ವ್ಯಕ್ತಿಗಳಾಗಿದ್ದು ಕಾರ್ಯಗಾರ ನೆರವೇರಿಸಿದರು.

ಫಾ| ಜ್ಯೋ ಗೋನ್ಸಾಲ್ವಿಸ್ ಮಾತನಾಡಿ ಸಾಮಾನ್ಯವಾಗಿ ಹಸಿರು ಜೀವನ ಅಥವಾ ನೀರಿನ ಮತ್ತು ಶಕ್ತಿಯಂತಹ ಸಂಪನ್ಮೂಲಗಳನ್ನು ಸಂರಕ್ಷಿಸಲು ನೆರವಾಗುವ ಅಭ್ಯಾಸಗಳಿಗೆ ಕೊಡುಗೆ ನೀಡುವ ಉತ್ಪನ್ನಗಳನ್ನು ಸೂಚಿಸುತ್ತದೆ. ಪರಿಸರ-ಸ್ನೇಹಿ ಉತ್ಪನ್ನಗಳು ಗಾಳಿ, ನೀರು ಮತ್ತು ಭೂ ಮಾಲಿನ್ಯಕ್ಕೆ ಕೊಡುಗೆಗಳನ್ನು ತಡೆಯುತ್ತವೆ. ನೀವು ಸಂಪನ್ಮೂಲಗಳನ್ನು ಹೇಗೆ ಬಳಸುತ್ತೀರಿ ಎಂಬುದರ ಬಗ್ಗೆ ಹೆಚ್ಚು ಜಾಗೃತರಾಗಿ ಪರಿಸರ ಸ್ನೇಹಿ ಪದ್ಧತಿ ಅಥವಾ ಅಭ್ಯಾಸಗಳಲ್ಲಿ ತೊಡಗಿಸಿ ಕೊಳ್ಳಬಹುದು ಎಂದರು.

ನಾವು ನಮ್ಮ ಆಸುಪಾಸಿನ ಎಲ್ಲರಲ್ಲೂ ಪರಿಸರ ಸ್ನೇಹಿ ಪದ್ಧತಿ ರೂಢಿಸಿಕೊಳ್ಳಲು ಪ್ರೇರಿಪಿಸಬೇಕು. ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು, ವಾಯುಮಾಲಿನ್ಯ ತಡೆಗಟ್ಟಲು ಮತ್ತು ವೈಜ್ಞಾನಿಕ ಇಂಧನ ಬಳಕೆಗಳನ್ನು ಕಡಿಮೆ ಮಾಡುತ್ತಾ ಪ್ರ್ರಾಕೃತಿಕ ವ್ಯವಸ್ಥೆಗೆ ಹೊಂದಿಕೊಳ್ಳುವ ಪ್ರಯತ್ನ ಹೆಚ್ಚಿಸಬೇಕು. ಇಂತಹ ಅಭ್ಯಾಸವನ್ನು ಶಾಶ್ವತವಾಗಿಸಿದಾಗಲೇ ಆರೋಗ್ಯಭಾಗ್ಯದ ಜೊತೆಗೆ ಪರಿಸರ ರಕ್ಷಣೆಯೂ ಸುಲಭ ಸಾಧ್ಯವಾಗುವುದು ಎಂದು ಫಾ| ಸಾಮೋ ಸಿಲ್ವಾ ತಿಳಿಸಿದರು.

ಕ್ರಿಶ್ಚಿಯನ್ ಬಿಝಿನೆಸ್ ಪೆÇೀರಂ ಸಂಸ್ಥೆಯ ಮುಖ್ಯಸ್ಥ, ಕ್ರಿಶ್ಚನ್ ಛೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಉಪ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ. ಡಿಸೋಜಾ ಪ್ರಸ್ತಾವಿಕ ನುಡಿಗಳನ್ನಾಡಿ ಶಿಕ್ಷಣ, ಆರೋಗ್ಯ ಸೇವೆಗೆ ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಅನನ್ಯವಾದುದು. ಭಾರತದಲ್ಲಿ ಅನನುಕೂಲವನ್ನು ಪೂರೈಸುವ ಕ್ಷೇತ್ರಗಳಲ್ಲಿ ಕ್ರೈಸ್ತರು ಮುಂಚೂಣಿಯಲ್ಲಿದೆ. ಸದ್ಯ ಕ್ರಿಶ್ಚನ್ನರು ಉದ್ಯಮ, ವ್ಯಾಪಾರದಲ್ಲೂ ತಮ್ಮ ಸ್ಥಾನವನ್ನು ಗುರುತಿಸಿ ಕೊಂಡಿದ್ದು, ಉದ್ಯಮದ ಜೊತೆಗೆ ಪರಿಸರ ರಕ್ಷಣೆ, ಸ್ವಸ್ಥ ಸಮಾಜ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಆಗಿದೆ ಎಂದರು.

ಸಿಸಿಸಿಐ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ, ಮಾಜಿ ಕಾರ್ಯಾಧ್ಯಕ್ಷ ಹೆನ್ರಿ ಲೊಬೋ, ಸಿಸಿಸಿಐ ನಿರ್ದೇಶಕರಾದ ನ್ಯಾ| ಪಿಯೂಸ್ ವಾಸ್, ವಾಲ್ಟರ್ ಬುಥೆಲೋ, ಮೊಡೇಲ್ ಬ್ಯಾಂಕ್‍ನ ಉಪ ಕಾರ್ಯಾಧ್ಯಕ್ಷ ವಿಲಿಯಂ ಸಿಕ್ವೇರಾ, ನಿರ್ದೇಶಕರುಗಳಾದ ಲಾರೇನ್ಸ್ ಡಿಸೋಜಾ ಮುಲುಂಡ್, ಅಬ್ರಹಾಂ ಕ್ಲೇಮೆಂಟ್ ಲೊಬೋ, ಡೈಮೆನ್ಶನ್ ಸಂಸ್ಥೆಯ ಫ್ರೆಡ್ಡಿಮೆಂಡೋನ್ಸಾ, ಸಮಾಜ ಸೇವಕರಾದ ರೀಟಾ ಡೆಸಾ, ಎಲೈನಾ ಡಿಸೋಜಾ, ಲಾರೇನ್ಸ್ ಡಿಸೋಜಾ ಕಮಾನಿ, ವಾಲ್ಟರ್ ಡಿಸೋಜಾ ಜೆರಿಮೆರಿ, ರೂಬೆನ್ ಬುಥೆಲೋ, ಲೀಯೋ ಫೆರ್ನಾಂಡಿಸ್ ಜೆರಿಮೆರಿ, ರೆಜೀ ಬುಥೇಲೋ ಸೇರಿದಂತೆ ಹಲವಾರು ಉದ್ಯಮಿಗಳು ಉಪಸ್ಥಿತರಿದ್ದರು.

ಮುಂಬಯಿ ಧರ್ಮಪ್ರಾಂತ್ಯದ ಆರ್ಚ್‍ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಷಿಯಸ್ ಅವರು ಕಳೆದ ಸೆ.1 ರಂದು ಗ್ರೀನಿಂಗ್ ಆಫ್ ದಿ ಆರ್ಚ್‍ಡಯೊಸೆಸ್ ಆ್ಯಂಡ್ ಬಿಝಿನೆಸ್ ಕಾರ್ಯಕ್ರಮ ಆರಂಭಿಸುವುದಾಗಿ ಮಾಹಿತಿ ನೀಡಿದ್ದರು. ಕು| ಮರಿಯಾ ಅಂತಾವೋ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.

 

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here