Wednesday 14th, May 2025
canara news

ಪ್ರಚಾರ ವಾಹನಕ್ಕೆ ಚಾಲನೆ.

Published On : 05 Dec 2018   |  Reported By : media release


ಉಡುಪಿ.: ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ನವೆಂಬರ್ 16ರಿಂದ ಡಿಸೆಂಬರ್ 14ರ ತನಕ ಉಡುಪಿಯಲ್ಲಿ ಹಮ್ಮಿಕೊಂಡ ಮಾನವೀಯ ಮೌಲ್ಯಗಳು ಎಂಬ ವಿಷಯದಲ್ಲಿ ನಡೆಯುತ್ತಿರುವ ಅಭಿಯಾನದ ಪ್ರಚಾರ ವಾಹನಕ್ಕೆ ರಂಗ ಕರ್ಮಿ ನಾಗೇಶ್ ಉದ್ಯಾವರ ಇವರು ಉಡುಪಿ ಜಾಮಿಯಾ ಮಸೀದಿಯ ಆವರಣದಲ್ಲಿ ಶುಕ್ರವಾರ ಜುಮಾ ನಮಾಜಿನ ಬಳಿಕ ಚಾಲನೆಯನ್ನು ನೀಡಿದರು. ಸುಂದರ್ ಮಾಸ್ಟರ್ ಪ್ರಾಧ್ಯಾಪಕರು, ಸ.ಹಿ.ಪ್ರಾ.ಶಾಲೆ ಕೊಡವೂರು ಇವರು ಪ್ರವಾದಿ ಮುಹಮ್ಮದ್(ಸ)ರ ಬಗ್ಗೆ ಜಗತ್ತಿನ ಪ್ರಸಿದ್ಧ ವಿಧ್ವಾಂಸರು ಮತ್ತು ಚಿಂತಕರ ಅಭಿಪ್ರಾಯ ಸಂಗ್ರಹ ಪುಸ್ತಕವನ್ನು ಬಿಡುಗಡೆಗೊಳಿಸಿದರು.

 

ಅದೇ ರೀತಿ ಇನ್ನೊಂದು ಕೃತಿಯನ್ನು ಸಾಲಿಹಾತ್ ಸಮೂಹ ಸಂಸ್ಥೆಯ ಅಧ್ಯಕ್ಷರಾದ ಎಮ್. ಇಸ್ಮಾಯಿಲ್ ಸಾಹೆಬರು ಬಿಡುಗಡೆ ಗೊಳಿಸಿದರು. ಸಮಾರೋಪ ನುಡಿಗಳನ್ನು ವಲಯ ಸಂಚಾಲಕ ಅಬ್ದುಸ್ಸಲಾಮ್ ಉಪ್ಪಿನಂಗಡಿ ನೀಡಿದರು. ಮುಖ್ಯ ಅತಿಥಿಗಳಾಗಿ ಹಾಜಿ ಅಬುಲ್ಲಾ ಪರ್ಕಳ, ಸೆಯ್ಯದ್ ಯಾಸೀನ್,ಅಕ್ಬರ್ ಅಲಿ. ಅಥರುಲ್ಲಾ ಶರೀಫ್, ಇಕ್ಬಾಲ್ ಮುಲ್ಲಾ ಉಪಸ್ಥಿತರಿದ್ದರು.ಅನ್ವರ್ ಅಲಿ ಕಾಪು ಕಾರ್ಯಕ್ರಮವನ್ನು ನಿರೂಪಿಸಿದರು.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here